ಐಪಿಎಲ್ ಪಂದ್ಯಾವಳಿಗೆ ಇರುವ ಅಭಿಮಾನಿಗಳು ಒಂದೆಡೆಯಾದರೆ ಆರ್‌ಸಿಬಿ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ (RCB Vs CSK 2026) ನಡುವಿನ ಪಂದ್ಯ ವೀಕ್ಷಣೆಗೆ ಇರುವ ಅಭಿಮಾನಿಗಳ ತೂಕವೇ ಮತ್ತೊಂದು ಕಡೆ. ಎರಡೂ ತಂಡಗಳಿಗೆ ಪರಸ್ಪರ ನಡೆಯುವ ಪಂದ್ಯಗಳು ಪ್ರತಿಷ್ಠೆಯ ಕಣವಿದ್ದಂತೆ. ಭಾನುವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವರ್ಸಸ್ ಚೆನ್ನೈಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದ್ದು, ಕೇವಲ 1 ನಿಮಿಷಗಳಲ್ಲಿ ಮೈದಾನದ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಭಾನುವಾರ ನಡೆಯಲಿರುವ ಪಂದ್ಯಗಳ ಟಿಕೆಟ್ ಮಾರಾಟವನ್ನು ವೆಬ್ಸೈಟ್ ಹಾಗೂ ಆ್ಯಪ್ ಮೂಲಕ ಆರ್‌ಸಿಬಿ ನಡೆಸಿತ್ತು. ಕೇವಲ 1 ನಿಮಿಷಗಳ ಅವಧಿಯಲ್ಲಿ ಎಲ್ಲಾ ಟಿಕೆಟ್ಗಳು ಮಾರಾಟವಾಗಿದೆ ಎಂದು ಆರ್‌ಸಿಬಿ ತಿಳಿಸಿದೆ.
ಇದನ್ನೂ ಓದಿ: ರಾಜ್ಯದ ಮಹಿಳಾ ಕ್ರಿಕೆಟಿಗರಿಗೆ ಪಿಂಚಣಿ ಭಾಗ್ಯ..! ಮಾಜಿ ಸಿಂಹಿಣಿಯರಿಗೆ ಸಿಗಲಿದೆ ಮಾಸಿಕ ಪೆನ್ಶನ್
ಟಿಕೆಟ್‌ನ ಆರಂಭಿಕ ಬೆಲೆ ₹3750 ಇತ್ತು. ಗರಿಷ್ಠ ಬೆಲೆ ₹47000. ಆದರೆ ಕೆಲವೇ ಸ್ಟ್ಯಾಂಡ್‌ಗಳ ಟಿಕೆಟ್‌ಗಳನ್ನಷ್ಟೇ ಆರ್‌ಸಿಬಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದೆ ಎನ್ನಲಾಗಿದ್ದು ಎಷ್ಟು ಟಿಕೆಟ್ಗಳನ್ನು ಮಾರಾಟಕ್ಕೆ ಇಡಲಾಗಿತ್ತು ಎಂಬುದರ ಬಗ್ಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಅಧಿಕೃತ ಮಾಹಿತಿ ನೀಡಿಲ್ಲ.
