ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ. ಸಿನಿಮಾ ಪಡೆದಿರುವುದು 'ಎ' ಸರ್ಟಿಫಿಕೇಟ್ ಆದರೂ, ಪ್ರೇಕ್ಷಕರ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.
ಭಾರತದಾದ್ಯಂತ ಅಡ್ವಾನ್ಸ್ ಟಿಕೆಟ್ ಮಾರಾಟದಿಂದಲೇ ಸಿನಿಮಾ ಈಗಾಗಲೇ 32.52 ಕೋಟಿ ರೂಪಾಯಿ ಗಳಿಸಿದೆ. 1,648 ಶೋಗಳಿಂದ 2.55 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಕೇವಲ ಬೆಂಗಳೂರಿನಲ್ಲೇ 8.83 ಕೋಟಿ ರೂಪಾಯಿ ಸಂಗ್ರಹವಾಗಿದೆ.
2D ಫಾರ್ಮ್ಯಾಟ್‌ನಲ್ಲಿ 3.18 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ತಮಿಳಿನಲ್ಲಿ 42.32 ಲಕ್ಷ ರೂ., ಮಲಯಾಳಂನಲ್ಲಿ 18.36 ಲಕ್ಷ ರೂ. ಹಾಗೂ ತೆಲುಗಿನಲ್ಲಿ 13 ಲಕ್ಷ ರೂ. ಸಂಗ್ರಹವಾಗಿದೆ (ತೆಲುಗಿನ ಪೂರ್ಣ ಪ್ರಮಾಣದ ಬುಕಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ.
ಬಾಕ್ಸ್ ಆಫೀಸ್ ವಿಶ್ಲೇಷಕರ ಪ್ರಕಾರ, ‘ಟಾಕ್ಸಿಕ್’ ಮೊದಲ ದಿನವೇ ಜಾಗತಿಕವಾಗಿ 100 ರಿಂದ 120 ಕೋಟಿ ರೂಪಾಯಿ ಗಳಿಸುವ ಅಂದಾಜಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಸ್ವತಃ ಯಶ್ ಕಥೆ ಬರೆದಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ನಟಿಸಿದ್ದಾರೆ.