ಭಾರತ – ಐರ್ಲೆಂಡ್ 2ನೇ ಟಿ20 ಪಂದ್ಯ : ಪಾದಾರ್ಪಣೆ ಮಾಡ್ತಾರಾ ವೈಭವ್ ಸೂರ್ಯವಂಶಿ
ಐರ್ಲೆಂಡ್ ವಿರುದ್ದದ ಮೊದಲ ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲಿನಿಂದ ಮುಖಭಂಗ ಅನುಭವಿಸಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೇ ಪಂದ್ಯವನ್ನು ಆಡಲಿದೆ. ಟಿ20 ವಿಶ್ವಕಪ್ನಲ್ಲಿ ಆಡಿದ್ದ ತಂಡವನ್ನೇ ಕಣಕ್ಕೆ ಇಳಿಸಿದ್ದರೂ ಕೂಡ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ದ ಸೋಲು ಕಂಡಿರುವುದಕ್ಕೆ ಬಿಸಿಸಿಐ ಗರಂ ಆಗಿದೆ.
ಐರ್ಲೆಂಡ್ ವಿರುದ್ದದ ಮೊದಲ ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲಿನಿಂದ ಮುಖಭಂಗ ಅನುಭವಿಸಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೇ ಪಂದ್ಯವನ್ನು ಆಡಲಿದೆ. ಟಿ20 ವಿಶ್ವಕಪ್ನಲ್ಲಿ ಆಡಿದ್ದ ತಂಡವನ್ನೇ ಕಣಕ್ಕೆ ಇಳಿಸಿದ್ದರೂ ಕೂಡ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ದ ಸೋಲು ಕಂಡಿರುವುದಕ್ಕೆ ಬಿಸಿಸಿಐ ಗರಂ ಆಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಅದ್ರಲ್ಲೂ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಂದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಎಂಟ್ರಿ ಕೊಡುವ ಸಾಧ್ಯತೆಯಿದೆ.
ಐರ್ಲೆಂಡ್ ವಿರುದ್ದದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ವೈಫಲ್ಯ ಅನುಭವಿಸಿರುವ ಭಾರತ ತಂಡಕ್ಕೆ ಸರಣಿಯನ್ನು ಜೀವಂತವಾಗಿ ಇರಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಲಿದೆ. ಇಂದಿನ ಪಿಚ್ ರಿಪೋರ್ಟ್ ಪ್ರಕಾರ ಭಾರತಕ್ಕೆ ಹೆಚ್ಚಿನ ನೆರವು ಸಿಗಲಿದೆ. ಇದೇ ಕಾರಣದಿಂದಲೇ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿಯೂ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ.
Also Read: ಕ್ರಿಕೆಟ್ ಮಾತ್ರವಲ್ಲ, ಬಿಸಿನೆಸ್ನಲ್ಲೂ ಕಿಂಗ್ ಕೊಹ್ಲಿ ಅಬ್ಬರ: ಶೂ ಮಾರಾಟದಿಂದ ₹138 ಕೋಟಿ ಆದಾಯ!
ಚುಟುಕು ಕ್ರಿಕೆಟ್ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿ ಕೊಡ್ತಾರಾ ಅನ್ನುವ ಕುತೂಹಲ ವ್ಯಕ್ತವಾಗಿದೆ. ದೇಶೀಯ ಕ್ರಿಕೆಟ್ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ವೈಭವ್ ಸೂರ್ಯವಂಶಿಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಕಂಡಿರುವ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಯಿದ್ದು, ಅಭಿಷೇಕ್ ಶರ್ಮಾ ಜೊತೆಗೆ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಒಂದೊಮ್ಮೆ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ರೆ, ಅನುಭವಿ ಆಟಗಾರರಿಗೆ ವಿಶ್ರಾಂತಿ ಕೊಡುವ ಸಾಧ್ಯತೆಯಿದೆ. ಸೂರ್ಯವಂಶಿ ಎಂಟ್ರಿಯಿಂದ ಓಪನಿಂಗ್ ಅಥವಾ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಖಚಿತ. ಇಂದಿನ ಪಂದ್ಯ ಅತ್ಯಂತ ಹೆಚ್ಚು ಮಹತ್ವದ್ದಾಗಿರುವ ಕಾರಣದಿಂದಲೇ ಟೀಂ ಇಂಡಿಯಾದಲ್ಲಿ ಬಾರೀ ಬದಲಾವಣೆ ನಿರೀಕ್ಷಿಸಲಾಗುತ್ತಿದೆ.
India vs Ireland 2nd T20I Vaibhav Suryavanshi to debut


