ಚಿನ್ನಾಭರಣ ಪ್ರಿಯರಿಗೆ ಕೇಂದ್ರದಿಂದ ಗುಡ್​ನ್ಯೂಸ್​ : ವಿದೇಶಗಳಿಂದ ಚಿನ್ನ ತರುವವರಿಗೆ ಸುವರ್ಣಾವಕಾಶ

ಬಂಗಾರದ ಲೋಹದ ದರದಲ್ಲಿ ಏರಿಕೆಯ ಬೆನ್ನಲ್ಲೇ ವಿದೇಶದಿಂದ ವಾಯು ಅಥವಾ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಚಿನ್ನಾಭರಣ ತರುವ ವಿಚಾರದಲ್ಲಿ ಬಿಗ್​ ರಿಲೀಫ್​ ನೀಡಿದೆ. 2016ರ ಹಳೆಯ ನಿಯಮಾವಳಿಗಳಲ್ಲಿ ತಿದ್ದುಪಡಿ ತರಲಾಗಿದ್ದು, ಬ್ಯಾಗೇಜ್​ ನಿಯಮ 2026ರನ್ನು ಜಾರಿಗೆ ತರಲಾಗಿದೆ.

ಕೇಂದ್ರ ಸರ್ಕಾರದ ಹೊಸ ಬಜೆಟ್​ ನಿಯಮದಿಂದಾಗಿ ದುಬೈ, ಸಿಂಗಾಪೂರ, ಥೈಲ್ಯಾಂಡ್​ಗಳಂತಹ ರಾಷ್ಟ್ರಗಳಿಂದ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಬೇಕು ಎಂದುಕೊಂಡಿದ್ದ ಆಭರಣ ಪ್ರಿಯರು ಖುಷ್​ ಆಗಿದ್ದಾರೆ. ಹೊಸ ಕಸ್ಟಮ್ಸ್ ಬ್ಯಾಗೇಜ್ ಡಿಕ್ಲರೇಶನ್ ಅಂಡ್ ಪ್ರೊಸೆಸಿಂಗ್ ರೆಗ್ಯುಲೇಷನ್ಸ್ ನಿಯಮ ಜಾರಿಗೆ ಬಂದಿದ್ದು, ವಿದೇಶದಿಂದ ಬರುವ ಪ್ರಯಾಣಿಕರು ಹೆಚ್ಚು ತೂಕದ ಆಭರಣಗಳನ್ನು ಟ್ಯಾಕ್ಸ್ ಫ್ರೀ ಆಗಿ ತರಬಹುದಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಅಥವಾ ಭಾರತೀಯ ಮೂಲದ ಪ್ರವಾಸಿಗರು ತಮ್ಮೊಂದಿಗೆ ತರುವ ಚಿನ್ನದ ಮೇಲೆ ಯಾವುದೇ ಕಸ್ಟಮ್ಸ್ ಸುಂಕವಿರುವುದಿಲ್ಲ.

ಈ ನಿಯಮಾವಳಿಗಳ ಅಡಿಯಲ್ಲಿ ಕೇವಲ ಚಿನ್ನದ ಆಭರಣಗಳನ್ನು ತರಲು ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಚಿನ್ನದ ಬಿಸ್ಕಟ್​ಗಳನ್ನು ಈ ನಿಯಮದ ಅಡಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮಾವಳಿಯ ಅಡಿಯಲ್ಲಿ ಪುರುಷರು 40 ಗ್ರಾಂವರೆಗೆ ಚಿನ್ನದ ಆಭರಣಗಳು ಹಾಗೂ ಮಹಿಳೆಯರು 20 ಗ್ರಾಂಗಳವರೆಗೆ ಚಿನ್ನದ ಆಭರಣಗಳನ್ನು ಟ್ಯಾಕ್ಸ್​ ಫ್ರೀ ಆಗಿ ತರಬಹುದಾಗಿದೆ. ಈ ಹಿಂದಿನ ನಿಯಮದ ಪ್ರಕಾರ ಪುರುಷರಿಗೆ 50 ಸಾವಿರ ರೂಪಾಯಿ ಹಾಗೂ ಮಹಿಳೆಯರಿಗೆ 1 ಲಕ್ಷ ರೂಪಾಯಿ ಮಿತಿ ನೀಡಲಾಗಿತ್ತು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories