ಎಲ್‌ಪಿಜಿ vs ಪಿಎನ್‌ಜಿ: ಸಿಲಿಂಡರ್ ಕೊರತೆ ಇದ್ರೂ ಪೈಪ್ ಗ್ಯಾಸ್‌ಗೆ ಸಮಸ್ಯೆಯಿಲ್ಲ ಏಕೆ?
LPG vs PNG: ಭಾರತಕ್ಕೆ ಬೇಕಾದ ನೈಸರ್ಗಿಕ ಅನಿಲದ (Natural Gas) ಸುಮಾರು ಶೇ. 50ರಷ್ಟು ಭಾಗ ನಮ್ಮ ದೇಶದಲ್ಲೇ ಉತ್ಪಾದನೆಯಾಗುತ್ತದೆ. ಹೀಗಾಗಿ ಜಾಗತಿಕ ಯುದ್ಧದ ಪರಿಣಾಮ ಇದರ ಮೇಲೆ ಅಷ್ಟಾಗಿ ತಟ್ಟುವುದಿಲ್ಲ.
ಪಶ್ಚಿಮ ಏಷ್ಯಾದಲ್ಲಿ (Iran vs Israel-US War) ನಡೆಯುತ್ತಿರುವ ಯುದ್ಧದ ಸನ್ನಿವೇಶದಿಂದಾಗಿ ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಪೂರೈಕೆಯಲ್ಲಿ ಆತಂಕ ಎದುರಾಗಿದೆ. ಆದರೆ, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆದಾರರಿಗೆ ಯಾವುದೇ ತೊಂದರೆಯಾಗಿಲ್ಲ. ಈ ಎರಡರ ನಡುವಿನ ವ್ಯತ್ಯಾಸ (LPG vs PNG ) ಮತ್ತು ಸದ್ಯದ ಪರಿಸ್ಥಿತಿಯ ವರದಿ ಇಲ್ಲಿದೆ:
ಎಲ್‌ಪಿಜಿ: ಇದು ಸಿಲಿಂಡರ್‌ಗಳಲ್ಲಿ ದ್ರವ ರೂಪದಲ್ಲಿ ಸಂಗ್ರಹಿಸಿರುವ ಅನಿಲವಾಗಿದ್ದು, ಏಜೆನ್ಸಿಗಳ ಮೂಲಕ ಮನೆಗಳಿಗೆ ತಲುಪಿಸಲಾಗುತ್ತದೆ.
ಪಿಎನ್‌ಜಿ: ಇದು ಪೈಪ್‌ಗಳ ಮೂಲಕ ನೇರವಾಗಿ ಮನೆ ಅಥವಾ ಉದ್ದಿಮೆಗಳಿಗೆ ನೀರು ಸರಬರಾಜಿನಂತೆ ಬರುತ್ತದೆ.
ಸಿಲಿಂಡರ್ ಕೊರತೆಗೆ ಕಾರಣವೇನು? ಭಾರತವು ತನ್ನ ಒಟ್ಟು ಎಲ್‌ಪಿಜಿ ಬಳಕೆಯ ಶೇ. 62ರಷ್ಟು ಅನಿಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿಯೂ ಶೇ. 90ರಷ್ಟು ಆಮದು ಈಗ ಯುದ್ಧ ನಡೆಯುತ್ತಿರುವ ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕು. ಯುದ್ಧದ ಕಾರಣದಿಂದ ಹಡಗುಗಳ ಸಂಚಾರಕ್ಕೆ ಅಡಚಣೆಯಾಗಿರುವುದರಿಂದ ಸಿಲಿಂಡರ್ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ.
ಪಿಎನ್‌ಜಿ ಹೇಗೆ ಸುರಕ್ಷಿತ?
-
ದೇಶೀಯ ಉತ್ಪಾದನೆ: ಭಾರತಕ್ಕೆ ಬೇಕಾದ ನೈಸರ್ಗಿಕ ಅನಿಲದ (Natural Gas) ಸುಮಾರು ಶೇ. 50ರಷ್ಟು ಭಾಗ ನಮ್ಮ ದೇಶದಲ್ಲೇ ಉತ್ಪಾದನೆಯಾಗುತ್ತದೆ. ಹೀಗಾಗಿ ಜಾಗತಿಕ ಯುದ್ಧದ ಪರಿಣಾಮ ಇದರ ಮೇಲೆ ಅಷ್ಟಾಗಿ ತಟ್ಟುವುದಿಲ್ಲ.
-
ವೈವಿಧ್ಯಮಯ ಆಮದು: ಭಾರತವು ನೈಸರ್ಗಿಕ ಅನಿಲವನ್ನು ಕೇವಲ ಅರಬ್ ರಾಷ್ಟ್ರಗಳಿಂದ ಮಾತ್ರವಲ್ಲದೆ ಅಮೆರಿಕ, ರಷ್ಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಂದಲೂ ಆಮದು ಮಾಡಿಕೊಳ್ಳುತ್ತದೆ. ಇದರಿಂದಾಗಿ ಪೂರೈಕೆಯಲ್ಲಿ ಸ್ಥಿರತೆ ಇರುತ್ತದೆ.
-
ಸರ್ಕಾರದ ಆದ್ಯತೆ: ಅನಿಲ ಪೂರೈಕೆಯಲ್ಲಿ ಸರ್ಕಾರವು ಮೊದಲ ಆದ್ಯತೆಯನ್ನು ಮನೆಗಳ ಪಿಎನ್‌ಜಿ ಸಂಪರ್ಕಕ್ಕೆ ನೀಡಿದೆ.
ಇನ್ನೊಂದು ಯುದ್ಧ ಶುರು? ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ
ಸರ್ಕಾರದ ಸಲಹೆ
ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ಗ್ರಾಹಕರಿಗೆ ಪಿಎನ್‌ಜಿ ಸಂಪರ್ಕಕ್ಕೆ ಬದಲಾಗುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಪ್ರಸ್ತುತ ಭಾರತದ ಸುಮಾರು 1.59 ಕೋಟಿ ಮನೆಗಳು ಪಿಎನ್‌ಜಿ ಸಂಪರ್ಕ ಹೊಂದಿದ್ದು, 2034ರ ವೇಳೆಗೆ ಇದನ್ನು 12.63 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.



