entertainmentಪ್ರಮುಖ ಸುದ್ದಿಗಳು

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವಾ ವಿಧಿವಶ : ರಜನಿಕಾಂತ್‌ ಅಂತಿಮ ನಮನ

ಸಂಗೀತ ನಿರ್ದೇಶಕ ದೇವಾ ಅವರು ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಒಟ್ಟು 400ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Music Composer Deva Dies At 75
Music Composer Deva Dies At 75

Music Composer Deva Dies : ತಮಿಳು ಚಿತ್ರರಂಗದ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವಾ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಖ್ಯಾತ ನಟ ರಜನಿಕಾಂತ್‌ ಸೇರಿದಂತೆ ಸಿನಿಮಾ ರಂಗದ ದಿಗ್ಗಜರು ಅಂತಿಮ ನಮನ ಸಲ್ಲಿಸಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದೇವಾ ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ. 1950 ನವೆಂಬರ್ 20ರಂದು ಜನಿಸಿದ ದೇವನೇಸನ್ ಚೊಕ್ಕಲಿಂಗಂ (ದೇವಾ), ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮೊದಲೇ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಸಂಗೀತ ನಿರ್ದೇಶಕ ದೇವಾ ಅವರು ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಒಟ್ಟು 400ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದ್ರಲ್ಲೂ ಗಾನಾ ಸಂಪ್ರದಾಯವನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ದೇವಾ ಅವರು ಧನರಾಜ್‌ ಮಾಸ್ಟರ್‌ ಅವರ ಬಳಿಯಲ್ಲಿ ಪಿಯಾನೋ ತರಬೇತಿ ಪಡೆದಿದ್ದು, ಅಲ್ಲದೇ ಜೆಬಿ ಕೃಷ್ಣ ಅವರ ಬಳಿ ಹಾರ್ಮೋನಿಯಂ ಜೊತೆಗೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದರು. ಇನ್ನು ಧನರಾಜ್‌ ಮಾಸ್ಟರ್‌ ಬಳಿಯಲ್ಲಿ ಇಳಯರಾಜಾ ಕೂಡ ಸಂಗೀತ ಅಭ್ಯಾಸ ಮಾಡಿದ್ದರು. ದೇವಾ ಅವರ ಸಹೋದರರಾದ ಸುಬೇಶ್‌ ಮತ್ತು ಮುರುಳಿ ವಾದ್ಯಗಾರರಾಗಿದ್ದು, ದೇವಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಹಕಾರ ಮಾಡಿದ್ದರು.

1986ರಲ್ಲಿ ತೆರೆಕಂಡ ಮಟ್ಟುಕ್ಕಾರ ಮನ್ನಾರು' (Mattukkara Mannaru) ಸಿನಿಮಾದ ಮೂಲಕ ದೇವಾ ತಮಿಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶರಾಗಿ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಸೂಪರ್‌ ಹಿಟ್‌ ಆಗಿದ್ದು, ದೇವಾ ಹಿಂದಿರುಗಿ ನೋಡಲೇ ಇಲ್ಲ.

'ಮನಸುಕ್ಕೆತ್ತ ಮಹಾರಸ' (Manasukketha Maharasa), 'ವೈಗಾಸಿ ಪೊರಂತಾಚು' (Vaigasi Poranthachu) ಸಿನಿಮಾ ದೇವಾ ಅವರಿಗೆ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿತ್ತು. 1996ರ ಒಂದೇ ವರ್ಷದಲ್ಲಿ ದೇವಾ ಅವರು ಬರೋಬ್ಬರಿ 36 ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಕೇವಲ ತಮಿಳು ಸಿನಿಮಾಗಳಷ್ಟೇ ಅಲ್ಲಾ, ಕನ್ನಡ, ತೆಲುಗು ಹಾಗೂ ಮಲಯಾಲಂ ಸಿನಿಮಾಗಳಿಗೂ ಅವರು ಸಂಗೀತ ನೀಡಿದ್ದಾರೆ.

ದೇವಾ ನಿಧನ : ಕಂಬನಿ ಮಿಡಿದಿ ಚಿತ್ರರಂಗ

ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್‌ ಸೇರಿದಂತೆ ಸಿನಿಮಾ ರಂಗದ ದಿಗ್ಗಜರು ದೇವಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇನ್ನು ನಟ ಕಾರ್ತಿ ಕೂಡ ಎಕ್ಸ್‌ ನಲ್ಲಿ ದೇವಾ ಅವರ ಪೋಟೋ ಅವನ್ನು ಹಾಕಿ ಸಂತಾಪ ಸೂಚಿಸಿದ್ದಾರೆ. ಇನ್ನು ಸಂಗೀತ ಸಂಯೋಜಕ ಸ್ಯಾಮ್‌ ಸಿಎಸ್‌ ಕೂಡ ಸಂತಾಪ ಸೂಚಿಸಿದ್ದಾರೆ. ನಿಮ್ಮ ಮಧುರ ಗೀತೆಗಳು ಎಂದಿಗೂ ಮರೆಯದ ಹಾಡಾಗಿದೆ. ಅವು ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ನಿಮ್‌ ಅಸಾಧಾರಣ ಪ್ರತಿಭೆಯಿಂದ ತಮಿಳು ಸಂಗೀತವನ್ನು ಶ್ರೀಮಂತಗೊಳಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಎಂದೇ ಖ್ಯಾತರಾಗಿರುವ ರಜನಿಕಾಂತ್‌ ಜೊತೆಯಲ್ಲಿ ದೇವಾ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅಣ್ಣಾಮಲೈ, ಬಾಷಾ, ಅರುಣಾಚಲಂ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ದೇವಾ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಸಾಧನೆಗಾಗಿ ತಮಿಳುನಾಡು ಸರಕಾರ ಕಲೈಮಾಮಣಿ ಪ್ರಶಸ್ತಿ, ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೂ ಬಾಜನರಾಗಿದ್ದಾರೆ.

Topics

ಸಂಬಂಧಿತ ಸುದ್ದಿಗಳು