ಭಾರತದಲ್ಲಿನ್ನು ಪ್ಲಾಸ್ಟಿಕ್ ಕರೆನ್ಸಿ : ಆರ್‌ಬಿಐನಿಂದ ಮಹತ್ವದ ಘೋಷಣೆ, ಹಳೆ ನೋಟುಗಳನ್ನು ಏನ್ ಮಾಡ್ಬೇಕು ?
ಆರ್‌ಬಿಐ ಗವರ್ನರ್ ಸಂಜಯ್ ಮಲ್ಲೋತ್ರಾ ಅಧಿಕೃತ ಘೋಷಣೆ ಮಾಡಿದ್ದಾರೆ. ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳು ಬರುವ 2027-28ರ ಹಣಕಾಸು ವರ್ಷದಲ್ಲಿಯೇ ಸಾರ್ವಜನಿಕರ ಕೈಸೇರಲಿವೆ
ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲು ಸಜ್ಜಾಗಿದೆ. ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನೋಟುಗಳ ಜೀವಿತಾವಧಿಯನ್ನು ಗಣನೀಯವಾಗಿ ಹೆಚ್ಚಿಸುವ ಹಾಗೂ ನಕಲಿ ನೋಟುಗಳ ಹಾವಳಿಗೆ ಶಾಶ್ವತವಾಗಿ ಬ್ರೇಕ್ ಹಾಕುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಬ್ಯಾಂಕ್ ದೇಶದಲ್ಲಿ ಪಾಲಿಮರ್ ಅಂದರೆ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಬೃಹತ್ ಯೋಜನೆಯನ್ನು ಸಿದ್ಧಪಡಿಸಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಲೋತ್ರಾ ಅವರು ಈ ಕುರಿತು ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳು ಬರುವ 2027-28ರ ಹಣಕಾಸು ವರ್ಷದಲ್ಲಿಯೇ ಸಾರ್ವಜನಿಕರ ಕೈಸೇರಲಿವೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
ಆರಂಭಿಕ ಹಂತದಲ್ಲಿ, ದೈನಂದಿನ ವಹಿವಾಟಿನಲ್ಲಿ ಹೆಚ್ಚಾಗಿ ಬಳಸುವ ₹10 ಮತ್ತು ₹20 ಮುಖಬೆಲೆಯ ತಲಾ 100 ಕೋಟಿ ಪಾಲಿಮರ್ ನೋಟುಗಳನ್ನು ಆರ್‌ಬಿಐ ಪರಿಚಯಿಸಲಿದೆ. ಈ ಪ್ರಯೋಗದ ಯಶಸ್ಸಿನ ಆಧಾರದ ಮೇಲೆ ಹೆಚ್ಚಿನ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿರ್ಧರಿಸಲಾಗುತ್ತದೆ.
ಸಾಮಾನ್ಯ ಕಾಗದದ ನೋಟುಗಳಿಗಿಂತ ಪಾಲಿಮರ್ ನೋಟುಗಳು 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ, ಸುಲಭವಾಗಿ ಹರಿಯುವುದಿಲ್ಲ ಮತ್ತು ನೀರಿನಲ್ಲಿ ಹಾಳಾಗುವುದಿಲ್ಲ. ಆರಂಭಿಕ ವೆಚ್ಚ ಹೆಚ್ಚಿದ್ದರೂ, ದೀರ್ಘಾವಧಿಯಲ್ಲಿ ಮುದ್ರಣ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ನಕಲಿ ನೋಟುಗಳ ಹಾವಳಿಗೆ ತಡೆ ಹಾಕುತ್ತದೆ. ಇದಕ್ಕಾಗಿ ಆರ್‌ಬಿಐ ಜಾಗತಿಕ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ.
ಹಳೆ ಕಾಗದದ ನೋಟುಗಳ ಕಥೆ ಏನು? ಅವುಗಳನ್ನು ಏನು ಮಾಡಬೇಕು ?
ಪ್ಲಾಸ್ಟಿಕ್ ನೋಟುಗಳು ಮಾರುಕಟ್ಟೆಗೆ ಬಂದರೆ ನಮ್ಮ ಬಳಿ ಇರುವ ಕಾಗದದ ನೋಟುಗಳು ರದ್ದಾಗುತ್ತವೆಯೇ ಎಂಬ ಆತಂಕ ಅನೇಕರಲ್ಲಿದೆ. ಆದರೆ, ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
ಕಾಗದದ ನೋಟು ಚಲಾವಣೆ ಮುಂದುವರಿಕೆ: ಪ್ಲಾಸ್ಟಿಕ್ ನೋಟುಗಳ ಜೊತೆಯಲ್ಲೇ ಪ್ರಸ್ತುತ ಚಲಾವಣೆಯಲ್ಲಿರುವ ಹತ್ತಿ-ಕಾಗದ ಆಧಾರಿತ ನೋಟುಗಳು ಸಹ ಚಲಾವಣೆಯಲ್ಲಿ ಮುಂದುವರಿಯಲಿವೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಕಾಗದದ ನೋಟುಗಳ ಬದಲಾವಣೆ ಇಲ್ಲ: ಕಾಗದದ ಕರೆನ್ಸಿಯನ್ನು ಸಂಪೂರ್ಣವಾಗಿ ಪಾಲಿಮರ್ ನೋಟುಗಳೊಂದಿಗೆ ಬದಲಾಯಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ.
ಸಾರ್ವಜನಿಕರು ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಎಂದಿನಂತೆ ದೈನಂದಿನ ವಹಿವಾಟುಗಳಿಗೆ ಯಾವುದೇ ಅಡೆತಡೆಯಿಲ್ಲದೆ ಬಳಸಬಹುದು.
ಒಟ್ಟಿನಲ್ಲಿ ಭಾರತದಲ್ಲಿ ಬ್ಯಾಂಕ್ ನೋಟುಗಳ ನಿರ್ವಹಣಾ ವೆಚ್ಚವನ್ನು ಮತ್ತು ಪದೇ ಪದೇ ನೋಟು ಮುದ್ರಿಸುವ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಆರ್‌ಬಿಐ ಈ ಪೈಲಟ್ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದೆ. ಒಂದೊಮ್ಮೆ ಭಾರತದಲ್ಲಿ ಪ್ರಾಯೋಗಿಕ ಯಶಸ್ಸು ಸಿಕ್ಕರೆ ಮುಂದಿನ ದಿನಗಳಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನೋಟುಗಳು ಭಾರತದಲ್ಲಿ ರಾರಾಜಿಸಲಿವೆ.
Topics
ಸಂಬಂಧಿತ ಸುದ್ದಿಗಳು
business
UPI ಹಣ ವರ್ಗಾವಣೆಗೆ ಬೀಳಲಿದೆಯೇ ಚಾರ್ಜ್ ? ಯುಪಿಐ ಉಚಿತ ಸೇವೆಗೆ ಬ್ರೇಕ್
business
UPI New Rules: ಯುಪಿಐ ಬಳಕೆದಾರರಿಗೆ ಬಿಗ್ ಅಲರ್ಟ್ : ಸೈಬರ್ ವಂಚನೆ ತಡೆಗೆ NPCI ಹೊಸ ರೂಲ್ಸ್
business
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮ ಬದಲಾವಣೆ
business

