ಯುಪಿಐ ಬಳಕೆದಾರರಿಗೆ ಬಿಗ್ ರಿಲೀಫ್: ಯುಪಿಐ ಶುಲ್ಕದ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ, ಸಾಮಾನ್ಯ ಗ್ರಾಹಕರು ದೈನಂದಿನ ಜೀವನದಲ್ಲಿ ಬಳಸುವ ಬಹುತೇಕ ಪ್ರಮುಖ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿರಲಿವೆ

By ರಶ್ಮಿ ಎಸ್. | Rashmi S

1 min read

WhatsAppPost
upi transaction fee confusion cleared govt update
upi transaction fee confusion cleared govt update

ದೇಶದಲ್ಲಿ ಯುಪಿಐ ಡಿಜಿಟಲ್ ಪಾವತಿಗಳ ಮೇಲಿನ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ವಿಧಿಸುವ ಕುರಿತು ಸಾರ್ವಜನಿಕರಲ್ಲಿ ಹರಡಿದ್ದ ತಪ್ಪು ಕಲ್ಪನೆ ಮತ್ತು ಆತಂಕಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಎನ್‌ಪಿಸಿಐ ಹೊಸ ನಿಯಮಾವಳಿಗಳ ಮೂಲಕ ತೆರೆ ಎಳೆದಿವೆ. ಮುಂಬರುವ ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ, ಸಾಮಾನ್ಯ ಗ್ರಾಹಕರು ದೈನಂದಿನ ಜೀವನದಲ್ಲಿ ಬಳಸುವ ಬಹುತೇಕ ಪ್ರಮುಖ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿರಲಿವೆ. ಹೀಗಾಗಿ ಸ್ಮಾರ್ಟ್‌ಫೋನ್ ಬಳಕೆದಾರರು ಡಿಜಿಟಲ್ ಪಾವತಿಗಾಗಿ ಒಂದು ರೂಪಾಯಿಯನ್ನೂ ಹೆಚ್ಚುವರಿಯಾಗಿ ಭರಿಸಬೇಕಾದ ಅಗತ್ಯವಿರುವುದಿಲ್ಲ.

ಹೊಸ ನಿಯಮಾವಳಿಗಳ ಪ್ರಕಾರ, ವ್ಯಾಪಾರಿಗಳಿಗೆ ಪಾವತಿಸುವ ₹2,000 ಒಳಗಿನ ಯಾವುದೇ ಸಣ್ಣ ಮೊತ್ತದ ಪಾವತಿಗಳಿಗೆ ಯಾವುದೇ ರೀತಿಯ ಕಡಿತ ಇರುವುದಿಲ್ಲ. ದಿನಸಿ, ಚಹಾ ಅಂಗಡಿಗಳಂತಹ ಸಣ್ಣ ಉದ್ಯಮಿಗಳ ಜೊತೆ ತಿಂಗಳಿಗೆ ನಡೆಯುವ 1 ಲಕ್ಷ ರೂಪಾಯಿವರೆಗಿನ ವಹಿವಾಟುಗಳು ಮುಂಚಿನಂತೆಯೇ ಮುಂದುವರಿಯಲಿವೆ. ಇದರೊಂದಿಗೆ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರ ವೈಯಕ್ತಿಕ ಖಾತೆಗೆ ಹಣ ಕಳುಹಿಸುವ ಪ್ರಕ್ರಿಯೆ, ಸರ್ಕಾರದ ತೆರಿಗೆ ಮತ್ತು ಚಲನ್ ಪಾವತಿಗಳು ಹಾಗೂ ಮ್ಯೂಚುವಲ್ ಫಂಡ್ ಎಸ್‌ಐಪಿ ಮತ್ತು ಒಟಿಟಿ ಚಂದಾದಾರಿಕೆಗಳಿಗಾಗಿ ಸೆಟ್ ಮಾಡಲಾದ ಆಟೋ-ಪೇ ಸೇವೆಗಳಿಗೂ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ.

ಇನ್ನು ದೊಡ್ಡ ಮಳಿಗೆಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆದಾಗ ಬ್ಯಾಂಕುಗಳು ಮತ್ತು ಆಪರೇಟರ್‌ಗಳು ಎಂಡಿಆರ್ ಶುಲ್ಕವನ್ನು ವಿಧಿಸುತ್ತವೆಯಾದರೂ, ಅದನ್ನು ಕೇವಲ ವ್ಯಾಪಾರಿಗಳಿಂದ ಮಾತ್ರ ವಸೂಲಿ ಮಾಡಬೇಕೇ ಹೊರತು ಗ್ರಾಹಕರ ಮೇಲೆ ಹೇರುವಂತಿಲ್ಲ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಗ್ರಾಹಕರಿಂದ ಬಲವಂತವಾಗಿ ಹೆಚ್ಚುವರಿ ಪಾವತಿ ಪಡಕೊಳ್ಳುವುದು ಕಾನೂನುಬಾಹಿರವಾಗಿದ್ದು, ನಿಯಮ ಮೀರುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಈ ಕ್ರಮವು ದೇಶದಲ್ಲಿ ನಗದು ರಹಿತ ವ್ಯವಸ್ಥೆಯನ್ನು ಮತ್ತಷ್ಟು ಉತ್ತೇಜಿಸಲಿದೆ.

Topics

ಸಂಬಂಧಿತ ಸುದ್ದಿಗಳು