ತಾಯಿ -ಮಗು ಈ ಸಂಬಂಧವೇ ಒಂದು ಅದ್ಬುತ. ಕರುಳಬಳ್ಳಿಯಿಂದ ಆರಂಭವಾಗಿ ತಾಯಿ ಮಣ್ಣು ಸೇರುವ ವರೆಗೆ ಇಲ್ಲೊಂದು ಇಂಟರ್ ನಲ್ ಕನೆಕ್ಷನ್ ಇರುತ್ತೆ. ಮಗು ಅತ್ರೆ ತಾಯಿ ಕರಳು ಕಿವಿಚಿದಂತಾಗುತ್ತೆ ಅಂತ ಹಲವು ಬಾರಿ ಅಮ್ಮ ಹೇಳಿರೋದನ್ನು ನೀವು ಕೇಳಿತ್ರಿರಾ . ಎಲ್ಲೋ ತನ್ನ ಕರುಳಿನ ಕುಡಿಗೆ ಏನಾದ್ರು ಆದ್ರೆ ತನ್ನಿಂದ ತಾನೆ ಅಮ್ಮನ ಎದೆಯಲ್ಲಿ ತಳಮಳ ಆರಂಭ ಆಗಿರುತ್ತೆ . ಹೇಳಿದಷ್ಟು ಮುಗಿಯದ ಸಂಬಂಧ ಇದು ಆದ್ರೆ ಈ ಸಂಬಂಧ ಬೆಸೆದ ಕರುಳ ಬಳ್ಳಿಯ ಬಗ್ಗೆ ಎಷ್ಟು ಕೇಳಿದ್ದಿರಾ ?
ಹೌದು ಕರುಳ ಬಳ್ಳಿ ಯ ಸಂಬಂಧ ಎಷ್ಟು ಸುಂದರವೋ ಅಷ್ಟೇ ವಿಸ್ಮಯ ಈ ಕರುಳ ಬಳ್ಳಿಯ ಕಥೆ. ಗರ್ಭದ ಮಗುವಿನ 2 ನೇ ವಾರದಿಂದ ಆರಂಭವಾಗುವ ಇದರ ಪ್ರಯಾಣ ಮಗು ಭೂಮಿಗೆ ಬಂದ ಮೇಲೆ ಅಂತ್ಯ ಕಾಣುತ್ತೆ . ತಾಯಿ ಹೊಟ್ಟೆಯಲ್ಲಿನ ಮಗುವಿಗೆ ಆಹಾರ ಶಕ್ತಿ ಗಾಳಿಯನ್ನು ಒದಗಿಸುವ ಅವಕಾಶವಿರೋದು ಈ ಕರುಳ ಬಳ್ಳಿ ( )ಮಾತ್ರ. ಮಗು ಭೂಮಿಗೆ ಬಂದ ಮೇಲೆ ಅದನ್ನು ಕತ್ತರಿಸಿ ತೆಗೆಯಲಾಗುತ್ತೆ. ಆದ್ರೆ ಈ ಕರುಳಬಳ್ಳಿಯೇ ನಮ್ಮನ್ನು ಜೀವನ ಪೂರ್ತಿ ಮಾರಣಾಂತಿಕ ರೋಗದಿಂದ ಬಚಾವ್ ಮಾಡುತ್ತೆ ಅಂದ್ರೆ ನಂಬುತ್ತೀರಾ?
ಮಾರಣಾಂತಿಕ ಹಲವು ರೋಗಕ್ಕೆ ರಾಮ ಬಾಣ ಕರುಳ ಬಳ್ಳಿ
ಹೌದು ಇವತ್ತಿನ ವಿಜ್ಞಾನ ಹೀಗೊಂದು ವಿಚಾರವ ಹೇಳ್ತಿದೆ .ಮಗುವಿನ ಕರುಳ ಬಳ್ಳಿಯ ರಕ್ತದಿಂದ ಆ ಮಗುವಿಗೆ ಮುಂದೆ ಬರುವ ಕಾನ್ಸರ್ (ಅಸ್ತಿಮಜ್ಜೆ ಕ್ಯಾನ್ಸರ್ ) ಸೇರಿದಂತೆ ಹಲವು ಮಾರಣಾಂತಿಕ ರೋಗದಿಂದ ಬಚಾವ್ ಆಗಬಹುದು ಅಂತಾರೆ ವಿಜ್ಞಾನಿಗಳು. ಇದಕ್ಕೆ ಕಾರಣ ಈ ರಕ್ತದಲ್ಲಿರೋ ಸ್ಟೆಮ್ ಸೆಲ್ ಗಳು . ಈ ಸೆಲ್ ಅಥವಾ ಜೀವಕೋಶಗಳು ನಮ್ಮ ದೇಹಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿದೆ . ಇದರ ವಿಶೇಷ ಅಂದ್ರೆ ನಮ್ಮ ದೇಹದಲ್ಲಿ ಇರುವ ಜೀವ ಕೋಶಗಳು ನಾಶವಾದ್ರೆ ಅದರ ತದ್ರೂಪು ಕೋಶವನ್ನು ತಯಾರು ಮಾಡಿ ಮತ್ತೆ ದೇಹವನ್ನು ಮಾಮೂಲಿ ಸ್ಥಿತಿಗೆ ತಂದು ನಿಲ್ಲಿಸುತ್ತೆ.
