School Holiday: ಶಾಲಾ ಮಕ್ಕಳ ದಸರಾ ರಜೆ ಯಾವಾಗ ಆರಂಭ ?
ಕರ್ನಾಟಕದಲ್ಲಿ ಈ ಬಾರಿ ಅಕ್ಟೋಬರ್ 3 ರಿಂದ ದಸರಾ ರಜೆ ಆರಂಭಗೊಂಡು, ಅಕ್ಟೋಬರ್ 21ಕ್ಕೆ ಕೊನೆಯಾಗಲಿದೆ. ಅಕ್ಟೋಬರ್ 22ರಿಂದ ಮತ್ತೆ ಎರಡನೇ ಅವಧಿಯ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿವೆ.
By Darshan Shetty Narkali | ದರ್ಶನ್ ಶೆಟ್ಟಿ ನಾರ್ಕಳಿ
1 min read
ಬೆಂಗಳೂರು : ಕರ್ನಾಟಕದ ಶಾಲೆಗಳಿಗೆ ಶಿಕ್ಷಣ ಇಲಾಖೆ ಈಗಾಗಲೇ ದಸರಾ ರಜೆ ಘೋಷಣೆ ಮಾಡಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಬೆನ್ನಲ್ಲೇ ಬೇಸಿಗೆ ರಜೆ ಆರಂಭಗೊಳ್ಳಲಿದೆ. ಅಕ್ಟೋಬರ್ 3 ರಿಂದ 21ರವರೆಗೆ ಒಟ್ಟು 19 ದಿನಗಳ ಕಾಲ ರಜೆ ಸಿಗಲಿದೆ.
2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 245 ಕರ್ತವ್ಯದ ದಿನಗಳಿದ್ದು, 119 ದಿನಗಳ ಕಾಲ ರಜೆ ಇರಲಿದೆ. ಈ ಬಾರಿಯ ನಾಡಹಬ್ಬ ದಸರಾದ ಹೊತ್ತಲ್ಲೇ ಬೇಸಿಗೆ ರಜೆ ಆರಂಭಗೊಳ್ಳುತ್ತಿರುವುದು ವಿದ್ಯಾರ್ಥಿಗಳ ಪಾಲಿಗೆ ಗುಡ್‌ನ್ಯೂಸ್
ಕರ್ನಾಟಕದಲ್ಲಿ ಈ ಬಾರಿ ಅಕ್ಟೋಬರ್ 3 ರಿಂದ ದಸರಾ ರಜೆ ಆರಂಭಗೊಂಡು, ಅಕ್ಟೋಬರ್ 21ಕ್ಕೆ ಕೊನೆಯಾಗಲಿದೆ. ಅಕ್ಟೋಬರ್ 22ರಿಂದ ಮತ್ತೆ ಎರಡನೇ ಅವಧಿಯ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿವೆ.
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಕೇವಲ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರವೇ ಅನ್ವಯವಾಗಲಿದೆ. ಆದರೆ ಖಾಸಗಿ ಶಾಲೆಗಳು ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ರಜೆಯ ಅವಧಿಗೆ ಕತ್ತರಿ ಹಾಕುವ ಸಾಧ್ಯತೆಯಿದೆ. ಕ್ರಿಸ್‌ಮಸ್ ವೇಳೆಯಲ್ಲಿ ರಜೆ ನೀಡುವ ಶಾಲೆಗಳು ದಸರಾ ರಜೆಯ ಅವಧಿಗೆ ಕತ್ತರಿ ಹಾಕಲಿವೆ.
245 ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿದ್ದು, ಇದರಲ್ಲಿ 181 ದಿನಗಳ ಕಾಲ ಮಾತ್ರವೇ ಕಲಿಕಾ ಅವಧಿಯಾಗಿರಲಿದೆ. ಉಳಿದಂತೆ 26 ದಿನಗಳ ಕಾಲ ಪರೀಕ್ಷೆ, ಮೌಲ್ಯಮಾಪನ, 24 ದಿನಗಳ ಕಾಲ ಪಠ್ಯೇತರ ಚಟುವಟಿಕೆ, 10 ದಿನಗಳ ಕಾಲ ಮೌಲ್ಯಮಾಪನ ಹಾಗೂ 04 ದಿನಗಳ ಕಾಲ ಶಾಲಾ ಸ್ಥಳೀಯ ರಜೆಗಳು ಇರಲಿದೆ.
Topics
ಸಂಬಂಧಿತ ಸುದ್ದಿಗಳು
education
ದಸರಾ ರಜೆಯಲ್ಲಿ ಬದಲಾವಣೆ : ಶಾಲಾ ಮಕ್ಕಳಿಗೆ ಭರ್ಜರಿ ಗುಡ್‌ನ್ಯೂಸ್
education
ಶಾಲಾ ಶಿಕ್ಷಣ ಮೌಲ್ಯಮಾಪನ ಪದ್ಧತಿಯಲ್ಲಿ ಮತ್ತೆ ಗೊಂದಲ: ಥರ್ಡ್ ಲ್ಯಾಂಗ್ವೇಜ್ ಮಾರ್ಕ್ಸ್ ವಿಚಾರದಲ್ಲಿ ಸ್ಪಷ್ಟನೆ ನೀಡಲು ಒತ್ತಾಯ
education
ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನೆ ಜಾರಿ : ಗಣಿತ, ವಿಜ್ಞಾನ ಇನ್ಮುಂದೆ ಕನ್ನಡ ಮತ್ತು ಇಂಗ್ಲಿಷ್ನಲ್ಲೇ ಬೋಧನೆ
education

