ಕಾಂತಾರ ಸಿನಿಮಾಕ್ಕೆ 4ರ ಸಂಭ್ರಮ : ರಿಷಬ್ ಶೆಟ್ಟಿ -ಹೊಂಬಾಳೆ ಫಿಲ್ಮ್ಸ್ ನಡುವೆ ತಣ್ಣಗಾಯಿತೇ ಬಾಂಧವ್ಯ

2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತಲ್ಲದೆ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿತ್ತು.

By ರಶ್ಮಿ ಎಸ್. | Rashmi S

1 min read

WhatsAppPost
kantara 4 years celebration rishab shetty hombale films relationship
kantara 4 years celebration rishab shetty hombale films relationship

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹೆಮ್ಮೆಯ ಡಿವೈನ್ ಬ್ಲಾಕ್‌ಬಸ್ಟರ್ ಕಾಂತಾರ ಸಿನಿಮಾ ತೆರೆಕಂಡು ಯಶಸ್ವಿಯಾಗಿ ನಾಲ್ಕು ವರ್ಷಗಳು ಪೂರೈಸಿವೆ.

2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತಲ್ಲದೆ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿತ್ತು.

ಆದರೆ, ಈ ಸಂಭ್ರಮದ ವಾರ್ಷಿಕೋತ್ಸವದ ಸಂದರ್ಭದಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ವಿವಾದಾತ್ಮಕ ಚರ್ಚೆ ಮುನ್ನೆಲೆಗೆ ಬಂದಿದೆ. ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಮೂಲಕ ಬಹುತೇಕ ಖಚಿತಗೊಂಡಿವೆ.

4ನೇ ವರ್ಷದ ಯಶಸ್ಸಿನ ಸವಿನೆನಪಿಗಾಗಿ ರಿಷಬ್ ಶೆಟ್ಟಿ ಅವರು ಪ್ರೇಕ್ಷಕರಿಗೆ ಮತ್ತು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ, ಈ ಪೋಸ್ಟ್‌ನಲ್ಲಿ ಅವರು ಎಲ್ಲೂ ತಮ್ಮನ್ನು ಚಿತ್ರರಂಗಕ್ಕೆ ಬೆಳೆಸಿದ ಹೊಂಬಾಳೆ ಫಿಲ್ಮ್ಸ್ ಹೆಸರನ್ನು ಉಲ್ಲೇಖಿಸಿಲ್ಲ.

ಅಷ್ಟೇ ಅಲ್ಲದೆ, ಅವರು ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ನಿರ್ಮಾಣ ಸಂಸ್ಥೆಯ ಅಧಿಕೃತ ಲೋಗೋ ಕೂಡ ಮಾಯವಾಗಿದೆ. ಇತ್ತ ಹೊಂಬಾಳೆ ಫಿಲ್ಮ್ಸ್ ಕೂಡ ತನ್ನ ಅಧಿಕೃತ ಖಾತೆಯಲ್ಲಿ ಚಿತ್ರದ ನೆನಪುಗಳನ್ನು ಹಂಚಿಕೊಂಡಿದೆಯಾದರೂ, ಸಿನಿಮಾದ ಮುಖ್ಯ ರೂವಾರಿ ರಿಷಬ್ ಶೆಟ್ಟಿ ಅವರ ಹೆಸರನ್ನು ಪೋಸ್ಟ್‌ನಲ್ಲಿ ಬಳಸದೆ ಕೇವಲ ಚಿತ್ರತಂಡಕ್ಕೆ ಧನ್ಯವಾದ ಎಂದಷ್ಟೇ ಬರೆದುಕೊಂಡಿದೆ.

ಇತ್ತೀಚೆಗೆ ನಡೆದ ಸೈಮಾ SIIMA ಪ್ರಶಸ್ತಿ ಸಮಾರಂಭದಲ್ಲಿ ಕಾಂತಾರ: ಚಾಪ್ಟರ್ 1 ಪ್ರಶಸ್ತಿ ಗೆದ್ದಾಗಲೂ ಹೊಂಬಾಳೆ ಸಂಸ್ಥೆ ಯಾವುದೇ ಪೋಸ್ಟ್ ಹಾಕದಿರುವುದು ಇವರಿಬ್ಬರ ನಡುವಿನ ವೈಮನಸ್ಸನ್ನು ಸಾಬೀತುಪಡಿಸುವಂತಿತ್ತು. ಈ ಸರಣಿ ಬೆಳವಣಿಗೆಗಳು ಕಾಂತಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ಮುಂಬರುವ ಚಿತ್ರಗಳ ಮೇಲೆ ಇದು ಬೀರಬಹುದಾದ ಪ್ರಭಾವದ ಕುರಿತು ಗಾಂಧಿನಗರದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.

Topics

ಸಂಬಂಧಿತ ಸುದ್ದಿಗಳು