ಸಿಹಿ ತಿಂದರೆ ಎದೆ ಉರಿ ಹೆಚ್ಚಾಗುತ್ತದೆಯೇ? ಆಸಿಡಿಟಿಗೆ ಸಕ್ಕರೆ ನಿಜಕ್ಕೂ ಕಾರಣವೇ?

ಊಟದ ಬಳಿಕ ಎದೆ ಉರಿ, ಹೊಟ್ಟೆ ಉಬ್ಬರ, ಹುಳಿ ತೇಗು, ಬಾಯಿಯಲ್ಲಿ ಹುಳಿ ರುಚಿ… ಇಂತಹ ಸಮಸ್ಯೆಗಳು ಇತ್ತೀಚೆಗೆ ಹಲವರನ್ನು ಕಾಡುತ್ತಿವೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
SUGAR
SUGAR

ಊಟದ ಬಳಿಕ ಎದೆ ಉರಿ, ಹೊಟ್ಟೆ ಉಬ್ಬರ, ಹುಳಿ ತೇಗು, ಬಾಯಿಯಲ್ಲಿ ಹುಳಿ ರುಚಿಇಂತಹ ಸಮಸ್ಯೆಗಳು ಇತ್ತೀಚೆಗೆ ಹಲವರನ್ನು ಕಾಡುತ್ತಿವೆ. ಸಾಮಾನ್ಯವಾಗಿ ಮಸಾಲೆ, ಎಣ್ಣೆಯುಕ್ತ ಅಥವಾ ಹೆಚ್ಚು ಖಾರವಾದ ಆಹಾರವೇ ಆಸಿಡಿಟಿಗೆ ಕಾರಣ ಎಂದುಕೊಳ್ಳಲಾಗುತ್ತದೆ. ಆದರೆ ಸಿಹಿ ಪದಾರ್ಥಗಳನ್ನು ತಿಂದರೂ ಆಸಿಡಿಟಿ ಹೆಚ್ಚಾಗುತ್ತದೆಯೇ? ಎಂಬ ಗೊಂದಲ ಹಲವರಲ್ಲಿದೆ.

ಸಕ್ಕರೆ ಸ್ವತಃ ಆಸಿಡ್ ರಿಫ್ಲಕ್ಸ್ಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿ ಇರುವ ಕೇಕ್, ಪೇಸ್ಟ್ರಿ, ಚಾಕೊಲೇಟ್, ಐಸ್ಕ್ರೀಂ ಹಾಗೂ ಸಿಹಿ ಪಾನೀಯಗಳು ಕೆಲವರಲ್ಲಿ ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸಬಹುದು.

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಜತೀಂದರ್ ಸಿಂಗ್ ಭೋಗಲ್ ಅವರ ಪ್ರಕಾರ, ಕೇವಲ ಸಕ್ಕರೆ ಸೇವನೆಯೇ ಆಸಿಡ್ ರಿಫ್ಲಕ್ಸ್ಗೆ ನೇರ ಕಾರಣ ಎಂದು ಹೇಳುವುದು ಸರಿಯಲ್ಲ.

ಆದರೆ ಹೆಚ್ಚು ಸಕ್ಕರೆ ಹೊಂದಿರುವ ಆಹಾರಗಳಲ್ಲಿ ಸಾಮಾನ್ಯವಾಗಿ ಕೊಬ್ಬು ಮತ್ತು ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಿರುತ್ತದೆ. ಇಂತಹ ಆಹಾರಗಳನ್ನು ಪದೇಪದೇ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವರಿಗೆ ಆಸಿಡಿಟಿ ಮತ್ತು ರಿಫ್ಲಕ್ಸ್ ಸಮಸ್ಯೆ ಹೆಚ್ಚಾಗಬಹುದು.


ಆಸಿಡ್ ರಿಫ್ಲಕ್ಸ್ ಏಕೆ ಉಂಟಾಗುತ್ತದೆ?

