ಕೆಜಿಎಫ್ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಅಮೇರಿಕಾದಲ್ಲಿ ಟಾಕ್ಸಿಕ್ ಟಿಕೆಟ್ ಖರೀದಿಗೆ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಮತ್ತೊಂದೆಡೆಯಲ್ಲಿ ಟಾಕ್ಸಿಕ್‌ಗಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ತಿರುಪತಿಗೆ ತಿ್ಮ್ಮಪ್ಪನಿಗೆ ಮುಡಿಕೊಟ್ಟಿದ್ದಾರೆಂಬ ಸುದ್ದಿ ಹೊರಬಿದ್ದಿದೆ.
ಅಗಸ್ಟ್ 26ರಂದು ವಿಶ್ವದಾದ್ಯಂತ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಆಗುತ್ತಿದೆ. ದೇಶ, ವಿದೇಶಗಳಲ್ಲಿಯೂ ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಕಾತರರಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಒಂದು ವಾರದ ಮೊದಲೇ ಅಮೇರಿಕಾದಲ್ಲಿ ಹೊಸ ದಾಖಲೆ ಬರೆದಿದೆ. ಅಮೇರಿಕಾದಲ್ಲಿ ಅಡ್ವಾಜ್ಸ್ ಬುಕ್ಕಿಂಗ್‌ನಲ್ಲಿ ಒಂದು ಕೋಟಿಗೂ ಅಧಿಕಗಳಿಕೆ ಮಾಡಿದೆ. ಕನ್ನಡದ ಸಿನಿಮಾವೊಂದು ಬಿಡುಗಡೆಗೆ ಮೊದಲೇ ಇಷ್ಟೊಂದು ಹೈಪ್ ಕ್ರಿಯೆಟ್ ಮಾಡಿರೋದು ಇದೇ ಮೊದಲು.
ಅಮೇರಿಕಾ ಮಾತ್ರವಲ್ಲದೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿಯೂ ಟಾಕ್ಸಿಕ್ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಕೆಜಿಎಫ್ ಸಿನಿಮಾದ ಮೂಲಕ ವಿಶ್ವದ ಗಮನ ಸೆಳೆದಿರುವ ಯಶ್ ಇದೀಗ ಟಾಕ್ಸಿಕ್ ಮೂಲಕ ಹೊಸ ರೂಪದಲ್ಲಿ ಎಂಟ್ರಿ ಕೊಡಲಿದ್ದಾರೆ. ಅಷ್ಟೇ ಅಲ್ಲದೇ ಗ್ಲೋಬಲ್ ಸ್ಟಾರ್ ಆಗಿಯೂ ಯಶ್ ಹೊರ ಹೊಮ್ಮಲಿದ್ದಾರೆ.
ಕೆವಿಎನ್ ಪ್ರೊಡಕ್ಸನ್ಸ್ ಮತ್ತು ಯಶ್ ಅವರ ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಸಿನಿಮಾದಲ್ಲಿ ಕಿಯಾರ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಬಣ್ಣ ಹಚ್ಚಿದ್ದಾರೆ. ಅಂತರಾಷ್ಟ್ರಯ ಮಟ್ಟದಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೋದು ಖಚಿತ ಎನ್ನಲಾಗುತ್ತಿದೆ.
ಮತ್ತೊಂದೆಡೆಯಲ್ಲಿ ಸಿನಿಮಾದ ನಟಿ ನಯನತಾರಾ ಅವರು ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಟಾಕ್ಸಿಕ್ ಸಿನಿಮಾದ ಸಕ್ಸಸ್ ಆಗಿ ನಯನತಾರಾ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ನಟಿಯ ಪೋಟೋದ ಅಸಲಿ ಸತ್ಯ ಹೊರಬಿದ್ದಿದೆ. ನಯನತಾರಾ ಅವರ ಪೋಟೋ ನೋಡಿದ ಅಭಿಮಾನಿಗಳು ಶ್ರೀವಾರಿಗೆ ಮುಡಿ ಅರ್ಪಿಸಿದ್ದಾರೆ ಎಂದೇ ಭಾವಿಸಿದ್ದರು.
ಆದರೆ ಈ ಪೋಟೋದ ಫ್ಯಾಕ್ಟ್‌ಚೆಕ್ ನಡೆಸಿದಾಗ ಇದು ಸಂಪೂರ್ಣ ನಕಲಿ ಅನ್ನೋದು ಬಯಲಾಗಿದೆ. ನಯನತಾರಾ ಅವರ ಪೋಟೋವನ್ನು ಗೂಗಲ್ ಜೆಮಿಸಿ ಬಳಸಿ ತಯಾರಿಸಲಾಗಿದೆ. ಅಲ್ಲದೇ ಈ ಪೋಟೋದಲ್ಲಿ ಜೆಮಿನಿ ವಾಟರ್ ಮಾರ್ಕ್ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಯನತಾರಾ ಪತಿ ವಿಘ್ನೇಶ್ ಅವರ ಜೊತೆಗೆ ತಿರುಪತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪೋಟೋ ತೆಗೆಯಲಾಗಿತ್ತು. ಇದೇ ಪೋಟೋವನ್ನು ಎಐ ತಂತ್ರಜ್ಞಾನದಿಂದ ನಕಲಿ ಚಿತ್ರ ರಚಿಸಲಾಗಿದೆ.