ಗ್ರೀನ್ ಟೀ, ಬ್ಲಾಕ್ ಟೀ ಎಲ್ಲಾ ಗೊತ್ತು, ಆದ್ರೆ ವೈಟ್ ಟೀ ಗೊತ್ತಾ? ಸಿಕ್ಕಾಪಟ್ಟೆ ಫೇಮಸ್ ಆಗ್ತಿರೋ ಬಿಳಿ ಚಹಾ ಇತಿಹಾಸ, ಪ್ರಯೋಜನ ಏನು?
ಗ್ರೀನ್ ಟೀ, ಲೆಮನ್ ಟೀ, ಮಿಂಟ್ ಟೀ, ಬ್ಲಾಕ್ ಟೀ ಎಲ್ಲ ಗೊತ್ತು. ಆದ್ರೆ ಸದ್ಯ ಭಾರತದಲ್ಲಿ ಜನಪ್ರಿಯವಾಗ್ತಿರೋ ವೈಟ್ ಟೀ ಟ್ರೈ ಮಾಡಿದ್ದೀರಾ?
By Archa V Bhat
2 min read
ಒಂದು ಕಾಲದಲ್ಲಿ ಭಾರತದ ಮನೆಗಳಲ್ಲಿ ಚಹಾ ಅಂದ್ರೆ ಚಹಾ ಪುಡಿ, ಹಾಲು, ಸಕ್ಕರೆ ಬೆರೆಸಿ ಮಾಡುವ ಸಿಂಪಲ್ ಚಹಾವಾಗಿತ್ತು. ಹೆಚ್ಚೆಂದರೆ ವಿಶೇಷ ಅತಿಥಿಗಳು ಬಂದ್ರೆ ಮಸಾಲಾ ಚಹಾ ಮಾಡಿಕೊಡುತ್ತಿದ್ದರು. ಕ್ರಮೇಣ ಆರೋಗ್ಯದ ಜಾಗ್ರತಿ ಮೂಡುತ್ತಿದ್ದಂತೆ ಆರೋಗ್ಯಕರ ಆಹಾರ ಮತ್ತು ಪಾನೀಯಗಳ ಬಗ್ಗೆ ಜನರು ಹೆಚ್ಚು ಆಸಕ್ತಿ ತೋರಿಸಲು ಪ್ರಾರಂಭಿಸಿದರು. ಆಗ ಬಂದದ್ದೇ ವಿಧವಿಧದ ಟೀ ಗಳು. ಗ್ರೀನ್ ಟೀ, ಲೆಮನ್ ಟೀ, ಮಿಂಟ್ ಟೀ, ಬ್ಲಾಕ್ ಟೀ ಹೀಗೆ ಆರೋಗ್ಯ ಕಾಪಾಡಿಕೊಳ್ಳಲು ಮುಖ್ಯವಾಗಿರುವ ಚಹಾಗಳು ಭಾರತದ ಅಡುಗೆ ಮನೆ ಪ್ರವೇಶಿಸಿದವು. ಇವುಗಳಲ್ಲಿ ವೈಟ್ ಚಹಾ ಇತ್ತೀಚೆಗೆ ಬಹಳವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ವೈಟ್ ಟೀ ಎಂದಾಕ್ಷಣ ಇದು ನಿಜವಾಗಿಯೂ ಬಿಳಿ ಬಣ್ಣದ ಚಹಾವೇ ಎಂಬ ಕುತೂಹಲ ಉಂಟಾಗುತ್ತದೆ. ವೈಟ್ ಚಹಾವನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಎಂಬ ಚಹಾ ಸಸ್ಯದ ಪ್ರಬೇದದ ಚಿಗುರು ಎಲೆ ಮತ್ತು ಮೊಗ್ಗುಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಿಡದ ಚಿಗುರನ್ನು ಮಾತ್ರ ಬಳಸಲಾಗುತ್ತದೆ. ಎಲೆಗಳನ್ನು ಕೊಯ್ಲು ಮಾಡಿದ ನಂತರ ಅವುಗಳನ್ನು ಮಂದ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಪ್ರಕ್ರಿಯೆಗೆ ಕ್ಯಾಟೆಚಿನ್ ಎಂದು ಹೆಸರು. ಇದರಲ್ಲಿ ಅಗಾಧವಾಗಿ ಉತ್ಕರ್ಷಣ ನಿರೋಧಕಗಳಿರುತ್ತವೆ. ಈ ಎಲೆ ಅಥವಾ ಪುಡಿಯಿಂದ ತಯಾರಾದ ಚಹಾವನ್ನೇ ವೈಟ್ ಟೀ ಅಥವಾ ವೈಟ್ ಚಹಾ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ತಿಳಿ ಹಳದಿ ಬಣ್ಣದ್ದಾಗಿದ್ದು, ಹಣ್ಣಿನ ರುಚಿ ಮತ್ತು ಹೂವಿನ ಪರಿಮಳ ಹೊಂದಿರುತ್ತದೆ. ಈ ವೈಟ್ ಚಹಾದ ಇತಿಹಾಸವೇನು? ಇದನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ? ಇಲ್ಲಿದೆ ಓದಿ.
