ಕ್ರಿಕೆಟ್ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಕಿಂಗ್ ಕೊಹ್ಲಿ ಅಬ್ಬರ: ಶೂ ಮಾರಾಟದಿಂದ ₹138 ಕೋಟಿ ಆದಾಯ!
'One8 ಗ್ಲೋಬಲ್ ಪ್ರೀಮಿಯರ್' ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಬಿಡುಗಡೆ ಮಾಡಿದ ವಿಶೇಷ ಸ್ನೀಕರ್ಸ್ (Sneakers) ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 'ಸೋಲ್ಡ್ ಔಟ್' ಆಗಿವೆ! ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 138 ಕೋಟಿ ರೂಪಾಯಿ ಮೌಲ್ಯದ ಶೂಗಳು ಮಾರಾಟವಾಗಿ ಉದ್ಯಮ ಲೋಕವನ್ನೇ ಬೆಚ್ಚಿಬೀಳಿಸಿದೆ.
ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮೇಲೂ ವಿರಾಟ್ ಕೊಹ್ಲಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಜೂನ್ 21 ರಂದು ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ‘One8 ಗ್ಲೋಬಲ್ ಪ್ರೀಮಿಯರ್’ ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಬಿಡುಗಡೆ ಮಾಡಿದ ವಿಶೇಷ ಸ್ನೀಕರ್ಸ್ (Sneakers) ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ಸೋಲ್ಡ್ ಔಟ್’ ಆಗಿವೆ! ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 138 ಕೋಟಿ ರೂಪಾಯಿ ಮೌಲ್ಯದ ಶೂಗಳು ಮಾರಾಟವಾಗಿ ಉದ್ಯಮ ಲೋಕವನ್ನೇ ಬೆಚ್ಚಿಬೀಳಿಸಿದೆ.
2025 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಮುನ್ನ ವಿರಾಟ್ ಕೊಹ್ಲಿ ಒಟ್ಟು 9,230 ರನ್‌ಗಳನ್ನು ಗಳಿಸಿದ್ದರು. ತಮ್ಮ ಈ ಐತಿಹಾಸಿಕ ಮೈಲಿಗಲ್ಲನ್ನು ಅಮರವಾಗಿಸಲು ಶೂ ಬೆಲೆಯನ್ನು ₹9,230 ಇಡಲಾಗಿದೆ. ಈ ಶೂ ಸರಣಿಗೆ “ಸೀಮ್ XVIII ಸಿಗ್ನೇಚರ್ ಟೆಸ್ಟ್ ರೆಡ್” (Seam XVIII Signature Test Red) ಎಂದು ಹೆಸರಿಡಲಾಗಿದೆ. ಟೆಸ್ಟ್ ಕ್ರಿಕೆಟ್‌ನ ಕೆಂಪು ಚೆಂಡನ್ನು ನೆನಪಿಸುವ ಆಳವಾದ ಕೆಂಪು ಬಣ್ಣ ಮತ್ತು ಬಿಳಿ ಹೊಲಿಗೆಯನ್ನು ಇದು ಹೊಂದಿದೆ. ವಿರಾಟ್ ಅವರ ಐಕಾನಿಕ್ ಜೆರ್ಸಿ ಸಂಖ್ಯೆ ’18’ ಅನ್ನು ಈ ಶೂಗಳ ಮೇಲೆ ರೋಮನ್ ಸಂಖ್ಯೆಯಲ್ಲಿ “XVIII” ಎಂದು ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.
Also Read: ವಂಡರ್ ಬಾಯ್ ವೈಭವ್ ಸೂರ್ಯವಂಶಿ ಬಗ್ಗೆ ಕಳವಳ: ದಿಗ್ಗಜರಿಂದ ಮಹತ್ವದ ಕಿವಿಮಾತು
ಈ ಜಾಗತಿಕ ಪ್ರೀಮಿಯರ್ ಶೋ ಕೇವಲ ಬಿಸಿನೆಸ್ ಇವೆಂಟ್ ಆಗಿ ಉಳಿಯಲಿಲ್ಲ. ಪ್ರಸಿದ್ಧ ಪಂಜಾಬಿ ಗಾಯಕ ಮತ್ತು ರ‍್ಯಾಪರ್ ಕರಣ್ ಔಜ್ಲಾ (Karan Aujla) ತಮ್ಮ ಅಬ್ಬರದ ಪ್ರದರ್ಶನದ ಮೂಲಕ ವೇದಿಕೆಯನ್ನು ರಂಜಿಸಿದರು. ವಿರಾಟ್ ಕೊಹ್ಲಿ ಮತ್ತು ಕರಣ್ ಔಜ್ಲಾ ಇಬ್ಬರೂ ಒಟ್ಟಿಗೆ ಸ್ಟೇಜ್ ಹಂಚಿಕೊಂಡಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ಮಾತನಾಡಿದ, ವಿರಾಟ್ ಕೊಹ್ಲಿ ತಮ್ಮ ಯಶಸ್ಸಿನ ಹಿಂದಿನ ಕಠಿಣ ಪರಿಶ್ರಮವನ್ನು ನೆನಪಿಸಿಕೊಂಡರು. ಅಲ್ಲದೆ, ತಮ್ಮ ದಿವಂಗತ ತಂದೆಯ ಬಗ್ಗೆ ಮಾತನಾಡುತ್ತಾ ತೀವ್ರ ಭಾವುಕರಾದರು. ಯುವ ಜನತೆಗೆ ಸಂದೇಶ ನೀಡಿದ ಅವರು, “ಕನಸುಗಳನ್ನು ನನಸಾಗಿಸಲು ಶ್ರದ್ಧೆ ಮತ್ತು ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ” ಎಂದು ಪ್ರೋತ್ಸಾಹಿಸಿದರು.
ಕ್ರೀಡಾ ಲೋಕದ ಸೆಲೆಬ್ರಿಟಿಗಳು ಉದ್ಯಮಕ್ಕೆ ಇಳಿಯುವುದು ಹೊಸದೇನಲ್ಲ, ಆದರೆ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ₹138 ಕೋಟಿ ಬಿಸಿನೆಸ್ ಮಾಡುವುದು ವಿರಾಟ್ ಕೊಹ್ಲಿ ಎಂಬ ಬ್ರ್ಯಾಂಡ್ ಪವರ್‌ಗೆ ಸಾಕ್ಷಿ. ಸದ್ಯ ಮಾರುಕಟ್ಟೆಯಲ್ಲಿ ಈ ಶೂಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಕೊಂಡುಕೊಳ್ಳಲು ಮುಗಿಬೀಳುತ್ತಿದ್ದಾರೆ.
Not only in cricket King Kohli is a sensation in business too 138 crore rupees income from shoe sales


