businessಪ್ರಮುಖ ಸುದ್ದಿಗಳು

ಮಹಿಳೆಯರಿಗೆ ಉಚಿತ ಗ್ಯಾಸ್‌ ಸಂಪರ್ಕ : ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಆಹ್ವಾನ

ಮಹಿಳೆಯರು ಉಚಿತವಾಗಿ ಮನೆಗೆ ಎಲ್‌ಪಿಜಿ (LPG) ಗ್ಯಾಸ್ ಸಂಪರ್ಕವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಸಿಲಿಂಡರ್‌ ರಿಫಿಲ್‌ (Refill) ಮೇಲೆ ಆಕರ್ಷಕ ಸಬ್ಸಿಡಿ ಸೌಲಭ್ಯ

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Ujwala Yojana free gas connection for women pmuy apply online
Ujwala Yojana free gas connection for women pmuy apply online

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರು ಯಾವುದೇ ಶುಲ್ಕವನ್ನು ಪಾವತಿ ಮಾಡದೆ ಉಚಿತವಾಗಿ ಮನೆಗೆ ಎಲ್‌ಪಿಜಿ (LPG) ಗ್ಯಾಸ್ ಸಂಪರ್ಕವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಸಿಲಿಂಡರ್‌ ರಿಫಿಲ್‌ (Refill) ಮೇಲೆ ಆಕರ್ಷಕ ಸಬ್ಸಿಡಿ ಸೌಲಭ್ಯವನ್ನೂ ಪಡೆಯಬಹುದಾಗಿದೆ.

ಏನಿದು ಪ್ರಧಾನಮಂತ್ರಿ ಉಜ್ವಲ ಯೋಜನೆ

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ನೀವು ಹೊಸದಾಗಿ ಗ್ಯಾಸ್‌ ಕೆನೆಕ್ಷನ್ಸ್‌ ಪಡೆಯಬಹುದು. ಅದ್ರಲ್ಲೂ ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಮನೆಗೆ ಗ್ಯಾಸ್‌ ಸಿಲಿಂಡರ್‌ ಲಭ್ಯವಾಗಲಿದೆ. ಈ ಯೋಜನೆಯ ಮುಖ್ಯಾಂಶಗಳು

  • ಸಬ್ಸಿಡಿ ಸೌಲಭ್ಯ: ಸಿಲಿಂಡರ್ ರಿಫಿಲ್ ಮಾಡುವಾಗ ಸಬ್ಸಿಡಿ ಹಣ ನೇರವಾಗಿ ಖಾತೆಗೆ ಜಮೆ ಆಗಲಿದೆ.

  • ಅರ್ಹತೆಗಳು: ಬಡತನ ರೇಖೆಗಿಂತ ಕೆಳಗೆ ಇರುವ (BPL) ಕುಟುಂಬಗಳು ಇದರ ಲಾಭವನ್ನು ಪಡೆಯಬಹುದಾಗಿದೆ.

ಉಜ್ವಲ ಯೋಜನೆಗೆ ಅರ್ಹತೆಗಳೇನು ?

  • ಉಜ್ವಲ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಯಾವೆಲ್ಲಾ ಮಾನದಂಡಗಳಿವೆ ಅನ್ನೋದನ್ನು ನೋಡೋದಾದ್ರೆ.

  • ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯ ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು.

  • ಬಿಪಿಎಲ್ (BPL) ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಗೆ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವಿದೆ.

  • ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬಸ್ಥರು ಇದುವರೆಗೆ ಯಾವುದೇ ಸದಸ್ಯರ ಹೆಸರಲ್ಲಿ ಎಲ್‌ಪಿಜಿ ಗ್ಯಾಸ್‌ ಸಂಪರ್ಕ ಹೊಂದಿರಬಾರದು.

  • ಸರಕಾರದ ನಿಯಮಗಳಿಗೆ ಅನುಗುಣವಾಗಿ ಆದಾಯದ ಮಿತಿಯ ಒಳಗೆ ಇರುವುದು ಕಡ್ಡಾಯ.