ವೈಟ್ ಚಹಾ ಪುಡಿ ಹೇಗೆ ತಯಾರಾಗುತ್ತದೆ?
ಇತರ ಚಹಾ ಪುಡಿಗೆ ಹೋಲಿಸಿದರೆ ವೈಟ್ ಚಹಾ ಪುಡಿ ತಯಾರಿಕೆ ಬಹಳ ಕ್ಲಿಷ್ಟಕರವಾಗಿದೆ. ಚಹಾ ಗಿಡದ ಚಿಗುರು ಎಲೆ ಮತ್ತು ಮೊಗ್ಗುಗಳನ್ನು ನಾಜೂಕಾಗಿ ಕೈಯಿಂದ ಕೊಯ್ಲು ಮಾಡಲಾಗುತ್ತದೆ. ತಕ್ಷಣ ಅದನ್ನು ಮಂದ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಕಾರಣ ಆಕ್ಸಿಡೀಕರಣವನ್ನು ಕಡಿಮೆ ಮಾಡುವುದಾಗಿದೆ. ಅದಕ್ಕಾಗಿಯೇ ಇದರ ಎಲೆಗಳು ಇತರ ಚಹಾ ಪುಡಿಗೆ ಹೋಲಿಸಿದರೆ ಅತ್ಯಂತ ಸೂಕ್ಷ್ಮ ಹಾಗೂ ಸೌಮ್ಯವಾಗಿರುತ್ತವೆ. ಚಿಗುರು ಎಲೆಗಳನ್ನು ಕೊಯ್ಲು ಮಾಡಿದ ನಂತರ ಅದರ ಮೇಲಿನ ತೆಳುವಾದ ಬಿಳಿ ಪದರು ಹಾಳಾಗದಂತೆ ಎಚ್ಚರಿಕೆಯಿಂದ ಸಂಗ್ರಹಿಸಲಾಗುತ್ತದೆ. ಈ ಎಲೆಗಳನ್ನು ಚಿಕ್ಕ ಚಹಾ ಗಿಡದಿಂದ ಕೊಯ್ಲು ಮಾಡುವುದರಿಂದ ಸಸ್ಯ ಬೆಳೆಯುವ ಆರಂಭದ ದಿನಗಳಲ್ಲಿ ಸಂಗ್ರಹಿಸಲಾಗುತ್ತದೆ. ಗಿಡ ಹಾಳಾಗದಂತೆ ಎಚ್ಚರಿಕೆವಹಿಸುವುದು ಅಗತ್ಯವಾಗಿದೆ. ಹಾಗಾಗಿ ವೈಟ್ ಚಹಾ ಪುಡಿ ತಯಾರಿಸಲು ಬಹಳ ಸಮಯ ತಗುಲುತ್ತದೆ. ಹಾಗಾಗಿ ಇದರ ಬೆಲೆಯೂ ಸ್ವಲ್ಪ ದುಬಾರಿ.
ವೈಟ್ ಚಹಾದ ಇತಿಹಾಸವೇನು?
