ಸೀದು ಹೋದ ರೊಟ್ಟಿ ತಿನ್ನಲು ನೀಡಿದ ಸೊಸೆ : ಮನನೊಂದ ಮಾವ ಆತ್ಮಹತ್ಯೆಗೆ ಶರಣು

Burnt rotis Bhopal : ಅತ್ತೆ – ಮಾವನ ಕಿರುಕುಳಕ್ಕೆ ಸೊಸೆ ಬಲಿಯಾಗುವ ಅನೇಕ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿರುತ್ತದೆ. ಎಷ್ಟೇ ಕಠಿಣ ಕಾನೂನು ಕ್ರಮ ಕೈಗೊಂಡರೂ ಸಹ ಈ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ.

ಆದರೆ ಇಲ್ಲೊಂದು ಕಡೆ ಸೊಸೆಯ ಕಾಟ ತಾಳಲಾರದೇ ಮಾವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಡೆತ್​ನೋಟ್​ ಬರೆದಿರುವ ಮಾವ ನನ್ನ ಸೊಸೆ ನನಗೆ ಸೀದು ಹೋದ ರೊಟ್ಟಿ ನೀಡುತ್ತಿದ್ದಳು ಎಂದು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಭೂಪಾಲ್​ನಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಮೇಶ್​ ಚಂದ್ರ ಗುಪ್ತಾ(62) ಎಂದು ಗುರುತಿಸಲಾಗಿದೆ. ಇವರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು ಶವದ ಬಳಿಕ 5 ಪುಟಗಳ ಡೆತ್​ನೋಟ್​ ಪತ್ತೆಯಾಗಿದೆ.

ಡೆತ್​ನೋಟ್​ನಲ್ಲಿ ಗುಪ್ತಾ ತನ್ನ ಸೊಸೆ ನನಗೆ ಕಳೆದ ಅನೇಕ ವರ್ಷಗಳಿಂದ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಆರೋಪಿಸಿದ್ದಾರೆ. ಅವಳು ಉದ್ದೇಶಪೂರ್ವಕವಾಗಿಯೇ ನನಗೆ ಸೀದು ಹೋದ ರೊಟ್ಟಿ ಹಾಗೂ ನೀರು ಹಾಕಿ ತೆಳು ಮಾಡಿದ ಸಾಂಬಾರನ್ನು ನೀಡುತ್ತಿದ್ದಳು. ಈ ಕಾಟವನ್ನು ನನ್ನಿಂದ ಇನ್ನು ಸಹಿಸಲು ಸಾಧ್ಯವಿಲ್ಲ. ಆಕೆಯೊಂದಿಗೆ ನಾನು ಬದುಕಲಾರೆ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮರೆಯಾದ ಮೂಕಪ್ಪಜ್ಜ, ಕಲಿಯುಗದ ಪ್ರತ್ಯಕ್ಷ ನಂದಿ ಇನ್ನಿಲ್ಲ

ಗುಪ್ತಾ ಅವರ ಪುತ್ರ ಪುಷ್ಪೇಂದ್ರ ಕೂಡ ಪತ್ನಿಯಿಂದ ಕಾಟ ಅನುಭವಿಸಿದ್ದು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಆದರೆ ಪತ್ನಿಯು ತನ್ನ ಕುಟುಂಬಸ್ಥರ ವಿರುದ್ಧ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಹಾಗೂ ಜೀವನಾಂಶಕ್ಕೆ ಸಂಬಂಧಿಸಿದ ದೂರು ದಾಖಲಿಸಿದ್ದಳು ಎನ್ನಲಾಗಿದೆ.

ಈ ಎಲ್ಲಾ ಕಾರಣಗಳಿಂದ ಈ ಕುಟುಂಬ ತುಂಬಾ ಒತ್ತಡದಲ್ಲಿತ್ತು ಎಂದು ಎಸಿಪಿ ಮನೀಶ್​ ಭಾರದ್ವಾಜ್​ ಮಾಹಿತಿ ನೀಡಿದ್ದಾರೆ. ಡೆತ್​ನೋಟ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದು ಶೀಘ್ರದಲ್ಲಿಯೇ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಸಿಪಿ ಮನೀಶ್​ ಭಾರದ್ವಾಜ್​ ತಿಳಿಸಿದ್ದಾರೆ. ಮೃತ ರಮೇಶ್​ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ : ಏನ್‌ ಕಾಲ ಬಂತಪ್ಪಾ: ಚರಂಡಿಯಲ್ಲಿ ಕಾಫಿ ಚೆಲ್ಲಿದ ಮಹಿಳೆಗೆ 17 ಸಾವಿರ ರೂಪಾಯಿ ದಂಡ

Burnt rotis family feud Bhopal man dies by suicide blames daughter-in-law

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories