ಪ್ರಕೃತಿಯ ಮಡಿಲಲ್ಲಿ ಶಾಂತಿ ಹುಡುಕುತ್ತಿರುವ ನಟಿ ಕೃಷಿ ತಾಪಂಡ

ವೈಶಾಖ್ ನಿಧನದ ಬಳಿಕ ಈಗಾಗಲೇ ಒಂದು ಭಾವುಕ ಪೋಸ್ಟ್ ಹಾಕಿದ್ದ ಕೃಷಿ, ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಅತ್ಯಂತ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ (Krishi Thapanda) ಸದ್ಯ ತೀವ್ರ ವೈಯಕ್ತಿಕ ದುಃಖದಲ್ಲಿದ್ದಾರೆ. ಅವರ ಆಪ್ತ ಗೆಳೆಯ ವೈಶಾಖ್ (Vaishak) ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಆಘಾತದಿಂದ ನಟಿ ಇನ್ನೂ ಹೊರಬಂದಿಲ್ಲ. ವೈಶಾಖ್ ನಿಧನದ ಬಳಿಕ ಈಗಾಗಲೇ ಒಂದು ಭಾವುಕ ಪೋಸ್ಟ್ ಹಾಕಿದ್ದ ಕೃಷಿ, ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಅತ್ಯಂತ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಕೃಷಿ ತಾಪಂಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಫೋಟೋಗಳಿರುವ ಒಂದು ಸುಂದರ ಕೊಲಾಜ್  ಹಂಚಿಕೊಂಡಿದ್ದಾರೆ. ಅದರಲ್ಲಿ ತಾವು ಅನುಭವಿಸುತ್ತಿರುವ ಅಪಾರ ದುಃಖ, ಕಣ್ಣೀರು ಹಾಗೂ ಹತಾಶೆಯನ್ನು ಪ್ರತಿಬಿಂಬಿಸುವ ಫೋಟೋಗಳಿದ್ದರೆ, ಮತ್ತೊಂದೆಡೆ ಮನಸ್ಸಿಗೆ ಕೊಂಚ ಶಾಂತಿ ನೀಡುವಂತಹ ಪ್ರಕೃತಿಯ (Nature) ಸುಂದರ ದೃಶ್ಯಗಳ ಚಿತ್ರಗಳಿವೆ. ಗೆಳೆಯನ ಅಗಲಿಕೆಯಿಂದ ಕಂಗೆಟ್ಟಿರುವ ನಟಿ, ಮನಸ್ಸಿನ ನೆಮ್ಮದಿಗಾಗಿ ಪ್ರಕೃತಿಯ ಮೊರೆ ಹೋಗಿರುವುದು ಈ ಫೋಟೋಗಳಲ್ಲಿ ಎದ್ದು ಕಾಣುತ್ತಿದೆ.

insta post

“ಕೆಲವೊಮ್ಮೆ ಬದುಕು ಅತ್ಯಂತ ಕ್ರೂರವಾಗಿ ವರ್ತಿಸುತ್ತದೆ. ನಿನ್ನ ನೆನಪುಗಳು ಕ್ಷಣ ಕ್ಷಣಕ್ಕೂ ಕಾಡುತ್ತಿವೆ. ಈ ದುಃಖದಿಂದ ಹೊರಬರಲು ಪ್ರಕೃತಿಯ ಮಡಿಲಲ್ಲಿ ಶಾಂತಿ ಹುಡುಕಲು ಪ್ರಯತ್ನಿಸುತ್ತಿದ್ದೇನೆ. ಆದರೆ ನಿನ್ನ ಸ್ಥಾನವನ್ನು ತುಂಬಲು ಯಾವುದರಿಂದಲೂ ಸಾಧ್ಯವಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ…” ಎಂದು ಕೃಷಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಆಪ್ತ ಸ್ನೇಹಿತನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಕೃಷಿ ಅವರ ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರು ನಟಿಗೆ ಧೈರ್ಯ ತುಂಬುತ್ತಿದ್ದಾರೆ.

Exit mobile version