ನಮ್ಮ ಹೊಟ್ಟೆ ಮತ್ತು ಆಹಾರನಾಳದ ನಡುವೆ ಲೋವರ್ ಈಸೋಫೇಜಿಯಲ್ ಸ್ಫಿಂಕ್ಟರ್’ (LES) ಎಂಬ ಸ್ನಾಯು ಇರುತ್ತದೆ. ಆಹಾರ ಸೇವಿಸಿದ ನಂತರ ಸ್ನಾಯು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ, ಹೊಟ್ಟೆಯಲ್ಲಿರುವ ಆಮ್ಲವು (Acid) ಆಹಾರನಾಳದ ಕಡೆಗೆ ಮೇಲಕ್ಕೆ ಬರುತ್ತದೆ. ಇದರಿಂದ ಎದೆ ಉರಿ, ಹುಳಿ ತೇಗು, ಬಾಯಿಯಲ್ಲಿ ಹುಳಿ ಅಥವಾ ಕಹಿ ರುಚಿ ಹಾಗೂ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುತ್ತದೆ

ಸಿಹಿ ಆಹಾರಗಳು ಆಸಿಡಿಟಿಯನ್ನು ಹೇಗೆ ಹೆಚ್ಚಿಸುತ್ತವೆ?

ಕೇಕ್, ಪೇಸ್ಟ್ರಿ, ಐಸ್ಕ್ರೀಂ, ಚಾಕೊಲೇಟ್ ಹಾಗೂ ಸಿಹಿ ಪಾನೀಯಗಳಲ್ಲಿ ಕೊಬ್ಬು ಮತ್ತು ಕ್ಯಾಲೊರಿಗಳೂ ಹೆಚ್ಚಿರುತ್ತವೆ. ಇಂತಹ ಆಹಾರಗಳ ಅಧಿಕ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾದಾಗ ಜಠರದ ಮೇಲೆ ಒತ್ತಡ ಹೆಚ್ಚಾಗಿ, ಆಮ್ಲವು ಮೇಲಕ್ಕೆ ಬರುವ ಸಾಧ್ಯತೆ ತೀವ್ರಗೊಳ್ಳುತ್ತದೆ. ಹೀಗಾಗಿ ಸಕ್ಕರೆ ಮಾತ್ರವಲ್ಲ, ಒಟ್ಟಾರೆ ಆಹಾರ ಪದ್ಧತಿ, ದೇಹದ ತೂಕ ಮತ್ತು ಜೀವನಶೈಲಿಯೂ ಆಸಿಡ್ ರಿಫ್ಲಕ್ಸ್ನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆಸಿಡಿಟಿ ತಡೆಯಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ:

  • ಕಾರಣವಾಗುವ ಆಹಾರ ಗುರುತಿಸಿ: ನಿರ್ದಿಷ್ಟ ಸಿಹಿ ಅಥವಾ ಆಹಾರ ತಿಂದ ನಂತರ ಎದೆ ಉರಿ ಹೆಚ್ಚಾಗುತ್ತಿದ್ದರೆ, ಅದನ್ನು ತಕ್ಷಣ ಕಡಿಮೆ ಮಾಡಿ. ಯಾವ ಆಹಾರದಿಂದ ತೊಂದರೆಯಾಗುತ್ತಿದೆ ಎಂದು ತಿಳಿಯಲು ‘ಫುಡ್ ಡೈರಿ’ ಇಟ್ಟುಕೊಳ್ಳಿ.

  • ಸಣ್ಣ ಪ್ರಮಾಣದ ಊಟ: ಒಮ್ಮೆಲೇ ಹೆಚ್ಚು ಆಹಾರ ಸೇವಿಸುವ ಬದಲು ಸಣ್ಣ ಪ್ರಮಾಣದಲ್ಲಿ ಸೇವಿಸಿ.

  • ಊಟವಾದ ತಕ್ಷಣ ಮಲಗಬೇಡಿ: ಊಟದ ನಂತರ ಕನಿಷ್ಠ 2ರಿಂದ 3 ಗಂಟೆಗಳ ಕಾಲ ಮಲಗದೆ ಇರುವುದು ಸಹಾಯಕ.

  • ತೂಕ ನಿಯಂತ್ರಣ: ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಕಾಯ್ದುಕೊಳ್ಳಿ.ದಲ್ಲಿ ಕಾಯ್ದುಕೊಳ್ಳಿ.

 

Topics

ಸಂಬಂಧಿತ ಸುದ್ದಿಗಳು