ಐತಿಹಾಸಿಕ ದಾಖಲೆಗಳ ಪ್ರಕಾರ ವೈಟ್ ಟೀ ಪ್ರಾಚೀನ ಚೀನಾದ ರಾಜಮನೆತನದವರು ಕುಡಿಯುವ ಪಾನೀಯವಾಗಿತ್ತು. ಸುಮಾರು 1107 ರಲ್ಲಿ ಚಕ್ರವರ್ತಿ ಹುಯಿಜಾಂಗ್ ಕಾಲಘಟ್ಟವನ್ನು ವಿವರಿಸುವ ಪುಸ್ತಕಗಳಲ್ಲಿ ಈ ಚಹಾದ ವರ್ಣನೆ ಕಾಣಬಹುದು. ಈ ಚಹಾವನ್ನು ವಿವರಿಸುವ ಪ್ರಾಚೀನ ಚೀನೀ ದಾಖಲೆಗಳೂ ಇವೆ ಎನ್ನಲಾಗಿದೆ. ಚಹಾ ಕುರಿತಾದ ಗ್ರಂಥ ಎಂದು ಕರೆಯಲ್ಪಡುವ ದಾಖಲೆಯಲ್ಲಿ, ಅವರು ಇದನ್ನು ಬಾಯಿ ಚಾ ಎಂದು ಉಲ್ಲೇಖಿಸಿದ್ದಾರೆ. ಬಾಯಿ ಎಂದರೆ ಬಿಳಿ ಮತ್ತು ಚಾ ಎಂದರೆ ಚಹಾ. ಪ್ರಾಚೀನ ಚೀನಾದಲ್ಲಿ ವೈಟ್ ಚಹಾವನ್ನು ಚೀನಿಯ ಜನಪ್ರಿಯ ಸಿರಾಮಿಕ್ ಕಪ್‌ಗಳಲ್ಲಿ ಬೆರೆಸಿ ಕೊಡಲಾಗುತ್ತಿತ್ತು. ಇದೊಂದು ರಾಜಮನೆತನ ಹಾಗೂ ಪರಿವಾರದವರು ಕುಡಿಯುವ ಶ್ರೀಮಂತರ ಪಾನೀಯವೆಂದು ಹೆಸರುವಾಸಿಯಾಗಿತ್ತು.
ವೈಟ್ ಟೀ ತಯಾರಿಸುವುದು ಹೇಗೆ?
ಮೊದಲಿಗೆ ಸ್ವಲ್ಪ ವೈಟ್ ಟೀ ಎಲೆಗಳನ್ನು ತೆಗೆದುಕೊಂಡು ಅದನ್ನು ಒಂದು ಕಪ್ ಬಿಸಿ ನೀರಿಗೆ ಹಾಕಿ. ಸ್ವಲ್ಪ ಸಮಯದ ನಂತರ ಸೋಸಿ ಕುಡಿಯಿರಿ. ಬೇಕಿದ್ದರೆ ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಲಿಂಬೆ ರಸ ಸೇರಿಸಿಕೊಳ್ಳಿ.
ವೈಟ್ ಟೀ ಪ್ರಯೋಜನಗಳು
ಹೃದಯದ ಆರೋಗ್ಯ ಕಾಪಾಡುತ್ತದೆ.
ತೂಕ ಇಳಿಕೆಗೆ ಉತ್ತಮ.
ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಸಹಕಾರಿ.
ಜೀರ್ಣಕ್ರಿಯೆ ಉತ್ತೇಜಿಸುತ್ತದೆ.
Topics
ಸಂಬಂಧಿತ ಸುದ್ದಿಗಳು
health
ಕರಾವಳಿಯಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ: ಸಾಂಪ್ರದಾಯಿಕ 'ಹಾಲೆ ಕೆತ್ತಿ' ಕಷಾಯದ ರಹಸ್ಯ ನಿಮಗೆ ಗೊತ್ತಾ?
health
ಆರೋಗ್ಯಕರ ದೇಹಕ್ಕೆ ದ್ರಾಕ್ಷಿ : ಪ್ರತಿದಿನ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ?
health
ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರು ಕುಡಿಯಿರಿ : ದೇಹದಲ್ಲಿ ನಡೆಯುವ ಚಮತ್ಕಾರ ಗೊತ್ತಾ ?
health

