ಶಾಲಾ ದಾಖಲೆಗಳಲ್ಲಿ ಹೆಸರು ಬದಲಾವಣೆ ಇನ್ನು ಸುಲಭ : ಹೈಕೋರ್ಟ್ ಮಹತ್ವದ ಆದೇಶ
ಹೈಕೋರ್ಟ್, ವಿದ್ಯಾರ್ಥಿನಿಯ ಹೊಸ ಹೆಸರನ್ನು ಶಾಲಾ ದಾಖಲೆಗಳಲ್ಲಿ ತಕ್ಷಣವೇ ಸೇರಿಸುವಂತೆ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಶಾಲೆಗೆ ಕಡ್ಡಾಯ ನಿರ್ದೇಶನ ನೀಡಿದೆ.
By Kannada News Next Admin · Administrator
1 min read
ಬೆಂಗಳೂರು : ಶಾಲಾ ದಾಖಲೆಗಳಲ್ಲಿ ಇರುವ ಹೆಸರು ಬದಲಾಯಿಸುವುದು ಇನ್ನಷ್ಟು ಸುಲಭವಾಗಲಿದೆ. ದಾಖಲೆಗಳಲ್ಲಿನ ಹೆಸರು ಬದಲಾಯಿಸೋದಕ್ಕೆ ಕರ್ನಾಟಕ ಹೈಕೋರ್ಟ್ ಅವಕಾಶ ಕಲ್ಪಿಸಿದೆ. ಈ ಕರಿತು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಹೆಸರು ಬದಲಾವಣೆ ಮಾಡಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕಾನೂನುಬದ್ದ ನಾಗರಿಕ ಹಕ್ಕು ಎಂದು ಸ್ಪಷ್ಟಪಡಿಸಿದೆ.
ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ವಿದ್ಯಾರ್ಥಿನಿಯ ಹೊಸ ಹೆಸರನ್ನು ಶಾಲಾ ದಾಖಲೆಗಳಲ್ಲಿ ತಕ್ಷಣವೇ ಸೇರಿಸುವಂತೆ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಶಾಲೆಗೆ ಕಡ್ಡಾಯ ನಿರ್ದೇಶನ ನೀಡಿದೆ.
ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಬೆಂಗಳೂರಿನ ನಿವಾಸಿಯೊಬ್ಬರು ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯ ಹಿನ್ನೆಲೆಯಲ್ಲಿ ತಮ್ಮ ಪುತ್ರಿಯ ಹೆಸರನ್ನು ಲಕ್ಷ್ಮಿ ಎನ್. ನಿಂದ ವೀಣಾ ಎನ್. ಎಂದು ಬದಲಾಯಿಸಲು ಕೋರಿದ್ದರು.
ಆದರೆ, ಹೊಸ ಹೆಸರಿಗೆ ಯಾವುದೇ ಹಳೆಯ ಪೂರಕ ದಾಖಲೆಗಳಿಲ್ಲ ಎಂಬ ತಾಂತ್ರಿಕ ಕಾರಣವನ್ನು ಮುನ್ನಿಟ್ಟುಕೊಂಡು ವಿಚಾರಣಾ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಾಲಕಿಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ. ನ್ಯಾಯಪೀಠವು ತನ್ನ ಆದೇಶದಲ್ಲಿ, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ವಿಶಿಷ್ಟ ಹೆಸರಿನಿಂದ ಗುರುತಿಸಿಕೊಳ್ಳಲು ಬಯಸುವುದು ಸ್ವಾಭಾವಿಕ ಮತ್ತು ಅದು ನಾಗರಿಕ ಹಕ್ಕಿಗೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿದೆ.
ಪೋಷಕರು ಮೊದಲಿದ್ದ ಹೆಸರು ತಪ್ಪಾಗಿದೆ ಎಂದು ವಾದಿಸುತ್ತಿಲ್ಲ, ಬದಲಿಗೆ ಹೊಸ ಹೆಸರನ್ನು ಇಡಲು ಇಚ್ಛಿಸುತ್ತಿದ್ದಾರೆ ಅಷ್ಟೇ. ಇಂತಹ ಸಂದರ್ಭದಲ್ಲಿ ಹೊಸ ಹೆಸರಿಗೆ ಹಳೆಯ ದಾಖಲೆಗಳನ್ನು ಒದಗಿಸುವಂತೆ ಕೇಳುವುದು ಸಮರ್ಥನೀಯವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜ್ಯ ಸರ್ಕಾರದ ಪ್ರಸ್ತುತ ನಿಯಮಗಳ ಅನ್ವಯ, ಯಾವುದೇ ಶಾಲಾ ಮಂಡಳಿಯು ವಿದ್ಯಾರ್ಥಿ ಅಥವಾ ಪೋಷಕರ ಹೆಸರನ್ನು ನೇರವಾಗಿ ತಿದ್ದುಪಡಿ ಮಾಡಲು ಸ್ವತಂತ್ರ ಅಧಿಕಾರ ಹೊಂದಿರುವುದಿಲ್ಲ. ಅದಕ್ಕಾಗಿ ಸಾರ್ವಜನಿಕರು ಸಕ್ಷಮ ಸಿವಿಲ್ ನ್ಯಾಯಾಲಯದಿಂದಲೇ ಆದೇಶವನ್ನು ಪಡೆಯುವುದು ಕಡ್ಡಾಯವಾಗಿದೆ. ಹೈಕೋರ್ಟ್‌ನ ಈ ಐತಿಹಾಸಿಕ ತೀರ್ಪು ಶಾಲಾ ದಾಖಲೆಗಳಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ನೆರವಾಗಲಿದೆ.
Topics
ಸಂಬಂಧಿತ ಸುದ್ದಿಗಳು
education
ವಿದ್ಯಾರ್ಥಿಗಳೇ ಗಮನಿಸಿ : SSLC, PUC ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಆಕ್ಷೇಪಣೆಗೆ ಅಕ್ಟೋಬರ್ 22 ಕೊನೆ
education
ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ :ಸರ್ಕಾರಿ ಕಾಲೇಜುಗಳಲ್ಲೇ ಸಿಇಟಿ, ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
education
School Holiday: ಶಾಲಾ ಮಕ್ಕಳ ದಸರಾ ರಜೆ ಯಾವಾಗ ಆರಂಭ ?
education

