Drishyam 3 Ajay Devgn : ಮೊದಲ ದಿನವೇ ದಾಖಲೆಯ ಗಳಿಕೆ ಕಂಡ ದೃಶ್ಯಂ 3 : ಅಜಯ್‌ ದೇವಗನ್‌ ಅಭಿನಯಕ್ಕೆ ಅಭಿಮಾನಿಗಳು ಫಿದಾ

ನಟ ಅಜಯ್‌ ದೇವಗನ್‌ ವೃತ್ತಿ ಜೀವನದಲ್ಲಿಯೇ ದೃಶ್ಯಂ 3 ದೊಡ್ಡಮಟ್ಟದ ಓಪನಿಂಗ್‌ ಕೊಟ್ಟಿದೆ. ಅಲ್ಲದೇ ಬಾಕ್ಸಾಫಿಸ್‌ ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
drishyam 3 ajay devgn first day collections record
drishyam 3 ajay devgn first day collections record

Drishyam 3 Ajay Devgn : ಖ್ಯಾತ ಬಾಲಿವುಡ್‌ ನಟ ಅಜಯ್‌ ದೇವಗನ್‌ ನಟನೆಯ ದೃಶ್ಯಂ 3 ಸಿನಿಮಾ ಬಿಡುಗಡೆ ಆಗಿರುವ ಮೊದಲ ದಿನವೇ ದಾಖಲೆಯ ಗಳಿಕೆ ಕಂಡಿದೆ. ಭಾರತದಲ್ಲಿ ಒಂದೇ ದಿನ 66 ಕೋಟಿಗೂ ಅಧಿಕ ಗಳಿಕೆ ಮಾಡಿರುವ ದೃಶ್ಯಂ ಸಿನಿಮಾ ಒಟ್ಟಾರೆ 95 ಕೋಟಿಗೂ ಗಳಿಕೆ ಮಾಡಿದೆ. ಆದರೆ ಶತಕೋಟಿಗಳಿಕೆಯ ದಾಖಲೆಯಿಂದ ಜಸ್ಟ್‌ ಮಿಸ್‌ ಆಗಿದೆ.

ನಟ ಅಜಯ್‌ ದೇವಗನ್‌ ವೃತ್ತಿ ಜೀವನದಲ್ಲಿಯೇ ದೃಶ್ಯಂ 3 ದೊಡ್ಡಮಟ್ಟದ ಓಪನಿಂಗ್‌ ಕೊಟ್ಟಿದೆ. ಅಲ್ಲದೇ ಬಾಕ್ಸಾಫಿಸ್‌ ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನವೇ ಭರ್ಜರಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಆದರೆ ಮೊದಲ ದಿನವೇ ಶತಕೋಟಿ ಕ್ಲಬ್‌ ಸೇರುವಲ್ಲಿ ವಿಫಲವಾಗಿದೆ.

ದೃಶ್ಯಂ 3 ಸಿನಿಮಾ ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ಅನ್ನು ಒಳಗೊಂಡಿದ್ದು, ಈ ಸಿನಿಮಾ ಪ್ರೇಕ್ಷಕರಿಂದಲೂ ಉತ್ತಮ ಪ್ರಶಂಸೆ ಪಡೆಯುತ್ತಿದೆ. ಭಾರತದಲ್ಲಿಯೂ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಭಾರತದಾದ್ಯಂತ ಬರೋಬ್ಬರಿ 15,759 ಪ್ರದರ್ಶನಗಳನ್ನು ಕಂಡಿದ್ದು, ಮೊದಲ ದಿನವೇ ಬರೋಬ್ಬರಿ 66.75 ಕೋಟಿ ರೂಪಾಯಿ ಕಲೆಕ್ಷನ್ಸ್‌ ಮಾಡಿದೆ.

ಅಜಯ್‌ ದೇವಗನ್‌ ನಟನೆಯ ದೃಶ್ಯಂ, ದೃಶ್ಯ 2, ಸಿಂಗಂ ಅಗೇನ್‌, ಗೋಲ್‌ ಮಾಲ್‌ ಅಗೇನ್‌ ಸಿನಿಮಾಗಳ ಮೊದಲ ದಿನದ ಗಳಿಕೆಗಿಂತಲೂ ದೃಶ್ಯಂ 3 ಅಧಿಕ ಕಲೆಕ್ಷನ್ಸ್‌ ಮಾಡಿದೆ. ಮೊದಲ ದಿನವೇ ಭರ್ಜರಿ ಕಲೆಕ್ಷನ್ಸ್‌ನಿಂದ ವಾರಾಂತ್ಯ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ.

Topics

ಸಂಬಂಧಿತ ಸುದ್ದಿಗಳು