ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನ : ಬಹುನಿರೀಕ್ಷಿತ ಟಾಕ್ಸಿಕ್​ ಸಿನಿಮಾ ಟೀಸರ್​ ರಿಲೀಸ್​

Rocking Star Yash Toxic Teaser : ಇಂದು ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನ. ನೆಚ್ಚಿನ ನಟನ ಜನ್ಮದಿನಾಚರಣೆಯನ್ನು ಭರ್ಜರಿಯಾಗಿ ಆಚರಿಸಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಬಾರಿಯೂ ನಟ ಯಶ್​ ನಿರಾಶೆ ಮೂಡಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳಿಗೆ ಸಂದೇಶ ನೀಡಿರುವ ನಟ ಯಶ್​ ಜನ್ಮದಿನಕ್ಕೆ ನಾನು ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಈ ಬಾರಿಯೂ ನೆಚ್ಚಿನ ನಟನ ಅದ್ಧೂರಿ ಜನ್ಮದಿನಾಚರಣೆ ಯಶ್​ ಅಭಿಮಾನಿಗಳ ಪಾಲಿಗೆ ಕನಸಾಗಿಯೇ ಉಳಿದಿದೆ.

ಆದರೆ ಯಶ್​ ಅಭಿಮಾನಿಗಳಿಗೆ ಹಬ್ಬದೂಟ ಎಂಬಂತೆ ಬಹುನಿರೀಕ್ಷಿತ ಟಾಕ್ಸಿಕ್​ (Toxic Teaser) ಸಿನಿಮಾದ ಟೀಸರ್​ ಇಂದು ರಿಲೀಸ್​ ಆಗಿದೆ. ಡ್ಯಾಡೀಸ್​ ಹೋಮ್​​ನಲ್ಲಿ ಸಖತ್​ ಡ್ಯಾಶಿಂಗ್​ ಆಗಿ ನಟ ಯಶ್​ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಾಣದಂತಹ ಹೊಸ ಅವತಾರದಲ್ಲಿ ನಟ ಯಶ್​ರನ್ನು ಕಂಡ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಯಶ್​ ಮಾಸ್​ ಅವತಾರ ಪ್ರೇಕ್ಷಕನ ಮೆಚ್ಚುಗೆಗೆ ಪಾತ್ರವಾಗಿದೆ. ಯಶ್​ ತಮ್ಮ 40ನೇ ವರ್ಷದ ಜನ್ಮದಿನಕ್ಕೆ ಅಭಿಮಾನಿಗಳಿಗೆ ಬಹುದೊಡ್ಡ ಉಡುಗೊರೆಯನ್ನೇ ನೀಡಿದ್ದಾರೆ.

ನಿನ್ನೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಜಿಎಫ್​ ನಟ ಯಶ್​, ಕಳೆದ ಕೆಲವು ವರ್ಷಗಳಿಂದ ನನ್ನನ್ನು ನೀವೆಲ್ಲ ಭೇಟಿಯಾಗಬೇಕೆಂದು ಕಾಯುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ನಾನು ಕೂಡ ಅಷ್ಟೇ ಕಾತುರದಿಂದ ನಿಮ್ಮನ್ನೆಲ್ಲ ಭೇಟಿಯಾಗಲು ಕಾಯುತ್ತಿದ್ದೇನೆ.ಈ ವರ್ಷ ನಿಮ್ಮನ್ನೆಲ್ಲ ಭೇಟಿಯಾಗಬೇಕು ಎಂದು ನಾನು ಬಯಸಿದ್ದೆ. ಆದರೆ ಇದೇ ಮಾರ್ಚ್ 19ರಂದು ಟಾಕ್ಸಿಕ್​ ಸಿನಿಮಾ ತೆರೆಕಾಣಬೇಕಾಗಿರುವುದರಿಂದ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ. ಹೀಗಾಗಿ ನಿಮ್ಮನ್ನೆಲ್ಲ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆದರೆ ಶೀಘ್ರದಲ್ಲೇ ನಿಮ್ಮನ್ನು ದೊಡ್ಡ ರೀತಿಯಲ್ಲಿಭೇಟಿಯಾಗಲಿದ್ದೇನೆ. ನೀವು ಕಳುಹಿಸಿದ ಎಲ್ಲಾ ಶುಭ ಹಾರೈಕೆಗಳನ್ನು ನಾನು ನೋಡುತ್ತಿರುವೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಕಿರುತೆರೆಯಲ್ಲಿ ಹೂವಿನ ಬಾಣದಂತೆ ನಿತ್ಯಶ್ರೀ! ಯಾವ ಚಾನಲ್‌ನಲ್ಲಿ?

ಮೂಲಗಳ ಪ್ರಕಾರ ನಟ ಯಶ್​ (Rocking Star Yash) ತಮ್ಮ ಜನ್ಮದಿನಾಚರಣೆಗೆಂದು ಗೋವಾಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿಯೇ ಬರ್ತಡೇ ಆಚರಿಸಿಕೊಂಡಿದ್ದಾರೆ ಎನ್ನಲಾಗಿದೆ. ಟಾಕ್ಸಿಕ್​ ಸಿನಿಮಾ ಪೋಸ್ಟ್​ ಪ್ರಾಡಕ್ಷನ್​ ಕೆಲಸದಲ್ಲಿ ಸದ್ಯ ನಟ ಯಶ್​ ಬ್ಯುಸಿಯಾಗಿದ್ದು ಬೆಳ್ಳಿ ತೆರೆಗೆ ಎಂಟ್ರಿಕೊಟ್ಟ ಬಳಿಕವೇ ಜನರ ಜೊತೆ ಬೆರೆಯುವ ನಿರ್ಧಾರಕ್ಕೆ ನಟ ಯಶ್​ ಬಂದಿದ್ದಾರೆ ಎನ್ನಲಾಗಿದೆ.

Exit mobile version