Jay Shah: ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಐಸಿಸಿ ಅಧ್ಯಕ್ಷ ಜಯ್ ಶಾ ಖಡಕ್ ಸಂದೇಶ!

ICC T20 World Cup: ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿ ಪಾಕಿಸ್ತಾನ ಕೂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಆದರೆ, ನಂತರ ತನ್ನ ನಿರ್ಧಾರವನ್ನು ಬದಲಿಸಿ ಪಂದ್ಯ ಆಡಿತ್ತು.

ಮುಂಬೈ: 2026ರ ಟಿ20 ವಿಶ್ವಕಪ್ ಆರಂಭಕ್ಕೂ (T20 World Cup) ಮುನ್ನ ಪಾಕಿಸ್ತಾನ (Pakistan Cricket Team) ಮತ್ತು ಬಾಂಗ್ಲಾದೇಶ ತಂಡಗಳು (Bangladesh Cricket Team)  ನಡೆಸಿದ ‘ಬಹಿಷ್ಕಾರ’ದ ನಾಟಕದ ಕುರಿತು ಐಸಿಸಿ ಅಧ್ಯಕ್ಷ ಜಯ್ ಶಾ (ICC President Jay Shah) ಈಗ ಮೌನ ಮುರಿದಿದ್ದಾರೆ. “ಯಾವುದೇ ಒಂದು ತಂಡವು ಸಂಸ್ಥೆಗಿಂತ (ICC) ದೊಡ್ಡದಲ್ಲ” ಎಂದು ಅವರು ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಶ್ವಕಪ್ ಯಶಸ್ಸಿನ ಕುರಿತು ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡರು.

ದಾಖಲೆ ಬರೆದ ವಿಶ್ವಕಪ್:

ಈ ಬಾರಿಯ ವಿಶ್ವಕಪ್ ವೀಕ್ಷಣೆಯಲ್ಲಿ ಹೊಸ ಇತಿಹಾಸ ಬರೆದಿದೆ ಎಂದು ಜಯ್ ಶಾ ತಿಳಿಸಿದರು.

ಟೀಮ್ ಇಂಡಿಯಾಗೆ ಕಿವಿಮಾತು:

ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಗೆ ಸಂದೇಶ ನೀಡಿದ ಅವರು, “ಉತ್ತುಂಗದಿಂದ ಕೆಳಕ್ಕೆ ಬೀಳಲು ಕೆಲವೇ ತಿಂಗಳು ಸಾಕು, ಆದರೆ ಕೆಳಗಿನಿಂದ ಮೇಲೆ ಏರಲು ವರ್ಷಗಳೇ ಬೇಕು. ಕಠಿಣ ಪರಿಶ್ರಮ ಮುಂದುವರಿಸಿ. ನಾವು 2028ರ ಒಲಿಂಪಿಕ್ಸ್ ಮಾತ್ರವಲ್ಲದೆ, 2031 ಮತ್ತು 2036ರವರೆಗಿನ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು,” ಎಂದರು.

ಎಲ್‌ಪಿಜಿ vs ಪಿಎನ್‌ಜಿ: ಸಿಲಿಂಡರ್ ಕೊರತೆ ಇದ್ರೂ ಪೈಪ್ ಗ್ಯಾಸ್‌ಗೆ ಸಮಸ್ಯೆಯಿಲ್ಲ ಏಕೆ?

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂಬುದು ಕ್ರೀಡಾಭಿಮಾನಿಗಳಿಗೆ ಸಂಭ್ರಮದ ಸಂಗತಿ.

[youtube https://www.youtube.com/watch?v=FGpRUF5yn_Q]

Exit mobile version