ಮೂರು ದಿನಗಳ ಬಳಿಕ ಮತ್ತೆ ಏರಿಕೆಯ ಹಾದಿಯಲ್ಲಿ ಬಂಗಾರ : ಬೆಳ್ಳಿ ದರ ಇಳಿಕೆ

ಭಾರೀ ದರ ಏರಿಕೆಯ ಮೂಲಕ ಎಲ್ಲರ ಹುಬ್ಬೇರಿಸಿದ್ದ ಬೆಳ್ಳಿಯ ದರದಲ್ಲಿ ಮತ್ತೊಮ್ಮೆ ಭಾರೀ ಕುಸಿತ ಕಂಡುಬಂದಿದೆ. ಒಂದೇ ದಿನದಲ್ಲಿ 1 ಕೆ.ಜಿ ಬೆಳ್ಳಿಯ ದರದಲ್ಲಿ ಬರೋಬ್ಬರಿ 20 ಸಾವಿರ ರೂಪಾಯಿ ಕುಸಿತ ಕಂಡುಬಂದಿದ್ದು 2 ಲಕ್ಷದ 80 ಸಾವಿರ ರೂಪಾಯಿಗೆ ಬಂದು ನಿಂತಿದೆ.

ಕಳೆದ ಮೂರು ದಿನಗಳಿಂದ ಇಳಿಕೆಯ ಹಾದಿಯಲ್ಲಿ ಸಾಗುವ ಮೂಲಕ ಚಿನ್ನಾಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೊಮ್ಮೆ ಏರಿಕೆ ಕಂಡುಬಂದಿದೆ. 24 ಕ್ಯಾರಟ್​ 1 ಗ್ರಾಂ ಚಿನ್ನದ ದರದಲ್ಲಿ 760 ರೂಪಾಯಿ ಏರಿಕೆ ಕಂಡಿದ್ದು, 1 ಲಕ್ಷದ 50 ಸಾವಿರದ 353 ರೂಪಾಯಿ ಆಗಿದೆ. 22 ಕ್ಯಾರಟ್​ 10 ಗ್ರಾಂ ಚಿನ್ನದ ದರದಲ್ಲಿಯೂ ಏರಿಕೆ ಕಂಡಿದ್ದು 1,41,100 ರೂಪಾಯಿ ಆಗಿದೆ.

ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಕೇಂದ್ರದಿಂದ ಗುಡ್​ನ್ಯೂಸ್​ : ವಿದೇಶಗಳಿಂದ ಚಿನ್ನ ತರುವವರಿಗೆ ಸುವರ್ಣಾವಕಾಶ

ಇತ್ತ ಅಮೆರಿಕ ಹಾಗೂ ಭಾರತದ ನಡುವೆ ನಡೆದ ವ್ಯಾಪಾರ ವ್ಯವಹಾರದ ಒಪ್ಪಂದದ ಬಳಿಕ ಡಾಲರ್​ ಎದುರು ರೂಪಾಯಿ ಮೌಲ್ಯ ಕೊಂಚ ಚೇತರಿಕೆ ಕಂಡಿದೆ. ಅಮೆರಿಕದ ಡಾಲರ್​ ಎದುರು ರೂಪಾಯಿ ಮೌಲ್ಯ 117 ಪೈಸೆ ಏರಿಕೆ ಕಂಡಿದ್ದು 90.32ಕ್ಕೆ ಬೆಲೆ ತಲುಪಿದೆ. ಭಾರತದಲ್ಲಿನ ಉತ್ಪನ್ನಗಳು ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದರೆ ಭಾರತಕ್ಕೆ ಮತ್ತಷ್ಟು ಲಾಭವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Exit mobile version