ಕನ್ನಡ ಯೂಟ್ಯೂಬರ್ ಮಧು ಗೌಡ: ಸದ್ಯದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶಿಷ್ಟ ಶೈಲಿಯ ವ್ಲಾಗ್‌ಗಳ (Vlogs) ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿರುವ ಮಧು ಗೌಡ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ.
By Meghana Pranuth | ಮೇಘನಾ ಪ್ರಣೂತ್
1 min read
ಬೆಂಗಳೂರು:
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶಿಷ್ಟ ಶೈಲಿಯ ವ್ಲಾಗ್‌ಗಳ (Vlogs) ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿರುವ ಕನ್ನಡದ ಯೂಟ್ಯೂಬರ್ ಮಧು ಗೌಡ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ.
ಮಧು ಗೌಡ ಅವರು ಯೂಟ್ಯೂಬರ್ ನಿಖಿಲ್ ರವೀಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಅದ್ಧೂರಿ ವಿವಾಹ ಮಹೋತ್ಸವ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ನಿಖಿಲ್ ಅವರ ತಂಗಿ ನಿಶಾ ಹಾಗೂ ಮಧು ಗೌಡ ಮೊದಲು ಸ್ನೇಹಿತರಾಗಿದ್ದು, ಅವರ ಮೂಲಕವೇ ಮಧು ಮತ್ತು ನಿಖಿಲ್ ಪರಿಚಯವಾಗಿದ್ದರು. ಆ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿ, ಕೊನೆಗೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆಯಾಗಿ ಎರಡು ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಧು ಗೌಡ, ಸದ್ಯ ಎಂಟು ತಿಂಗಳ ಗರ್ಭಿಣಿಯಾಗಿದ್ದಾರೆ. ಇತ್ತೀಚೆಗೆ ಅವರು ಮಾಡಿಸಿರುವ ವಿಶೇಷ ಬೇಬಿ ಬಂಪ್ ಫೋಟೋಶೂಟ್ಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ.
ಯೂಟ್ಯೂಬ್ನಲ್ಲಿ ಜನಪ್ರಿಯತೆ, ಸ್ವಂತ ಉದ್ಯಮದಲ್ಲಿ ಯಶಸ್ಸು ಗಳಿಸಿ, ಇದೀಗ 25ನೇ ವಯಸ್ಸಿಗೆ ತಾಯಿಯಾಗುತ್ತಿರುವ ಮಧು ಗೌಡ ಅವರ ಜೀವನದ ಈ ಹೊಸ ಅಧ್ಯಾಯಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಮಧು ಗೌಡ ಮತ್ತು ನಿಖಿಲ್ ರವೀಂದ್ರ ಅವರ ಐಷಾರಾಮಿ ಜೀವನಶೈಲಿ, ಪದೇಪದೇ ಮಾಡುವ ಪ್ರವಾಸಗಳು, ಚಿನ್ನದ ಖರೀದಿ ಹಾಗೂ ಹೊಸ ಕಾರುಗಳನ್ನು ನೋಡಿ ಯೂಟ್ಯೂಬ್ನಿಂದಲೇ ಇವರಿಗೆ ಕೋಟಿ ಕೋಟಿ ಆದಾಯ ಬರುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಈ ಕುರಿತು ಸ್ಪಷ್ಟನೆ ನೀಡಿರುವ ನಿಖಿಲ್ ತಂಗಿ ನಿಶಾ, "ಹಿಂದಿ ಯೂಟ್ಯೂಬರ್ಗಳಿಗೆ ಹೋಲಿಸಿದರೆ ಕನ್ನಡ ಯೂಟ್ಯೂಬರ್ಗಳಿಗೆ ಅಷ್ಟೊಂದು ದೊಡ್ಡ ಪ್ರಮಾಣದ ಆದಾಯ ಬರುವುದು ಕಷ್ಟ. ವೀಕ್ಷಣೆ ಆಧಾರದ ಮೇಲೆ ತಿಂಗಳಿಗೆ ಸುಮಾರು ₹1 ಲಕ್ಷದಿಂದ ₹2 ಲಕ್ಷದವರೆಗೆ ಆದಾಯ ಬರಬಹುದು, ಆದರೆ ಈ ಮೊತ್ತ ಪ್ರತೀ ತಿಂಗಳು ಒಂದೇ ರೀತಿ ಇರುವುದಿಲ್ಲ" ಎಂದು ಹಂಚಿಕೊಂಡಿದ್ದಾರೆ.
ಮಧು ಗೌಡ ಕುಟುಂಬ ಚಿನ್ನ ಖರೀದಿಸಿದಾಗ ಅಥವಾ 'ಥಾರ್' ಕಾರು ಪಡೆದಾಗ, ಅದೆಲ್ಲವೂ ಯೂಟ್ಯೂಬ್ ಆದಾಯದಿಂದಲೇ ಬಂದಿದ್ದು ಎಂದು ಹಲವರು ಭಾವಿಸಿದ್ದರು. ಆದರೆ ಯೂಟ್ಯೂಬ್ ಇವರ ಏಕೈಕ ಆದಾಯದ ಮೂಲವಲ್ಲ. ಮಧು ಗೌಡ ಹಾಗೂ ನಿಖಿಲ್ ದಂಪತಿ ಜಾಹೀರಾತುಗಳು, ಬ್ರ್ಯಾಂಡ್ ಪ್ರಮೋಷನ್ ಹಾಗೂ ಸ್ವಂತ ಉದ್ಯಮಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಯೂಟ್ಯೂಬ್ ಜೊತೆಗೆ ಈ ಜೋಡಿ ತಮ್ಮದೇ ಆದ ಸೀರೆ ಉದ್ಯಮವನ್ನು (Saree Business) ಯಶಸ್ವಿಯಾಗಿ ನಡೆಸುತ್ತಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳನ್ನೇ ಬಳಸಿಕೊಂಡು ಉದ್ಯಮವನ್ನು ಪ್ರಮೋಟ್ ಮಾಡುತ್ತಿದ್ದು, ಬ್ಯುಸಿನೆಸ್ನಲ್ಲೂ ಉತ್ತಮ ಲಾಭ ಗಳಿಸುತ್ತಿದ್ದಾರೆ.
Topics
Related News
entertainment
‘ಟಾಕ್ಸಿಕ್’ ಟ್ರೇಲರ್ ರಿಲೀಸ್ಗೆ ಮುಹೂರ್ತ ಫಿಕ್ಸ್: ಅಧಿಕೃತ ಘೋಷಣೆ ಮಾಡಿದ ರಾಕಿಂಗ್ ಸ್ಟಾರ್!
entertainment
ನಾಳೆ ಬೆಂಗಳೂರಿನಲ್ಲಿ ‘DKD ಸೂಪರ್ ಮಾಮ್’ ಆಡಿಷನ್; ಸ್ಥಳ, ಸಮಯದ ಮಾಹಿತಿ ಇಲ್ಲಿದೆ
entertainment
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ 6 ತಿಂಗಳು ಬೆಡ್ರೆಸ್ಟ್ : ಶೂಟಿಂಗ್ ಬಂದ್
entertainment