ಇದು ಆಡು ಮುಟ್ಟದ ಸೊಪ್ಪು- ಮನುಷ್ಯನ ಧೀರ್ಘಾಯುಷ್ಯಕ್ಕೆ ಇದರ ಸೇವನೆಯೇ ಗುಟ್ಟು

ಆಡುಸೋಗೆ ಅಥವಾ ವಾಸಕ ಸೊಪ್ಪು ಕರೆಸಿಕೊಳ್ಳುವ ಈ ಗಿಡಕ್ಕೆ ಆಯುರ್ವೇದಲ್ಲಿ ಭಾರಿ ಮಹತ್ವವಿದೆ . ಇದನ್ನು ಸೇವಿಸೋದ್ರಿಂದ ಸಾಕಷ್ಟು ರೋಗಗಳಿಗೆ ಪರಿಹಾರ ಸಿಗುತ್ತೆ ಅನ್ನುತ್ತೆ ಅಯುರ್ವೇದ .

By ವಂದನಾ ಕೊಮ್ಮುಂಜೆ | Vandana kommunje

1 min read

WhatsAppPost
adusoge 11
adusoge 11

ಆಡುಸೋಗೆಇದು ಆಡು ಮುಟ್ಟದ ಸೊಪ್ಪು- ಮನುಷ್ಯನ ಧೀರ್ಷಾಯುಷ್ಯಕ್ಕೆ ಇದರ ಸೇವನೆಯೇ ಗುಟ್ಟು

ಆಡು ಮುಟ್ಟದ ಸೊಪ್ಪಿಲ್ಲ ಅಂತಾರೆ ಆದ್ರೆ ಈ ಸೊಪ್ಪನ್ನು ಆಡು ಮುಟ್ಟಲ್ಲ. ಅದ್ಯಾಕೋ ಗೊತ್ತಿಲ್ಲ ಆದ್ರೆ ಈ ಸೊಪ್ಪು ಮನುಷ್ಯನಿಗೆ ಮಾತ್ರ ತುಂಬಾ ಒಳ್ಳೇದು. ಆಡುಸೋಗೆ ಅಥವಾ ವಾಸಕ ಸೊಪ್ಪು ಕರೆಸಿಕೊಳ್ಳುವ ಈ ಗಿಡಕ್ಕೆ ಆಯುರ್ವೇದಲ್ಲಿ ಭಾರಿ ಮಹತ್ವವಿದೆ . ಇದನ್ನು ಸೇವಿಸೋದ್ರಿಂದ ಸಾಕಷ್ಟು ರೋಗಗಳಿಗೆ ಪರಿಹಾರ ಸಿಗುತ್ತೆ ಅನ್ನುತ್ತೆ ಅಯುರ್ವೇದ .

ಕೆಮ್ಮು ಹಾಗೂ ಶ್ವಾಸಕೊಶ ರೋಗಗಳಿಗೆ ದಿವ್ಯ ಔಷಧ

ಆಡುಸೋಗೆ ಅಥವಾ ಈ ವಾಸಕ ಸೊಪ್ಪು ಶ್ವಾಸಕೋಶದ ರೋಗಗಳಿಗೆ ದಿವ್ಯ ಔಷಧವಾಗಿ ಕೆಲಸ ಮಾಡುತ್ತೆ. ಇದರ ಸೊಪ್ಪಿನಿಂದ ಕಷಾಯ ತಯಾರಿಸಿದ್ರೆ ಸಾಮಾನ್ಯ ಶೀತದಿಂದ ಹಿಡಿದು ಎಲ್ಲಾ ಥರಹದ ಇನ್ಫೆಕ್ಷನ್ ದೂರವಾಗುತ್ತೆ. ಇದನ್ನು ನಿಯಮಿತವಾಗಿ ಸೇವಿಸಿದ್ರೆ ಅಸ್ತಮಾದಂತಹ ಖಾಯಿಲೆಯನ್ನು ಕೂಡಾ ದೂರ ಮಾಡಬಹುದು

ಇನ್ನು ಅತಿಸಾರ ಅಥವಾ ರಕ್ತಸ್ರಾವಕ್ಕೆ ಕೂಡಾ ಇದು ದಿವ್ಯ ಔಷಧ ಅಂದ್ರೆ ತಪ್ಪಾಗಲ್ಲ . ಇದರ ಸೊಪ್ಪಿನ ಕಷಾಯ ದೇಹದ ಎಲ್ಲ ಥರದ ರಕ್ತಸ್ರಾವವನ್ನು ತಡೆಯುತ್ತಂತೆ. ಇನ್ನು ವಸಡಿನ ರಕ್ತಸ್ರಾವಕ್ಕೆ ಇದರ ಸೊಪ್ಪಿನ ನೀರನ್ನು ಹಚ್ಚಿದ್ರೆ ಸ್ರಾವ ಕಡಿಮೆಯಾಗುತ್ತೆ. ಮೂತ್ರದಲ್ಲಿ ರಕ್ತ ಬರುವ ಲಕ್ಷಣವಿದ್ದಲ್ಲಿ ಆಡುಸೋಗೆಯ ಬೇರಿನಿಂದ ತಯಾರಿಸಿದ ಕಷಾಯ ಕಡಿಮೆ ಮಾಡುತ್ತದೆ . ಮುಟ್ಟುನ ನೋವಿಗೂ ಇದನ್ನು ಔಷಧವಾಗಿ ಬಳಸಲಾಗುತ್ತೆ.

ಅಲರ್ಜಿ ಹಾಗೂ ದೇಹ ತೂಕ ಇಳಿಕೆಗೂ ಸಹಕಾರಿ

ನಮಗೆ ಸಾಮಾನ್ಯವಾಗಿ ಹುಳಗಳಿಂದ ಅಥವಾ ಯಾವುದಾದರೂ ವಸ್ತುವಿನಿಂದ ಅಲರ್ಜಿಯಾದರೆ ಆಡುಸೋಗೆ ಬಳಸಿ ಅಲರ್ಜಿ ಕಡಿಮೆ ಮಾಡಿಕೊಳ್ಳಬಹುದು. ಆಡುಸೋಗೆ ಜೊತೆಗೆ ಅರಶಿನ ಬಳಸಿ ಚೆನ್ನಾಗಿ ಅರೆದು ಮೈಗೆಲೇಪಿಸ ಬೇಕು . ಇದರಿಂದ ತುರಿಕೆ ಕಡಿಮೆಯಾಗಿ ಅಲರ್ಜಿ ದೂರವಾಗುತ್ತೆ. ಇನ್ನು ದೇಹದ ತೂಕ ಇಳಿಕೆಗೂ ಇದರ ಎಲೆ ತುಂಬಾ ಸಹಕಾರಿ.

ಸಂಸ್ಕತದಲ್ಲಿ ಹೇಳಿರುವ ಒಂದು ಶ್ಲೋಕದಂತೆ” ವಾಸಾಯ ವಿದ್ಯಮಾನಯ ಆಶಾಯ ಜೀವಿತಸ್ಯಚ “ ಇದರ ಅರ್ಥ ಎಲ್ಲಿ ವಾಸ ಗಿಡ ಇರುತ್ತೋ ಅಲ್ಲಿ ಬದುಕುವ ಆಸೆ ಇರುತ್ತೆ ಎಂದು .

Topics

ಸಂಬಂಧಿತ ಸುದ್ದಿಗಳು