"ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ತೆರೆಕಂಡಿದ್ದು, ಮೊದಲ ಪ್ರದರ್ಶನದಿಂದಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಆರಂಭದಿಂದಲೂ ತೆರೆ ಮೇಲೆ ಯಶ್ ಅಲ್ಟ್ರಾ ಸ್ಟೈಲಿಶ್ ಹಾಗೂ ಮಾಸ್ ಲುಕ್‌ನಲ್ಲಿ ಮಿಂಚಿದ್ದು, ಅಭಿಮಾನಿಗಳಿಗೆ ಹಬ್ಬದೂಟ ಉಣಬಡಿಸಿದ ಅನುಭವವಾಗಿದೆ."
"ಸಿನಿಮಾದಲ್ಲಿ ಪಾತ್ರಗಳ ಪರಿಚಯ ಹಂತ ಹಂತವಾಗಿ ಸಾಗಲಿದ್ದು, ಇದರ ನಡುವೆ ಭರ್ಜರಿ ಆಕ್ಷನ್ ಸೀನ್‌ಗಳು ಸೀಟಿನ ತುದಿಯಲ್ಲಿ ಕೂರಿಸುತ್ತವೆ. ಮಾಸ್ ಆಕ್ಷನ್ ಜೊತೆಗೆ ಗ್ರ್ಯಾಂಡ್ ಬಿಜಿಎಂ ಮತ್ತು ಕಲರ್‌ಫುಲ್ ಹಾಡುಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿವೆ. 3 ಗಂಟೆಗೂ ಅಧಿಕ ಅವಧಿಯ ಸಿನಿಮಾವಾಗಿದ್ದರೂ, ಅತ್ಯದ್ಭುತ ಸ್ಕ್ರೀನ್‌ಪ್ಲೇಯಿಂದ ಸಿನಿಮಾ ಎಲ್ಲೂ ಬೋರ್ ಹೊಡೆಸುವುದಿಲ್ಲ."
ಚಿತ್ರದಲ್ಲಿ ಯಶ್ ಸೇರಿದಂತೆ ಎಲ್ಲಾ ತಾರೆಯರ ಎಂಟ್ರಿ ಅತ್ಯಂತ ಖಡಕ್ ಆಗಿದೆ. ಅದರಲ್ಲೂ ನಟಿಯರ ಪಾತ್ರಗಳು ಕಥೆಗೆ ಸಖತ್ ಟ್ವಿಸ್ಟ್ ನೀಡುತ್ತವೆ. ಮುಖ್ಯವಾಗಿ ಯಶ್ ಮತ್ತು ಕಿಯಾರಾ ಅಡ್ವಾಣಿ ನಡುವಿನ ಕೆಮಿಸ್ಟ್ರಿ ತೆರೆ ಮೇಲೆ ಚೆನ್ನಾಗಿ ವರ್ಕೌಟ್ ಆಗಿದೆ. ಇಂಟರ್ವಲ್ ನಂತರ ಸಿನಿಮಾ ಹೊಸ ಮೈಲೇಜ್ ಪಡೆದುಕೊಳ್ಳಲಿದ್ದು, ನಾಯಕ 'ರಾಯ'ನ ಕೊನೆಯ ನಡೆ ಏನಾಗಲಿದೆ ಎಂಬುದೇ ಸಿನಿಮಾದ ದೊಡ್ಡ ಕುತೂಹಲ."
"ಒಟ್ಟಿನಲ್ಲಿ ಮಾಸ್ ಆಕ್ಷನ್, ಯಶ್ ಅವರ ಸ್ಟೈಲಿಶ್ ಲುಕ್ ಹಾಗೂ ಅದ್ಧೂರಿ ಮೇಕಿಂಗ್ ಬಯಸುವ ಪ್ರೇಕ್ಷಕರಿಗೆ 'ಟಾಕ್ಸಿಕ್' ಸಿನಿಮಾ ಸಂಪೂರ್ಣ ಮನರಂಜನೆ ನೀಡುತ್ತಿದೆ.