Kota : ಟೈಗರ್ ಶ್ರಾಫ್ ಮೇಲೆ ದಾಳಿ ಪ್ರಕರಣ ; ಕೋಟಾದಲ್ಲಿ ಮೂವರು ಅರೆಸ್ಟ್
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಆರೋಪಿಗಳು ರೈಲಿನಲ್ಲಿ ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಮುಂಬೈ : ಬಾಲಿವುಡ್ ಖ್ಯಾತ ನಟ ಟೈಗರ್ ಶ್ರಾಫ್ ಮೇಲೆ ನಡೆದಿರುವ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟಾದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಈ ದಾಳಿಯನ್ನು ನಡೆಸುವ ಸಲುವಾಗಿ ಮುಂಗವಾಗಿ 50 ಸಾವಿರ ರೂಪಾಯಿಯನ್ನು ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಆರೋಪಿಗಳು ರೈಲಿನಲ್ಲಿ ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ಮುಂಬೈ ಹಾಗೂ ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿ ಕೋಟಾ ರೈಲ್ವೆ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿದ್ದಾರೆ.
ಟೈಗರ್ ಶ್ರಾಫ್ ಮೇಲಿನ ದಾಳಿಕೋರರನ್ನು ಬಂಧಿಸಿರುವ ಕುರಿತು, ಕೋಟಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ತೇಜಸ್ವಿನಿ ಗೌತಮ್ ಅವರು ಖಚಿತ ಮಾಹಿತಿ ನೀಡಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಹರಿಯಾಣ ಮೂಲದವರಾಗಿದ್ದರೆ, ಓರ್ವ ಬಿಹಾರ ಮೂಲದವನು ಎಂದು ತಿಳಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಹರಿಯಾಣದ ಸೋನಿಪತ್‌ನ ರೆಹಾನ್ (18 ವರ್ಷ), ಬಿಹಾರ ಮೂಲದ ಬೆಗುಸರಾಯ್ ಮೂಲದ ರಿತಿಕ್ (22 ವರ್ಷ) ಅಲ್ಲದೇ ಮತ್ತೋರ್ವ ವ್ಯಕ್ತಿ ಅಪ್ರಾಪ್ತನಾಗಿದ್ದು, ಈತ ಹರಿಯಾಣ ಮೂಲದವನು ಎಂದು ತಿಳಿದು ಬಂದಿದೆ. ಸೇರಿದ್ದಾರೆ. ಮೂರನೇ ಶಂಕಿತ ಹರಿಯಾಣದ ಅಪ್ರಾಪ್ತನಾಗಿದ್ದಾನೆ.
ಟೈಗರ್ ಶ್ರಾಫ್ ಮೇಲಿನ ದಾಳಿಗೆ 50 ಸಾವಿರ ರೂ. ಅಡ್ವಾನ್ಸ್
ಟೈಗರ್ ಶ್ರಾಪ್ ಮೇಲೆ ದಾಳಿ ನಡೆಸುವ ಸಲುವಾಗಿ ಮೂವರು ಒಟ್ಟಾಗಿ 50 ಸಾವಿರ ರೂಪಾಯಿ ಹಣವನ್ನು ಪಡೆದಿದ್ದರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಈ ಗುಂಡಿನ ದಾಳಿಯಲ್ಲಿ ಈ ಮೂವರು ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರಾ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.
ಗುಂಡು ಹಾರಿಸುವುದಕ್ಕೆ ಬಳಸಿದ್ದಾರೆ ಬೈಕ್ ಸದ್ಯ ಅಂದೇರಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ. ಅದನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿ ಸಿಟಿಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಕೋಟಾ ಪೊಲೀಸರು ಆರೋಪಿಯನ್ನು ಇದೀಗ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಂಧಿಸಿ ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಟೈಗರ್ ಶ್ರಾಫ್ ಮೇಲೆ 5 ಸುತ್ತು ಗುಂಡಿನ ದಾಳಿ
ಮುಂಬೈನ ಜುಹು ಪ್ರದೇಶದ ಪುಷ್ಪಾ ಪಾರ್ಕ್‌ನಲ್ಲಿ ತನ್ನ ಕಾರಿನಲ್ಲಿ ನಿನ್ನೆ ಸಂಜೆ 7 ಗಂಟೆಯ ಸುಮಾರಿಗೆ ತೆರಳುತ್ತಿದ್ದ ವೇಳೆಯಲ್ಲಿ ಈ ಗುಂಡಿನ ದಾಳಿ ನಡೆಸಲಾಗಿದೆ. ಮೂವರು ದುಷ್ಕರ್ಮಿಗಳು ನಟ ಪ್ರಯಾಣಿಸುತ್ತದ್ದ ಕಾರಿನ ಮೇಲೆ ಒಟ್ಟು 5 ಸುತ್ತು ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಚಾಲಕ ಸೇರಿ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೃತ್ಯವೇ ?
ಟೈಗರ್ ಶ್ರಾಫ್ ಮೇಲಿನ ದಾಳಿ ಪ್ರಕರಣದ ಬೆನ್ನಲ್ಲೇ ಇದೀಗ ಇದೀಗ ಇಡೀ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅದ್ರಲ್ಲೂ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಕಾರ್ಯಕರ್ತರಾದ ಅನಿಲ್ ಪಂಡಿತ್ ಹಾಗೂ ಹರ್ಮನ್ ಸಂಧು ಸಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹೊತ್ತುಕೊಂಡಿದ್ದಾರೆ.
Topics
ಸಂಬಂಧಿತ ಸುದ್ದಿಗಳು
entertainment
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರ ವಿರುದ್ಧ ಎಫ್ಐಆರ್ ದಾಖಲು
entertainment
ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ಗೆ ಕಿಚ್ಚನಿಂದ ಕ್ಲಾಸ್ : ಪಿಸುಗುಟ್ಟಿದರೆ 1 ವಾರ ಮೈಕ್ ಕಟ್ ಎಂದ ಸುದೀಪ್
entertainment
ಜೈಲರ್ 2 ಆರ್ಭಟಕ್ಕೂ ಜಗ್ಗದ ಪ್ರೇಮದ ಊರಲಿ : 100 ಕೋಟಿ ಕ್ಲಬ್ನತ್ತ ಪ್ರೇಮದ ಊರಲಿ ಸಿನಿಮಾ
entertainment