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೇನು ?

  • ಆಧಾರ್ ಕಾರ್ಡ್ (Aadhaar Card)

  • ರೇಷನ್ ಕಾರ್ಡ್ (Ration Card)

  • ಸಕ್ರಿಯ ಬ್ಯಾಂಕ್ ಖಾತೆ ಪಾಸ್‌ಬುಕ್ (Aadhaar Seeded Bank Account)

  • ವಿಳಾಸದ ಧೃಡೀಕರಣ ಪತ್ರ

  • ಭರ್ತಿ ಮಾಡಿದ KYC ನಮೂನೆ ಹಾಗೂ ಡಿಕ್ಲರೇಷನ್ ಫಾರ್ಮ್

ಉಜ್ವಲ ಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ?

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್‌ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.

  • ವೆಬ್‌ಸೈಟ್‌ನ ಮುಖಪುಟದಲ್ಲಿ ಇರುವ Online Portal ಆಯ್ಕೆಯ ಮೇಲೆ ಕ್ಲಿಕ್‌ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

  • ನೀವು ಯಾವ ಗ್ಯಾಸ್‌ ಕಂಪೆನಿಯಿಂದ Indane, Bharatgas ಅಥವಾ HP Gas) ಸಂಪರ್ಕ ಪಡೆಯುತ್ತೀರೋ ಆ ಕಂಪೆನಿಯ ಹೆಸರನ್ನು ಆಯ್ಕೆ ಮಾಡಿ.

  • ನಂತರ ಆಯಾಯ ತೈಲ ಕಂಪೆನಿಯ ಅಧಿಕೃತ ಪೋರ್ಟಲ್‌ಗೆ ತೆರಳಿ New LPG Connection ಆಯ್ಕೆಯನ್ನು ಭರ್ತಿ ಮಾಡಿ.

  • ಕಳಗೆ ತಿಳಿಸಲಾಗಿರುವ ಎಲ್ಲಾ ಅಗತ್ಯವಾಗಿರುವ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ.

ಕೊನೆಯದಾಗಿ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಅರ್ಜಿಯನ್ನು ಸಲ್ಲಿಕೆ ಮಾಡಿ. ನಂತರ ನಿಮ್ಮ ದಾಖಲೆಗಳನ್ನು ಗ್ಯಾಸ್‌ ವಿತರಕರು ಅರ್ಜಿಯನ್ನು ಪರಿಶೀಲಿಸಿದ ಬಳಿಕ ಯೋಜನೆಗೆ ಅನುಮೋದನೆಯನ್ನು ನೀಡುತ್ತಾರೆ.

ಉಜ್ವಲ ಯೋಜನೆ ಸಬ್ಸಿಡಿ ಕುರಿತ ಮಾಹಿತಿ

ಉಜ್ವಲ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಸಿಲಿಂಡರ್‌ ರಿಫಿಲ್‌ ಮಾಡುವಾಗ ಸಿಲಿಂಡರ್‌ಗೆ ತಲಾ 300 ರೂಪಾಯಿಯವರೆಗೆ ಸಬ್ಸಿಡಿ ದೊರೆಯುತ್ತದೆ. ಒಂದು ವರ್ಷದಲ್ಲಿ ಗರಿಷ್ಠ ನಾಲ್ಕು ಸಿಲಿಂಡರ್‌ವರೆಗೆ ಸಬ್ಸಿಡಿ ಹಣ ಪಡೆಯೋದಕ್ಕೆ ಅರ್ಹತೆ ಸಿಗಲಿದೆ.

ಒಂದೊಮ್ಮೆ ಎಲ್‌ಪಿಜಿ ಗ್ಯಾಸ್‌ ಸಂಪರ್ಕ ಹೊಂದಿಲ್ಲದ ಅರ್ಹ ಮಹಿಳೆಯರು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಜ್ವಲ ಯೋಜನೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Topics

ಸಂಬಂಧಿತ ಸುದ್ದಿಗಳು