“ಭಾರತೀಯರ ಹೃದಯ ಒಡೆಯುವುದೇ ನಮ್ಮ ಗುರಿ” ನ್ಯೂಜಿಲ್ಯಾಂಡ್‌ ಕ್ಯಾಪ್ಟ್‌ನ್‌ ಹೇಳಿಕೆ ಸೂರ್ಯ ಖಡಕ್ ತಿರುಗೇಟು

T20 World Cup final India vs New Zealand | Suryakumar Yadav | Mitchell Santner: ಅಹಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ 2026ರ ಮಹತ್ವದ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಭಯ ತಂಡಗಳ ನಾಯಕರು ನಡೆಸಿದ ಮಾತುಕತೆ ಇದೀಗ ಭಾರಿ ಕುತೂಹಲ ಕೆರಳಿಸಿದೆ.

ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರು 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯನ್ನು ನೆನಪಿಸಿದ್ದಾರೆ. “ನಾಳೆ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಮೌನವಾಗಿಸುವುದೇ ನಮ್ಮ ಗುರಿ. ಟ್ರೋಫಿ ಗೆಲ್ಲಲು ಕೆಲವರ ಹೃದಯ ಒಡೆಯಬೇಕಾದರೂ ನಾವು ಅದಕ್ಕೆ ಸಿದ್ಧ,” ಎಂದು ಹೇಳುವ ಮೂಲಕ ಭಾರತೀಯ ಅಭಿಮಾನಿಗಳಿಗೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರ ಖಡಕ್ ಪ್ರತಿಕ್ರಿಯೆ:

ಸ್ಯಾಂಟ್ನರ್ ಅವರ ಈ “ಹೃದಯ ಒಡೆಯುವ” ಕಾಮೆಂಟ್‌ಗೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ:

ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ಅದ್ದೂರಿ ಸಮಾರೋಪ ಸಮಾರಂಭ ನಡೆಯಲಿದೆ. ಖ್ಯಾತ ಅಂತಾರಾಷ್ಟ್ರೀಯ ಗಾಯಕ ರಿಕಿ ಮಾರ್ಟಿನ್, ಭಾರತದ ಸುಖ್ಬೀರ್ ಮತ್ತು ಫಾಲ್ಗುಣಿ ಪಾಠಕ್ ಅವರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

‘ಬುಮ್ರಾ ಕೂಡ ಮನುಷ್ಯನೇ’ – ಭಾರತಕ್ಕೆ ನ್ಯೂಜಿಲೆಂಡ್ ಆಟಗಾರ ಗ್ಲೆನ್ ಫಿಲಿಪ್ಸ್ ಎಚ್ಚರಿಕೆ!

ಕಿವಿ ಪಡೆಯ ಸವಾಲು ಮತ್ತು ಸೂರ್ಯ ಪಡೆಯ ಆತ್ಮವಿಶ್ವಾಸದ ನಡುವೆ ನಾಳೆಯ ಫೈನಲ್ ಪಂದ್ಯ ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಇಬ್ಬರು ನಾಯಕರ ಪ್ರತಿಷ್ಠೆಯ ಹೋರಾಟವೂ ಆಗಲಿದೆ.

[youtube https://www.youtube.com/watch?v=QA28TTkVMIY]

Exit mobile version