ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ 6 ತಿಂಗಳು ಬೆಡ್‌ರೆಸ್ಟ್ : ಶೂಟಿಂಗ್ ಬಂದ್
ರಶ್ಮಿಕಾ ಮಂದಣ್ಣ ಅವರು ಪ್ರಸ್ತುತ 'ರಣಬಲಿ' ಮತ್ತು 'ಮೈಸಾ' ಸೇರಿ ಬಹು ನಿರೀಕ್ಷಿತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ಸಿನಿಮಾದಲ್ಲಿ ಆಕ್ಷನ್ ಸೀಕ್ವೆನ್ಸ್‌ಗಳಿತ್ತು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಪ್ಯಾನ್ ಇಂಡಿಯಾ ಸ್ಟಾರ್, 'ನ್ಯಾಷನಲ್ ಕ್ರಶ್ ಅಂತಾನೇ ಕರೆಯಿಸಿಕೊಳ್ಳುವ ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಗೆ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಿಡುವಿಲ್ಲದೇ ನಟಿಸುತ್ತಿದ್ದ ರಶ್ಮಿಕಾಗೆ ವೈದ್ಯರು ಬರೋಬ್ಬರಿ ಆರು ತಿಂಗಳ ವಿಶ್ರಾಂತಿ ಸೂಚಿಸಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿ ರಶ್ಮಿಕಾಗೆ ಆಗಿದ್ದೇನು ?
ರಶ್ಮಿಕಾ ಮಂದಣ್ಣ ಅವರು ಪ್ರಸ್ತುತ 'ರಣಬಲಿ' ಮತ್ತು 'ಮೈಸಾ' ಸೇರಿ ಬಹು ನಿರೀಕ್ಷಿತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ಸಿನಿಮಾದಲ್ಲಿ ಆಕ್ಷನ್ ಹಾಗೂ ಕಠಿಣ ಡ್ಯಾನ್ಸ್ ಸೀಕ್ವೆನ್ಸ್‌ಗಳಿತ್ತು. ಆದರೆ ಶೂಟಿಂಗ್ ವೇಳೆಯಲ್ಲಿ ಅತ್ಯಂತ ಕಠಿಣ ದೈಹಿಕ ಪರಿಶ್ರಮ ಮಾಡುತ್ತಿದ್ದರು. ಕಠಿಣ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದ ವೇಳೆಯಲ್ಲಿ ಸೊಂಟದ ಭಾಗದ ಮೇಲೆ ತೀವ್ರ ಒತ್ತಡ ಬಿದ್ದ ಪರಿಣಾಮ ರಶ್ಮಿಕಾ ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ.
6 ವಾರಗಳ ಕಡ್ಡಾಯ ವಿಶ್ರಾಂತಿ ಮತ್ತು ಸಿನಿಮಾಗಳ ಮುಂದೂಡಿಕೆ
ರಶ್ಮಿಕಾ ಮಂದಣ್ಣ ಅವರ ಸೊಂಟದ ಸ್ನಾಯುರಜ್ಜುಸಂಪೂರ್ಣವಾಗಿ ಬೇರ್ಪಟ್ಟಿದೆ. ಸಾಮಾನ್ಯವಾಗಿ ಟೆನಿಸ್, ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್‌ನಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಈ ಸಮಸ್ಯೆ ಕಾಡುತ್ತದೆ. ರಶ್ಮಿಕಾ ಮಂದಣ್ಣ ಅವರಿಗೂ ಕೂಡ ಇಂತಹದ್ದೇ ಗಂಭೀರ ಸ್ವರೂಪದ ಗಾಯ ಉಂಟಾಗಿದೆ. ಗಾಯದ ಗಂಭೀರತೆಯನ್ನು ಅರಿತಿರುವ ವೈದ್ಯರು ಸದ್ಯ ಆರು ತಿಂಗಳ ಕಾಲ ಯಾವುದೇ ಶೂಟಿಂಗ್‌ನಲ್ಲಿ ಪಾಲ್ಗೊಳ್ಳದೇ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಗಾಯದ ಗಂಭೀರತೆಯನ್ನು ಅರಿತ ವೈದ್ಯರು, ರಶ್ಮಿಕಾ ಮಂದಣ್ಣ ಅವರಿಗೆ ಕನಿಷ್ಠ ಆರು ವಾರಗಳ ಕಾಲ 'ಸಂಪೂರ್ಣ ವಿಶ್ರಾಂತಿ' (Complete Bed Rest) ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ. ಅಲ್ಲದೇ ಯಾವುದೇ ರೀತಿಯ ದೈಹಿಕ ಶ್ರಮದ ಕೆಲಸ ಮಾಡದಂತೆ ಸೂಚಿಸಿದ್ದಾರೆ.
ನಟಿ ರಶ್ಮಿಕಾ ಅವರಿಗೆ ವಿಶ್ರಾಂತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಅವರ ನಟನೆಯ ಸಿನಿಮಾಗಳ ಶೂಟಿಂಗ್ ಸದ್ಯ ಬಂದ್ ಆಗಿದೆ. ಅದ್ರಲ್ಲೂ 'ರಣಬಲಿ' ಮತ್ತು 'ಮೈಸಾ' ಚಿತ್ರತಂಡಗಳು ಶೂಟಿಂಗ್ ಅನ್ನು ಮುಂದೂಡಬೇಕಾದ ಅನಿವಾರ್ಯತೆಗೆ ಸಿಲುಕಿವೆ.
ಆತಂಕದಲ್ಲಿ ಅಭಿಮಾನಿಗಳು, ಚಿತ್ರತಂಡದಿಂದ ಆಶಾವಾದ
ತಮ್ಮ ನೆಚ್ಚಿನ ನಟಿಗೆ ಇಷ್ಟು ದೊಡ್ಡ ಮಟ್ಟದ ಗಾಯವಾಗಿದೆ ಎಂಬ ಸುದ್ದಿ ಕೇಳಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ "ಗೆಟ್ ವೆಲ್ ಸೂನ್" (Get Well Soon) ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ.
ರಶ್ಮಿಕಾ ಗಾಯಗೊಂಡಿರುವ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ರಶ್ಮಿಕಾ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲಿಯೇ ಗುಣಮುಖರಾಗಿ ಸಿನಿಮಾದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಚಿತ್ರ ತಂಡ ವ್ಯಕ್ತಪಡಿಸಿದೆ.
Topics
ಸಂಬಂಧಿತ ಸುದ್ದಿಗಳು
entertainment
ಬಣ್ಣದ ಲೋಕಕ್ಕೆ ಅನಂತ್ ನಾಗ್ ಗುಡ್ಬೈ.. ಅಸಲಿ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
entertainment
ಸಮಂತಾ ಮಾತೃತ್ವದ ಸಂಭ್ರಮದಲ್ಲಿ: ಗರ್ಭಧಾರಣೆಯ ಅಚ್ಚರಿಯ ಕ್ಷಣಗಳನ್ನು ಬಿಚ್ಚಿಟ್ಟ ನಟಿ!
entertainment
ಟಾಕ್ಸಿಕ್ ಸೋತಾಯ್ತು..ಇನ್ನಾದರೂ ಸೆಟ್ಟೇರುತ್ತಾ ಕೆಜಿಎಫ್ -3..ಯಶ್ಗೆ ಫ್ಯಾನ್ಸ್ ಪ್ರಶ್ನೆ
entertainment

