ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರ ವಿರುದ್ಧ ಎಫ್ಐಆರ್ ದಾಖಲು
ಬಾಲಿವುಡ್ ನಟ ಹಾಗೂ ಹಿರಿಯ ನಟ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ
By ಅನಿಲ್ ಗುಂಡ್ಮಿ | Anil Gundmi
2 min read
ಬಾಲಿವುಡ್ ನಟ ಹಾಗೂ ಹಿರಿಯ ನಟ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುರುತು ಪತ್ತೆಯಾಗದ ಮೂವರು ವ್ಯಕ್ತಿಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಮುಂಬೈ ಪೊಲೀಸರ ಪ್ರಕಾರ, ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 109(1) ಮತ್ತು 3(5) ಹಾಗೂ ಶಸ್ತ್ರಾಸ್ತ್ರ ಕಾಯ್ದೆ (Arms Act)ಯ ಸೆಕ್ಷನ್ 3 ಮತ್ತು 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿವೆ. ಪೊಲೀಸ್ ಉಪ ಆಯುಕ್ತ (DCP) ಮೋಹಿತ್ ಗಾರ್ಗ್ ಅವರ ಮಾಹಿತಿ ಪ್ರಕಾರ, ಭಾನುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಟೈಗರ್ ಶ್ರಾಫ್ ಅವರು ಫುಟ್ಬಾಲ್ ಕ್ಲಬ್ನಿಂದ ತಮ್ಮ ಕಾರಿನಲ್ಲಿ ಹೊರಡುತ್ತಿದ್ದಾಗ, ಗುರುತು ಪತ್ತೆಯಾಗದ ದುಷ್ಕರ್ಮಿಗಳು ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್, ಅವರಿಗೆ ಯಾವುದೇ ಯಾವುದೇ ಪ್ರಾಣಾಪಾಯವಾಗದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ, ಟೈಗರ್ ಶ್ರಾಫ್ ಅವರ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನಿಗೆ ಗುಂಡೇಟು ತಗುಲಿದ್ದು, ಟೈಗರ್ ಶ್ರಾಫ್ ಅವರಿಗೆ ಯಾವುದೇ ಗುಂಡಿನ ಗಾಯಗಳಾಗಿಲ್ಲ.
ಘಟನೆಯ ಸುದ್ದಿ ಹೊರಬಿದ್ದ ಬಳಿಕ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾನುವಾರ ರಾತ್ರಿ ಟೈಗರ್ ಶ್ರಾಫ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿ, ಮಹಾರಾಷ್ಟ್ರ ಸರ್ಕಾರ ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಈ ಭೇಟಿಯ ವೇಳೆ ತೆಗೆದ ಚಿತ್ರಗಳಲ್ಲಿ ಟೈಗರ್ ಶ್ರಾಫ್ ಅವರು ಏಕನಾಥ್ ಶಿಂಧೆ ಅವರೊಂದಿಗೆ ಮಾತನಾಡುತ್ತಿರುವುದು ಕಾಣಿಸಿಕೊಂಡಿದೆ. ಟೈಗರ್ ಅವರ ಭುಜ ಮತ್ತು ಎದೆ ಭಾಗದಲ್ಲಿ ಡ್ರೆಸ್ಸಿಂಗ್ ಮಾಡಲಾಗಿದ್ದು, ಬಲಗೈಗೆ ಬ್ಯಾಂಡೇಜ್ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಅವರ ತಾಯಿ ಆಯೇಷಾ ಶ್ರಾಫ್ ಕೂಡ ಉಪಸ್ಥಿತರಿದ್ದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ಈ ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸಿ. ಗನ್ಪೌಡರ್ನ ಅವಶೇಷಗಳು ಮತ್ತು ಒಡೆದ ಗಾಜಿನ ಚೂರುಗಳಿಂದ ಟೈಗರ್ ಶ್ರಾಫ್ ಅವರ ಎಡಗೈಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅವರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದರು. ಜೊತೆಗೆ, ಅವರ ಕುಟುಂಬದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
"ಇದು ಅತ್ಯಂತ ಗಂಭೀರವಾದ ಘಟನೆ. ಐದು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಆದರೆ ಅದೃಷ್ಟವಶಾತ್ ಟೈಗರ್ ಶ್ರಾಫ್ ಸುರಕ್ಷಿತರಾಗಿದ್ದಾರೆ. ಅವರ ಚಾಲಕ ಗಾಯಗೊಂಡಿದ್ದು, ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ನಾನು ನಟರನ್ನು ಭೇಟಿ ಮಾಡಿದ್ದೇನೆ. ಗನ್ಪೌಡರ್ನ ಅವಶೇಷಗಳು ಮತ್ತು ಒಡೆದ ಗಾಜಿನ ಚೂರುಗಳಿಂದ ಅವರ ಎಡಗೈಗೆ ಗಾಯಗಳಾಗಿವೆ.
ಅವರು ಮತ್ತು ಅವರ ತಾಯಿ ಇಬ್ಬರೂ ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸಾರ್ವಜನಿಕ ವ್ಯಕ್ತಿಗಳಿಗೆ ಬಹಿರಂಗ ಬೆದರಿಕೆಗಳು ಬರುತ್ತಿರುವ ಇಂತಹ ಸಂದರ್ಭದಲ್ಲಿ, ಮಹಾರಾಷ್ಟ್ರ ಸರ್ಕಾರ ಅವರ ಬೆಂಬಲಕ್ಕೆ ಸದಾ ನಿಲ್ಲಲಿದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ.
Topics
ಸಂಬಂಧಿತ ಸುದ್ದಿಗಳು
entertainment
ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ಗೆ ಕಿಚ್ಚನಿಂದ ಕ್ಲಾಸ್ : ಪಿಸುಗುಟ್ಟಿದರೆ 1 ವಾರ ಮೈಕ್ ಕಟ್ ಎಂದ ಸುದೀಪ್
entertainment
ಜೈಲರ್ 2 ಆರ್ಭಟಕ್ಕೂ ಜಗ್ಗದ ಪ್ರೇಮದ ಊರಲಿ : 100 ಕೋಟಿ ಕ್ಲಬ್ನತ್ತ ಪ್ರೇಮದ ಊರಲಿ ಸಿನಿಮಾ
entertainment
ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವಾ ವಿಧಿವಶ : ರಜನಿಕಾಂತ್ ಅಂತಿಮ ನಮನ
entertainment