ಕರುಳ ಬಳ್ಳಿ ಕಾಪಾಡೋದು ಹೇಗೆ ?
ಮಗು ಜನನವಾದಾಗ ಡಾಕ್ಟರ್ ಗಳು ಕತ್ತರಿಸಿದ ಕರುಳ ಬಳ್ಳಿಯಲ್ಲಿನ ರಕ್ತವನ್ನು ಶೇಕರಿಸಿ ರಕ್ಷಿಸಿಡುತ್ತಾರೆ. ಈಗ ನಗರಗಳಲ್ಲಿ ಬ್ಲಡ್ ಬ್ಯಾಂಕ್ ನಂತೆಯೇ ಈ ಸೆಲ್ ಗಳ ಬ್ಯಾಂಕ್ ಗಳೂ ಆರಂಭವಾಗಿದೆ. ಸಧ್ಯಕ್ಕೆ ಇದರ ಶೇಖರಣೆಯ ಬೆಲೆ ಸ್ಪಲ್ಪ ಕಾಸ್ಲಿ .ಶೇಕರಣೆ ಬಯಸುವರು ಇಂತಹ ಬ್ಯಾಂಕ್ ಗಳನ್ನು ಸಂಪರ್ಕಿಸಿದ್ರೆ ಅವರು ಬಂದು ಸೆಲ್ ಗಳನ್ನು ಶೇಕರಿಸುವ ಕಾರ್ಯ ಮಾಡುತ್ತಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಶೇಕರಿಸುವ ವ್ಯವಸ್ಥೆ ಭಾರತದಲ್ಲಿ ಇನ್ನು ಆರಂಭವಾಗಿಲ್ಲ.
ಪುರಾತನ ಭಾರತದಲ್ಲಿ ಇತ್ತು ಕರುಳ ಬಳ್ಳಿ ಶೇಖರಣೆ
ನಾವು ಹಳೇಕಾಲದವರನ್ನು ನೋಡಿದ್ರೆ ಮೂಗು ಮುರೀತೇವೆ ಕಾರಣ ಅಜ್ಞಾನಿಕತೆ. ಆದ್ರೆ ಹಳೆ ಕಾಲದಲ್ಲಿ ಈ ರಕ್ತವನ್ನು ಶೇಕರಿಸಿಡುವ ಪದ್ದತಿ ಇತ್ತು .ಹಿಂದೆ ಮಗುವಾದಾಗ ಕರುಳ ಬಳ್ಳಿಯನ್ನು ಕತ್ತರಿಸಿ ಅದರಲ್ಲಿನ ರಕ್ತ ತೆಗೆದು, ಅದಕ್ಕೆ ಗಿಡ ಮೂಲಿಕೆ ಬೆರಸಿ ತಾಯಿತಗಳಿಗೆ ಹಾಕಿ ಸೊಂಟಕ್ಕೆ ಕಟ್ಟಲಾಗುತ್ತಿತ್ತು. ಹಾವು , ವಿಷ ಜಂತುಗಳು ಕಚ್ಚಿದಾಗ ಇದನ್ನು ಔಷಧಿಯಾಗಿ ಬಳಸಿ ಕೊಳ್ಳುತ್ತಿದ್ರು, ತಮಿಳು ನಾಡಿನ ಕೆಲವು ಕಡೆಗಳಲ್ಲಿ ಈ ಪದ್ದತಿ ಇಂದಿಗೂ ಇದೆ. ಸದ್ಯ ವಿಜ್ಞಾನ ಬೆಳೆದಿದೆ, ನಾವು ಮನಸ್ಸು ಮಾಡಿದ್ರೆ ಮಕ್ಕಳನ್ನು ಮಾರಣಾಂತಿಕ ಖಾಯಿಲೆ ಯಿಂದ ರಕ್ಷಿಸಬಹುದು