businessಪ್ರಮುಖ ಸುದ್ದಿಗಳು

ಯುಪಿಐ ಶುಲ್ಕ ವರ್ತಕರಿಗೆ ಬಿಗ್‌ ರಿಲೀಫ್ : ಹಬ್ಬದ ಹೊತ್ತಲ್ಲಿ ಡಿಜಿಟಲ್‌ ಪಾವತಿ ಶುಲ್ಕಕ್ಕೆ ವಿನಾಯಿತಿ

ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಸಮಯಾವಕಾಶ ನೀಡಬೇಕು, ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ನಿಯಮ ಜಾರಿಯನ್ನು ಮುಂದೂಡುವಂತೆ ವರ್ತಕರು ಕೇಂದ್ರ ಸರ್ಕಾರಕ್ಕೆ ಕೋರಿಕೆ

By ರಶ್ಮಿ ಎಸ್. | Rashmi S

1 min read

WhatsAppPost
upi charges merchant relief festive season digital payment exemption
upi charges merchant relief festive season digital payment exemption

ನವದೆಹಲಿ : ಕೇಂದ್ರ ಸರಕಾರ ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ ಶುಲ್ಕ ನೀತಿಯನ್ನು ಎರಡೂವರೆ ತಿಂಗಳು ಮುಂದೂಡಿದೆ. ಹೀಗಾಗಿ ಹಬ್ಬದ ಹೊತ್ತಲ್ಲಿ ಯುಪಿಐ ಪಾವತಿ ಶುಲ್ಕ ರಹಿತವಾಗಿ ಸಾಗಲಿದೆ. ಇದು ವರ್ತರಿಗೆ, ಗ್ರಾಹಕರಿಗೆ ಭರ್ಜರಿ ಖುಷಿ ಕೊಟ್ಟಿದೆ.

ಈ ಹಿಂದೆ ಅಕ್ಟೋಬರ್ 15 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದ್ದ ನಿಯಮವನ್ನು ವ್ಯಾಪಾರಿಗಳ ಹಿತದೃಷ್ಟಿಯಿಂದ ಮುಂಬರುವ 2027ರ ಜನವರಿ 1 ಕ್ಕೆ ಮುಂದೂಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, 2000 ರೂಪಾಯಿಗಳಿಗಿಂತ ಮೇಲ್ಪಟ್ಟ ದೊಡ್ಡ ಮೊತ್ತದ ಯುಪಿಐ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕವನ್ನು ವಿಧಿಸಲು ಸರ್ಕಾರ ನಿರ್ಧರಿಸಿತ್ತು. ಈ ವ್ಯವಸ್ಥೆಯನ್ನು ಆರ್ಥಿಕವಾಗಿ ಹೆಚ್ಚು ಸುಸ್ಥಿರ ಹಾಗೂ ಕಾರ್ಯಸಾಧು ಮಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿತ್ತು.

ಆದರೆ ಪ್ರಸ್ತುತ ದೇಶದಲ್ಲಿ ಹಬ್ಬಗಳ ಸೀಸನ್ ಆರಂಭವಾಗುತ್ತಿರುವುದರಿಂದ, ಈ ಅವಧಿಯಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ಪಾವತಿಗಳು ಗಣನೀಯವಾಗಿ ಹೆಚ್ಚಾಗುತ್ತವೆ. ಹೊಸ ಶುಲ್ಕ ನೀತಿಯನ್ನು ಒಂದೊಮ್ಮೆ ಜಾರಿಗೊಳಿಸಿದ್ರೆ, ವಹಿವಾಟುಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಲಿದೆ ಎಂದು ವರ್ತಕರು ಆತಂಕವನ್ನು ವ್ಯಕ್ತಪಡಿಸಿದ್ದರು.

ಹೀಗಾಗಿ ಹಬ್ಬದ ಋತುವಿನಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಸಮಯಾವಕಾಶ ನೀಡಬೇಕು ಮತ್ತು ಯಾವುದೇ ಗೊಂದಲಗಳು ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ನಿಯಮ ಜಾರಿಯನ್ನು ಮುಂದೂಡುವಂತೆ ವರ್ತಕರು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು.

ವರ್ತಕರ ಈ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸರ್ಕಾರ, ಹೊಸ ಗಡುವನ್ನು ವಿಸ್ತರಿಸಲು ಒಲವು ತೋರಿದೆ. ಸದ್ಯದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

ಈ ಪ್ರಸ್ತಾವಿತ ನಿಯಮವು ಕೇವಲ ದೊಡ್ಡ ಮೊತ್ತದ ಪಾವತಿಗಳಿಗೆ ಮಾತ್ರ ಅನ್ವಯಿಸಲಿದ್ದು, ಸಾಮಾನ್ಯ ಜನಸಾಮಾನ್ಯರ ಸಣ್ಣ ಪುಟ್ಟ ದಿನಬಳಕೆಯ ಯುಪಿಐ ವಹಿವಾಟುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನಲಾಗಿದೆ.

Topics

ಸಂಬಂಧಿತ ಸುದ್ದಿಗಳು