ಮಂಗಳೂರಿನ ನಟೋರಿಯಸ್​ ರೌಡಿ ನೌಫಾಲ್​ ಕೇರಳದಲ್ಲಿ ಹತ್ಯೆ

Mangaluru Crime News: 25ಕ್ಕೂ ಅಧಿಕ ಪ್ರಕರಣಗಳಲ್ಲಿ ಸಿಲುಕಿದ್ದ ನಟೋರಿಯಸ್​ ರೌಡಿಶೀಟರ್​ ನೌಫಾಲ್​ ಯಾನೆ ತೊಪ್ಪಿ ನೌ ಫಾಲ್​ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಮಂಗಳೂರಿನ ನಟೋರಿಯಸ್​ ರೌಡಿಯಾಗಿದ್ದ ಈತ ಮಂಗಳೂರು ಕಮಿಷನರೇಟ್​ ವ್ಯಾಪ್ತಿಯ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಆಗಿದ್ದ.

ಈತನನ್ನು ಕೇರಳದ ಉಪ್ಪಳ ರೈಲ್ವೇ ಗೇಟ್​ ಬಳಿಯಲ್ಲಿ ಬರ್ಬರವಾಗಿ ಕಡಿದು ಹಾಕಲಾಗಿದೆ. ಈ ಸಂಬಂಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದ ಬಜಾಲ್​ ಫೈಸಲ್​ ನಗರದ ನಿವಾಸಿಯಾಗಿದ್ದ ರೌಡಿಶೀಟರ್ ನೌಫಾಲ್​ನನ್ನು ಇಂದು ಬೆಳಗ್ಗೆ ಕೊಲೆ ಮಾಡಲಾಗಿದೆ. ಮೃತದೇಹವನ್ನು ಗಮನಿಸಿದಾಗ ನೌಫಾಲ್​ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟುಗಳು ಬಿದ್ದಿವೆ.

ಇದನ್ನೂ ಓದಿ: ಹೊಸಕೋಟೆಯಲ್ಲಿ ಭ್ರೂಣ ಹತ್ಯೆ : ಫಾಕ್ಸ್ಕಾನ್ ಕಂಪೆನಿಗೆ ಸಂಕಷ್ಟ

ಅಲ್ಲದೇ ಈತನ ಶವದ ಮೇಲೆ ಕೇವಲ ಬನಿಯನ್​ ಮತ್ತು ಪ್ಯಾಂಟ್​ ಮಾತ್ರ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಪ್ಪಳ ರೈಲ್ವೆ ಗೇಟ್​ ಬಳಿಗೆ ಈತ ಸ್ಕೂಟಿಯಲ್ಲಿ ತೆರಳಿದ್ದ ಎನ್ನಲಾಗಿದೆ. ಸದ್ಯ ನೌಫಾಲ್​ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಪೆರಿಯಾರಂ ಮೆಡಿಕಲ್​ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಡ್ರಗ್ಸ್​ ಸೇವನೆ ಮತ್ತು ವಹಿವಾಟಿನಲ್ಲಿ ಬಹಳ ಸಕ್ರಿಯನಾಗಿದ್ದ ನೌಫಾಲ್​ 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಅಡ್ಯಾರುವಿನ ರೌಡಿ ಜಿಯಾ ಮತ್ತು ಮತ್ತೊಬ್ಬನನ್ನು ಡಬಲ್​ ಮರ್ಡರ್​ ಮಾಡುವ ಮೂಲಕ ನಟೋರಿಯಸ್​ ರೌಡಿ ಎನಿಸಿದ್ದ.

ಮಾರಿಪಳ್ಳ ಜಬ್ಬಾರ್​, ತಲ್ಲತ್​ ಗ್ಯಾಂಗ್​ಗಳಲ್ಲಿ ಸಕ್ರಿಯನಾಗಿದ್ದ ಈತ ಡ್ರಗ್ಸ್​ ವ್ಯವಹಾರದಲ್ಲಿ ಭಾರೀ ಸಕ್ರಿಯನಾಗಿದ್ದ.

ತನ್ನದೇ ಆದ ತಂಡವನ್ನೂ ಹೊಂದಿದ್ ನೌಫಾಲ್​ನ ಮೇಲೆ ಸುರತ್ಕಲ್​, ವಾಮಂಜೂರು, ಕಾವೂರು, ಕಂಕನಾಡಿ ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಿವೆ.

ಮಂಗಳೂರು ಪೊಲೀಸರು ಡ್ರಗ್ಸ್​ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಲು ಆರಂಭಿಸಿದ ಬಳಿಕ ಈತ ಮಂಗಳೂರು ತೊರೆದು ಕಾಸರಗೋಡು ಭಾಗದಲ್ಲಿ ನೆಲೆಸಿದ್ದ.

ಇದೀಗ ಈತನ ಮೇಲೆ ಗ್ಯಾಂಗ್‌ವಾರ್‌ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಸೀದು ಹೋದ ರೊಟ್ಟಿ ತಿನ್ನಲು ನೀಡಿದ ಸೊಸೆ : ಮನನೊಂದ ಮಾವ ಆತ್ಮಹತ್ಯೆಗೆ ಶರಣು

Exit mobile version