ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ( Bigboss Kannada) ಹೊಸ ಸೀಸನ್ ಅತೀ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಬಿಗ್‌ಬಾಸ್ ಶೋಗಾಗಿ ಕಲರ್ ಕನ್ನಡ ವಾಹಿನಿ ಎರಡು ಪ್ರಸಿದ್ದ ಧಾರಾವಾಹಿಗಳಿಗೆ ಅಂತ್ಯ ಹಾಡಲು ರೆಡಿ ಆಗಿದೆ. ಬಿಗ್‌ಬಾಸ್ ಹಿನ್ನೆಲೆಯಲ್ಲಿ ಭಾರ್ಗವಿ ಎಲ್‌ಎಲ್‌ಬಿ ಹಾಗೂ ಪ್ರೇಮಕಾವ್ಯ ಇದೇ ತಿಂಗಳು ಮುಕ್ತಾಯಗೊಳ್ಳಲಿವೆ.
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್‌ಬಾಸ್‌ಶೋ ಕಿರುತೆರೆಯ ಇತಿಹಾಸದಲ್ಲಿಯೇ ಅತೀ ಹೆಚ್ಚಿ ಟಿಆರ್‌ಪಿಯನ್ನು ಹೊಂದಿದೆ. ಇದೇ ಕಾರಣದಿಂದಲೇ ಕಲರ್ಸ್ ಕನ್ನಡ ಜನಪ್ರಿಯ ಧಾರವಾಹಿಗಳನ್ನೇ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ ಭಾರ್ಗವಿ ಎಲ್‌ಎಲ್‌ಬಿ ಹಾಗೂ ಮಹಾಕಾವ್ಯ ಧಾರಾವಾಹಿಗಳು ಇದೇ ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಮುಕ್ತಾಯವಾಗಲಿದ್ದು, ಎರಡೂ ಧಾರವಾಹಿಗಳು ಕೂಡ ತಮ್ಮ ಕ್ಲೈಮ್ಯಾಕ್ಸ್ ಸಂಚಿಕೆಗಳನ್ನು ಪ್ರಸರ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಂಡಿವೆ ಎನ್ನಲಾಗುತ್ತಿದೆ.
ಭಾರ್ಗವಿ ಎಲ್‌ಎಲ್‌ಬಿ (Bhargavi LLB)
ಕಿರುತೆರೆ ಲೋಕದಲ್ಲಿಯೇ ಹೊಸ ಇತಿಹಾಸವನ್ನು ಸಷ್ಟಿಸಿರುವ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ, ನ್ಯಾಯ ಮತ್ತು ಕುಟುಂಬದ ನಡುವಿನ ರೋಚಕ ಕಥಾಹಂದವನ್ನು ಹೊಂದಿದೆ. ಕಾನೂನು ಸಮರವನ್ನು ಹೊಂದಿದ್ದ ಧಾರವಾಹಿ ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ
ಪ್ರೇಮಕಾವ್ಯ (Premakavya)
ಅಕ್ಕ-ತಂಗಿಯರ ಅಪಾರ ಬಾಂಧವ್ಯ, ಪ್ರೀತಿ ಮತ್ತು ಸಂಸಾರದ ಏರಿಳಿತಗಳ ಕಥಾಹಂದರ ಹೊಂದಿರುವ ಪ್ರೇಮ ಕಾವ್ಯ ತನ್ನದೇ ಆದ ಪ್ರೇಕ್ಷಕರನ್ನು ಹೊಂದಿದೆ. ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಒಳಗೊಂಡಿರುವ ಈ ಧಾರಾವಾಹಿ ಕೂಡ ತನ್ನ ಭಾವನಾತ್ಮಕ ಕ್ಲೈಮ್ಯಾಕ್ಸ್ ಸಂಚಿಕೆಗಳೊಂದಿಗೆ ವೀಕ್ಷಕರಿಗೆ ಕಾಯಂ ಆಗಿ ವಿದಾಯ ಹೇಳಲಿದೆ.
ಕಿರುತೆರೆಯ ಎರಡು ಪ್ರಖ್ಯಾತ ಧಾರಾವಾಹಿಗಳು ಇದೀಗ ಒಟ್ಟಿಗೆ ಮುಕ್ತಾಯ ಕಾಣುತ್ತಿರೋದು ಸಹಜವಾಗಿ ಕಿರುತೆರೆಯ ಪ್ರೇಕ್ಷಕರಿಗೆ ಬೇಸರವನ್ನು ಉಂಟು ಮಾಡಿದೆ. ಒಂದೆಡೆ ಕಾತುರ, ಕುತೂಹಲವಿದ್ರೆ ಮತ್ತೊಂದೆಡೆಯಲ್ಲಿ ಉತ್ತಮ ಕಥೆಯನ್ನು ಒಳಗೊಂಡಿದ್ದ ಧಾರವಾಹಿಗಳ ಮುಕ್ತಾಯದ ಕುರಿತು ಕಿರುತೆರೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.