ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೀವ್ರ ವ್ಯಾಯಾಮ ಮಾಡುವುದರಿಂದ ಹೆಚ್ಚು ಕೊಬ್ಬು ಕರಗುವುದು ನಿಜನಾ? ತಜ್ಞರ ಉತ್ತರ ಏನು?
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೇಗದ ವಾಕಿಂಗ್, ಜಾಗಿಂಗ್ ಮುಂತಾದ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇಲ್ಲಿದೆ ಉತ್ತರ.
ಇಂದಿನ ಧಾವಂತದ ದಿನಗಳಲ್ಲಿ ಸ್ಥೂಲಕಾಯ ಅತಿ ದೊಡ್ಡ ಸಮಸ್ಯೆಗಳಲ್ಲೊಂದು. ಅದರಲ್ಲೂ ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳೂ ತಲೆದೂರುತ್ತಿವೆ. ಹಾಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರು ವ್ಯಾಯಾಮ, ಆಹಾರ ಪದ್ಧತಿ, ಸುಧಾರಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ದೇಹದಲ್ಲಿ ಶೇಖರಣೆಯಾಗಿರುವ ಅನಗತ್ಯ ಕೊಬ್ಬನ್ನು ಕರಗಿಸುವುದೇ ಅತ್ಯಂತ ದೊಡ್ಡ ಸವಾಲಿನ ಕೆಲಸವಾಗಿದೆ. ಅದಕ್ಕೆ ಹತ್ತಾರು ಹಾದಿಗಳನ್ನು ಹುಡುಕಿ ಹೋಗುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬೆಳಗ್ಗಿನ ಸಮಯದಲ್ಲಿ ಮಾಡುವ ಕಠಿಣ ವ್ಯಾಯಾಮವೂ ಒಂದು. ಹಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೇಗದ ವಾಕಿಂಗ್, ಜಾಗಿಂಗ್ ಮುಂತಾದ ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಾಧ್ಯ ಎಂದು ನಂಬಿದ್ದಾರೆ. ಆದರೆ ಇದು ಎಲ್ಲರ ವಿಷಯದಲ್ಲೂ ಸರಿ ಎಂದು ಹೇಳಲಾಗುವುದಿಲ್ಲ. ತಜ್ಞ ವೈದ್ಯರ ಪ್ರಕಾರ ಆರೋಗ್ಯದ ಸಮಸ್ಯೆ ಇರುವವರು ಈ ರೀತಿ ಖಾಲಿ ಹೊಟ್ಟೆಯಲ್ಲಿ ಕಠಿಣ ವ್ಯಾಯಾಮ ಮಾಡುವುದು ಇನ್ನಷ್ಟು ಅನಾರೋಗ್ಯಕ್ಕೆ ದಾರಿಯಾಗಬಲ್ಲದು ಎಂದು ಹೇಳುತ್ತಾರೆ. ಹೇಗೆ? ಇಲ್ಲಿದೆ ಓದಿ.
ಖಾಲಿ ಹೊಟ್ಟೆಯಲ್ಲಿ ತೀವ್ರ ವ್ಯಾಯಾಮ ಮಾಡುವುದರಿಂದ ಏನಾಗುತ್ತದೆ?
ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ಕೆಲವು ಸಂದರ್ಭಗಳಲ್ಲಿ ಅನುಕೂಲಕ್ಕಿಂತ ಅನಾನುಕೂಲವೇ ಉಂಟಾಗಬಹುದು. ಯಕೃತ್ತಿನಲ್ಲಿ ಶೇಖರಣೆಯಾಗಿದ್ದ ಶಕ್ತಿ ಕಡಿಮೆಯಿದ್ದಾಗ ಭಾರ ಎತ್ತುವುದು, ವೇಗದ ನಡಿಗೆ, ಜಾಗಿಂಗ್‌ನಂತಹ ವ್ಯಾಯಾಮ ಮಾಡಿದಾಗ ದೇಹವು ಸ್ನಾಯುಗಳಲ್ಲಿ ಶೇಖರಣೆಯಾಗಿರುವ ಶಕ್ತಿಯನ್ನು ಬಳಸುವಂತೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಮಾಡಿದ್ದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಇದು ದೀರ್ಘಕಾಲದ ಒತ್ತಡ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವವರಲ್ಲಿ ಹೆಚ್ಚಿನ ಆಯಾಸಕ್ಕೆ ಕಾರಣವಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗಿ ತಲೆತಿರುಗುವಿಕೆ, ವಾಕರಿಕೆ ಮತ್ತು ಮೂರ್ಛೆ ಮುಂತಾದ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಸುಮಾರು 10 ಗಂಟೆಗಳ ಕಾಲ ಆಹಾರವಿಲ್ಲದೆ ಇದ್ದ ನಂತರ ಈ ರೀತಿ ವ್ಯಾಯಾಮ ಮಾಡಿದಾಗ ಕಾರ್ಬೋಹೈಡ್ರೇಟ್‌ಗಳ ಕೊರತೆಯಿಂದ ಹೀಗಾಗುತ್ತದೆ. ಅದೇ ಮಧ್ಯಮ ಗತಿಯ ವ್ಯಾಯಾಮ ಮಾಡುವುದರಿಂದ ಕೊಬ್ಬು ಕರಗುವ ಶೇಕಡಾವಾರು ಪ್ರಮಾಣ ಹೆಚ್ಚಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಆಹಾರ ಮತ್ತು ವ್ಯಾಯಾಮ
ಕೇವಲ ವ್ಯಾಯಮ ಮಾಡಿದರೆ ಸಾಕಾಗುವುದಿಲ್ಲ ಅದಕ್ಕೆ ತಕ್ಕಂತೆ ಆಹಾರದ ಸಂಯೋಜನೆಯೂ ಇರಬೇಕು ಎಂಬುದು ತಜ್ಞರ ಸಲಹೆ. ಆಗ ಹೆಚ್ಚುವರಿ ಕೊಬ್ಬನ್ನು ಕರಗಿಸುವುದರ ಜೊತೆಗೆ ದೇಹವು ಗಟ್ಟಿಮುಟ್ಟಾಗಿರುತ್ತದೆ. ಮಧ್ಯಮ ವೇಗದ ನಡಿಗೆ, ಲುಘು ಸೈಕ್ಲಿಂಗ್ ನಂತಹ ವ್ಯಾಯಮಗಳು ಉತ್ತಮ. ಒಂದು ವೇಳೆ ಕಠಿಣ ವ್ಯಾಯಾಮಗಳನ್ನು ಮಾಡುವುದಿದ್ದರೆ, ವ್ಯಾಯಮಕ್ಕೆ ಮೊದಲು ಸುಮಾರು 30 ರಿಂದ 45 ನಿಮಿಷಗಳ ಮೊದಲು ಹಗುರವಾದ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಸೇವಿಸುವುದು ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ.
Topics
ಸಂಬಂಧಿತ ಸುದ್ದಿಗಳು
lifestyle
ವಿಶ್ವಕರ್ಮ ಜಯಂತಿ 2026: ದೇವಶಿಲ್ಪಿ ವಿಶ್ವಕರ್ಮರನ್ನು ಪೂಜಿಸಲು ಕಾರಣವೇನು?
lifestyle
ಹಸಿರಾಗಿರಬೇಕಾದ ತುಳಸಿ ಹಳದಿಯಾಗುತ್ತಿದ್ಯಾ.. ತುಳಸಿಯನ್ನು ರಕ್ಷಿಸಲು ಹೀಗೆ ಮಾಡಿ
lifestyle
ಸಂಧಿವಾತಕ್ಕೆ ಬೆಸ್ಟ್ ಮನೆ ಮದ್ದುಗಳು ! ಇವುಗಳನ್ನು ಪ್ರತಿದಿನ ತಪ್ಪದೇ ತಿನ್ನಿ !
lifestyle

