‘ಟಾಕ್ಸಿಕ್’ ಟ್ರೇಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್: ಅಧಿಕೃತ ಘೋಷಣೆ ಮಾಡಿದ ರಾಕಿಂಗ್ ಸ್ಟಾರ್!
ಯಶ್ ಅಭಿಮಾನಿಗಳ ಕಾಯುವಿಕೆಗೆ ಸಿಹಿ ಸುದ್ದಿ ಸಿಕ್ಕಿದೆ.ಸಿನಿಮಾ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಆಗಸ್ಟ್ 8ಕ್ಕೆ ಟ್ರೇಲರ್ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
By Meghana Pranuth | ಮೇಘನಾ ಪ್ರಣೂತ್
1 min read
‘ಕೆಜಿಎಫ್ 2’ ನಂತರ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಸಿಕ್ಕ ಉತ್ತರವೇ ‘ಟಾಕ್ಸಿಕ್ʼ ಕಳೆದೆರಡು ವರ್ಷಗಳಿಂದ ಈ ಸಿನಿಮಾದ ಒಂದೊಂದು ಅಪ್ಡೇಟ್ಗೂ ಇಡೀ ಪ್ಯಾನ್ ಇಂಡಿಯಾ ಪ್ರೇಕ್ಷಕರು ಕಾಯುತ್ತಿದ್ದರು. ಈಗ ಯಶ್ ಅಭಿಮಾನಿಗಳ ಆ ಕಾಯುವಿಕೆಗೆ ಸಿಹಿ ಸುದ್ದಿ ಸಿಕ್ಕಿದೆ.
ಸಿನಿಮಾ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಆಗಸ್ಟ್ 8ಕ್ಕೆ ಟ್ರೇಲರ್ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಹೊಸ ಪೋಸ್ಟರ್ನಲ್ಲಿ ಯಶ್ ನಿರ್ವಹಿಸುತ್ತಿರುವ ‘ರಾಯಾ’ ಪಾತ್ರದ ನೆರಳು ಹಾಗೂ ಅವರ ಕೈಯಲ್ಲಿರುವ 'ಟಾಮಿ ಗನ್' ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಆಗಸ್ಟ್ 8ರಂದೇ ಈ ಚಿತ್ರದ ಶೂಟಿಂಗ್ ಶುರುವಾಗಿ 2 ವರ್ಷಗಳು ಪೂರೈಸಲಿವೆ. ಅದೇ ವಿಶೇಷ ದಿನದಂದು ಟ್ರೇಲರ್ ಲಾಂಚ್ ಆಗುತ್ತಿರುವುದು ಮತ್ತೊಂದು ಕುತೂಹಲ.
ಈ ಬಿಗ್ ಬಜೆಟ್ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯಗಳಿಗೆ ಬೆಂಗಳೂರಿನಿಂದಲೇ ಚಾಲನೆ ಸಿಗಲಿದೆ. ಆಗಸ್ಟ್ 8 ರಂದು ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಅದ್ಧೂರಿಯಾಗಿ ಟ್ರೇಲರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಇಲ್ಲಿಯವರೆಗೆ ಬಿಡುಗಡೆಯಾದ ಸಣ್ಣ ಝಲಕ್‌ಗಳು ಪ್ರೇಕ್ಷಕರಲ್ಲಿ ಕೇವಲ ಕುತೂಹಲ ಹೆಚ್ಚಿಸಿದ್ದವು. ಆದರೆ ಕಥೆ ಏನಿರಬಹುದುಎಂಬ ರಹಸ್ಯ ಹಾಗೆಯೇ ಉಳಿದಿತ್ತು. ಈ ಟ್ರೇಲರ್‌ನಲ್ಲಿ ಚಿತ್ರದಭವ್ಯತೆ, ಪಾತ್ರಗಳ ಗತ್ತುಮತ್ತುಕಥೆಯ ಸಣ್ಣಸುಳಿವು ಸಿಗಲಿದೆ. ಗೀತು ಮೋಹನ್ ಅವರ ವಿಭಿನ್ನ ಮೇಕಿಂಗ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.
Topics
ಸಂಬಂಧಿತ ಸುದ್ದಿಗಳು
entertainment
ಬಣ್ಣದ ಲೋಕಕ್ಕೆ ಅನಂತ್ ನಾಗ್ ಗುಡ್ಬೈ.. ಅಸಲಿ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
entertainment
ಸಮಂತಾ ಮಾತೃತ್ವದ ಸಂಭ್ರಮದಲ್ಲಿ: ಗರ್ಭಧಾರಣೆಯ ಅಚ್ಚರಿಯ ಕ್ಷಣಗಳನ್ನು ಬಿಚ್ಚಿಟ್ಟ ನಟಿ!
entertainment
ಟಾಕ್ಸಿಕ್ ಸೋತಾಯ್ತು..ಇನ್ನಾದರೂ ಸೆಟ್ಟೇರುತ್ತಾ ಕೆಜಿಎಫ್ -3..ಯಶ್ಗೆ ಫ್ಯಾನ್ಸ್ ಪ್ರಶ್ನೆ
entertainment

