Weight Loss: ಬೇಗ ಸಣ್ಣ ಆಗ್ಬೇಕಾ.. ಹಾಗಾದ್ರೆ ಖರ್ಜೂರ ತಿನ್ನಬೇಕಾ ಅಥವಾ ಬೆಲ್ಲ ತಿನ್ನಬೇಕಾ
ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಡಯಟ್ ಮಾಡುವಾಗ ಸಕ್ಕರೆಗೆ (White Sugar) ಗುಡ್‌ಬೈ ಹೇಳುವುದು ಅನಿವಾರ್ಯ.
By Meghana Pranuth | ಮೇಘನಾ ಪ್ರಣೂತ್
1 min read
ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಡಯಟ್ ಮಾಡುವಾಗ ಸಕ್ಕರೆಗೆ (White Sugar) ಗುಡ್‌ಬೈ ಹೇಳುವುದು ಅನಿವಾರ್ಯ. ಆದರೆ, ಸಕ್ಕರೆ ಬದಲು ಖರ್ಜೂರ (Dates) ತಿನ್ನುವುದು ಒಳ್ಳೆಯದಾ ಅಥವಾ ಬೆಲ್ಲ (Jaggery) ಉತ್ತಮವಾ ಎಂಬ ಗೊಂದಲ ಅನೇಕರಲ್ಲಿದೆ. ಈ ಬಗ್ಗೆ ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.
ಖರ್ಜೂರ ಸೇವನೆಯ ಪ್ರಯೋಜನ
ಖರ್ಜೂರದಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ನಾರಿನಾಂಶ (Fiber) ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸುತ್ತದೆ. ಇದರಿಂದ ಪದೇ ಪದೇ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕಬಹುದು. ತೂಕ ಇಳಿಸುವವರು ಮಿತವಾಗಿ (ದಿನಕ್ಕೆ 2-3) ಖರ್ಜೂರ ಸೇವಿಸುವುದು ಅತ್ಯಂತ ಆರೋಗ್ಯಕರ ಆಯ್ಕೆಯಾಗಿದೆ.
ಬೆಲ್ಲದ ಸೇವನೆಯ ಪ್ರಯೋಜನ
ಬೆಲ್ಲದಲ್ಲಿ ಕಬ್ಬಿಣಾಂಶ (Iron), ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶಗಳಿದ್ದು, ಇದು ಬಿಳಿ ಸಕ್ಕರೆಗಿಂತ ನೂರರಷ್ಟು ಉತ್ತಮ. ಊಟದ ನಂತರ ಸಣ್ಣ ತುಂಡು ಬೆಲ್ಲ ಸೇವಿಸುವುದು ಜೀರ್ಣಾಂಗ ವ್ಯವಸ್ಥೆಯನ್ನು ಚುರುಕುಗೊಳಿಸುತ್ತದೆ. ಆದರೆ ಬೆಲ್ಲದಲ್ಲೂ ಕ್ಯಾಲೋರಿಗಳು ಹೆಚ್ಚಿರುವುದರಿಂದ, ತೂಕ ಇಳಿಕೆ ಹಾದಿಯಲ್ಲಿರುವವರು ಇದನ್ನು ಅತಿಮಿತವಾಗಿ ಬಳಸಬೇಕು.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಖರ್ಜೂರವೇ ಬೆಸ್ಟ್ ಆಯ್ಕೆ ಎನ್ನಲಾಗಿದೆ. ಏಕೆಂದರೆ ಇದರಲ್ಲಿರುವ ನಾರಿನಾಂಶ ಕೊಬ್ಬು ಕರಗಿಸಲು ಮತ್ತು ಚಯಾಪಚಯವನ್ನು (Metabolism) ಹೆಚ್ಚಿಸಲು ಹೆಚ್ಚು ಸಹಾಯ ಮಾಡುತ್ತದೆ. ಬೆಲ್ಲವನ್ನು ಸಂಪೂರ್ಣವಾಗಿ ಬಿಡಬೇಕಿಲ್ಲ, ಆದರೆ ಸಕ್ಕರೆ ಬದಲು ಬಳಸುವಾಗ ಪ್ರಮಾಣದ ಬಗ್ಗೆ (Portion Control) ಎಚ್ಚರಿಕೆ ಇರಲಿ.
Topics
ಸಂಬಂಧಿತ ಸುದ್ದಿಗಳು
health
ಹಬ್ಬದಡುಗೆ ತಿಂದು ದೇಹ ಭಾರ ಆಗಿದಿಯೇ ? ಹಾಗಾದ್ರೆ ಈ ಡಿಟಾಕ್ಸ್ ಪಾನೀಯಗಳನ್ನು ಕುಡಿಯಿರಿ !
health
ಅಡುಗೆಗೆ ಬಳಸುವ ಚಿಟಿಕೆ ಇಂಗಿನಲ್ಲಿ ಅಡಗಿದೆ ಅಗಾಧ ಪ್ರಯೋಜನ..!
health
ಬಂಜೆತನದ ಪರೀಕ್ಷೆಗೆ ಹೋದ ಯುವಕನಿಗೆ ಶಾಕ್: ಪುರುಷನ ದೇಹದಲ್ಲೇ ಇತ್ತು ಗರ್ಭಾಶಯ
health

