Kannada News Next

entertainment

Bigg Boss Kannada 13: ಬಿಗ್ ಬಾಸ್ ಮನೆಯಿಂದ ಮಂಜು ಔಟ್‌, ಲಾವಣ್ಯ ಕುಮಾರಿ ವೈಲ್ಡ್ ಕಾರ್ಡ್ ಎಂಟ್ರಿ

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada Season 13) ಬಾರೀ ಕುತೂಹಲವನ್ನು ಮೂಡಿಸುತ್ತಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Photo: Colours Kannada

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada Season 13) ಬಾರೀ ಕುತೂಹಲವನ್ನು ಮೂಡಿಸುತ್ತಿದೆ. ಶೋ ಆರಂಭಗೊಂಡು ಮೂರು ವಾರಗಳಲ್ಲೇ ಸ್ಪರ್ಧಿಗಳ ನಡುವೆ ಜಗಳ, ಕಿತ್ತಾಟ, ಆರೋಪ- ಪ್ರತ್ಯಾರೋಪಗಳ ಮೂಲಕ ಪ್ರೇಕ್ಷಕರಿಗಂತೂ ಭರ್ಜರಿ ಮನರಂಜನೆಯನ್ನೇ ನೀಡುತ್ತಿದೆ. ಈ ನಡುವಲ್ಲೇ ಬಿಗ್‌ಬಾಸ್‌ ಮನೆಗೆ ಭರ್ಜರಿಯಾಗಿ ವೈಲ್ಡ್‌ಕಾರ್ಡ್‌ ಮೂಲಕ ಲಾವಣ್ಯ ಕುಮಾರಿ ಎಂಟ್ರಿ ಕೊಟ್ಟಿದ್ದಾರೆ.

‌ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ರಾಕ್ಷಸ ಹಾಗೂ ಗಂಧರ್ವರ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಮಿತಿಮೀರಿ ವರ್ತಿಸಿದ್ದಾರೆ. ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಅದ್ರಲ್ಲೂ ಅಸಭ್ಯ ಪದ ಪ್ರಯೋಗದ ವಿವಾದಕ್ಕೆ ಸಿಲುಕಿರುವ ಸ್ಪರ್ಧಿ ಮಂಜುಗೆ ಬಿಗ್‌ಬಾಸ್‌ ಕಠಿಣ ಶಿಕ್ಷೆಯನ್ನೇ ನೀಡಿದ್ದಾರೆ. ಈ ನಡುವಲ್ಲೇ ನವರಾತ್ರಿ ದಸರಾ ಹಬ್ಬದ ಸಂಭ್ರದಲ್ಲಿದ್ದ ಬಿಗ್‌ಬಾಸ್‌ ಮನೆಗೆ ಇದೀಗ ಹೊಸ ಸ್ಪರ್ಧಿಯಾಗಿ ಲಾವಣ್ಯ ಕುಮಾರಿ ಎಂಟ್ರಿ ಕೊಟ್ಟಿರುವುದು ಸಾಕಷ್ಟು ಕತೂಹಲ ಮೂಡಿಸಿದೆ.

View instagram embed

ಅಸಭ್ಯ ಮಾತಿಗೆ ಖಡಕ್‌ ಶಿಕ್ಷೆ ಕೊಟ್ಟ ಬಿಗ್‌ಬಾಸ್‌

ಬಿಗ್‌ಬಾಸ್‌ ಸೀಸನ್‌ 13ರ ಶೋನಲ್ಲಿ ಈ ವಾರ ಹೆಚ್ಚು ಚರ್ಚೆಗೆ ಕಾರಣವಾಗಿರೋದು ರಾಕ್ಷಸ ಮತ್ತು ಗಂಧರ್ವ ಟಾಸ್ಕ್‌. ಸಾಕಷ್ಟು ಗೊಂದಲ, ಗದ್ದಲದ ನಡುವಲ್ಲೇ ಸ್ಪರ್ಧಿಗಳು ಪರಸ್ಪರ ವಾಗ್ವಾದ ನಡೆಸುವ ಭರದಲ್ಲಿ ಮಾತಿನ ಚಕಮಕಿ ನಡೆದಿದೆ.

ಕಲರ್ಸ್‌ ಕನ್ನಡ ವಾಹಿನಿ ರಿಲೀಸ್‌ ಮಾಡಿರುವ ಪ್ರೋಮೋದಲ್ಲಿ ಮಂಜನ ವಿರುದ್ದ ಕಠಿಣ ಕ್ರಮಕೈಗೊಂಡಿರುವ ಸುಳಿವು ಸಿಕ್ಕಿದೆ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕೂಡ ಮಂಜ ಅಸಭ್ಯ ಪದಗಳನ್ನು ಬಳಕೆ ಮಾಡಿರುವುದಕ್ಕೆ ಬಿಗ್‌ಬಾಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಯ ಸದಸ್ಯರ ವ್ಯಕ್ತಿತ್ವವನ್ನು ನಿಂದಿಸುವ ರೀತಿಯಲ್ಲಿ ಮಂಜ ಮಾತನಾಡಿರುವುದನ್ನು ಸಹಿಸೋದಕ್ಕೆ ಸಾಧ್ಯವೇ ಇಲ್ಲಾ ಎಂದಿರುವ ಬಿಗ್‌ ಬಾಸ್‌ , ಮಂಜ ಬಾಗಿಲ ಮೂಲಕ ಹೊರಗೆ ಹೋಗುತ್ತಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಹೀಗಾಗಿ ಮಂಜನ ಬಿಗ್‌ ಬಾಸ್‌ ಪಯಣ ಅಂತ್ಯವಾಯ್ತು ಅನ್ನೋ ಚರ್ಚೆ ನಡೆಯುತ್ತಿದೆ.

ಇಡೀ ವಾರ ನಡೆದಿರುವ ಅಹಿತಕರ ಘಟನೆಯಿಂದಾಗಿ ಕಿಚ್ಚ ಸುದೀಪ್‌ (Kiccha Sudeep) ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಹೊಸ ಅತಿಥಿಯ ಆಗಮನ ಇದೀಗ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada Season 13) ಬಾರೀ ಕುತೂಹಲವನ್ನು ಮೂಡಿಸುತ್ತಿದೆ.