India vs Ireland : ಐರ್ಲೆಂಡ್ ವಿರುದ್ಧ ಸರಣಿ ಸೋತು ಕೆಟ್ಟ ಇತಿಹಾಸ ಬರೆದ ಭಾರತ: ಶ್ರೇಯಸ್ ಅಯ್ಯರ್ ಪಡೆಗೆ ಭಾರಿ ಮುಖಭಂಗ

ind vs ire : ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾಗೆ ಕ್ರಿಕೆಟ್‌ ಶಿಶು ಐರ್ಲೆಂಡ್ ಆಘಾತ ನೀಡಿದೆ. ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಐರ್ಲೆಂಡ್‌ ತಂಡದ ವಿರುದ್ದ ಸರಣಿ ಸೋಲು ಕಾಣುವ ಮೂಲಕ, ಟಿ20 ಕ್ರಿಕೆಟ್‌ನಲ್ಲಿ ಕೆಟ್ಟ ಇತಿಹಾಸವೊಂದನ್ನು ಬರೆದಿದೆ

ಬೆಲ್‌ಫಾಸ್ಟ್: ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾಗೆ ಕ್ರಿಕೆಟ್‌ ಶಿಶು ಐರ್ಲೆಂಡ್ ಆಘಾತ ನೀಡಿದೆ. ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಐರ್ಲೆಂಡ್‌ ತಂಡದ ವಿರುದ್ದ ಸರಣಿ ಸೋಲು ಕಾಣುವ ಮೂಲಕ, ಟಿ20 ಕ್ರಿಕೆಟ್‌ನಲ್ಲಿ ಕೆಟ್ಟ ಇತಿಹಾಸವೊಂದನ್ನು ಬರೆದಿದೆ.

ಐರ್ಲೆಂಡ್‌ ವಿರುದ್ದದ ಮೊದಲ ಪಂದ್ಯದಲ್ಲಿಯೇ ಭಾರತಕ್ಕೆ ಎಚ್ಚರಿಕೆಯ ಗಂಟೆಯನ್ನು ರವಾನಿಸಿತ್ತು. ಮೊದಲ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ತೋರ್ಪಡಿಸಿದ ಆಟ ಇದೀಗ ಎರಡನೇ ಪಂದ್ಯದಲ್ಲಿಯೂ ಮುಂದುವರಿದೆ. 2ನೇ ಟಿ20 ಪಂದ್ಯದಲ್ಲಿ ಐರ್ಲೆಂಡ್‌ ತಂಡ 155ರನ್‌ಗಳ ಸುಲಭದ ಗುರಿಯನ್ನು ನೀಡಿತ್ತು. ಆದರೆ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 153 ರನ್‌ ಗಳಿಸಲು ಮಾತ್ರವೇ ಶಕ್ತವಾಯಿತು.

Also Read : ಭಾರತ – ಐರ್ಲೆಂಡ್‌ 2ನೇ ಟಿ20 ಪಂದ್ಯ : ಪಾದಾರ್ಪಣೆ ಮಾಡ್ತಾರಾ ವೈಭವ್‌ ಸೂರ್ಯವಂಶಿ

ನಾಯಕನಾಗಿ ಅಯ್ಯರ್‌,  ಕೋಚ್‌ ಗಂಭೀರ್‌ ವೈಫಲ್ಯ

ಐರ್ಲೆಂಡ್‌ ವಿರುದ್ದ ಸರಣಿಯ ಮೂಲಕ ಟಿ20 ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದ ಶ್ರೇಯಸ್‌ ಅಯ್ಯರ್‌ ಸಂಪೂರ್ಣವಾಗಿ ವೈಫಲ್ಯ ಕಂಡಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ಶ್ರೇಯಸ್‌ ಅಯ್ಯರ್‌ ತೋರ್ಪಡಿಸಿದ ಖದರ್‌ ಟೀಂ ಇಂಡಿಯಾವನ್ನು ಮುನ್ನೆಡೆಸುವಲ್ಲಿ ತೋರಲಿಲ್ಲ. ನಾಯಕನ ಜೊತೆಗೆ ಕೋಚ್‌ ಗಂಭೀರ್‌ ವೈಫಲ್ಯವೂ ಐರ್ಲೆಂಡ್‌ ಸರಣಿಯಲ್ಲಿ ಎದ್ದು ತೋರುತ್ತಿದೆ.

ಸರಣಿ ಸೋಲಿಗೆ ಪ್ರಮುಖ ಕಾರಣಗಳೇನು?

Also Read : ಕ್ರಿಕೆಟ್‌ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಕಿಂಗ್‌ ಕೊಹ್ಲಿ ಅಬ್ಬರ: ಶೂ ಮಾರಾಟದಿಂದ ₹138 ಕೋಟಿ ಆದಾಯ!

ವೈಭವ್‌ ಸೂರ್ಯವಂಶಿ ಹೊರಗಿಟ್ಟು ತಪ್ಪು ಮಾಡಿತಾ ಭಾರತ

ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮನ್ಸ್‌ ಜೋಡಿ ಆರಂಭಿಕ ಪಂದ್ಯದಲ್ಲಿಯೇ ವೈಫಲ್ಯ ಅನುಭವಿಸ ಬೆನ್ನಲ್ಲೇ ಎರಡನೇ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ಸಿಗುತ್ತೆ ಅನ್ನೋ ನಿರೀಕ್ಷೆ ಕ್ರಿಕೆಟ್‌ ಅಭಿಮಾನಿಗಳಲ್ಲಿತ್ತು. ಆದರೆ ವೈಭವ್‌ ಸೂರ್ಯವಂಶಿ ಎರಡನೇ ಪಂದ್ಯದಲ್ಲಿಯೂ ಬೆಂಚ್‌ ಕಾಯುವಂತಾಯ್ತು.

ಐರ್ಲೆಂಡ್ ಪ್ರವಾಸದ ಸರಣಿ ಮಾಹಿತಿ

Exit mobile version