ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರು ಕುಡಿಯಿರಿ : ದೇಹದಲ್ಲಿ ನಡೆಯುವ ಚಮತ್ಕಾರ ಗೊತ್ತಾ ?
ಆಯುರ್ವೇದದ ಪ್ರಕಾರ, ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆದು, ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ದಿವ್ಯ ಔಷಧಿ ಎನ್ನಲಾಗುತ್ತದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ಕೂಡ ಒಂದಿಲ್ಲೊಂದು ಕಸರತ್ತು ನಡೆಸುತ್ತಲೇ ಇರ್ತಾರೆ. ದೇಹವನ್ನು ಕರಗಿಸೋದಕ್ಕೆ ಜಿಮ್, ಡಯಟ್ ಅಂತಾ ಸಾವಿರಾರು ರೂಪಾಯಿ ಹಣ ವ್ಯಯ ಮಾಡ್ತೇವೆ. ಆದರೆ ನಮ್ಮ ಮನೆಯಲ್ಲಿಯೇ ಯಾವುದೇ ಖರ್ಚಿಲ್ಲದೇ ಸಿಗುವ ಅದ್ಬುತ ಔಷಧದ ಬಿಸಿ ನೀರು ಅನ್ನೋದು ನಿಮಗೆ ಗೊತ್ತಿದೆಯಾ ?
ಆಯುರ್ವೇದದ ಪ್ರಕಾರ, ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆದು, ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ದಿವ್ಯ ಔಷಧಿ ಎನ್ನಲಾಗುತ್ತದೆ. ಪ್ರತೀ ನಿತ್ಯವೂ ನೀವು ದಿನವನ್ನು ಆರಂಭಿಸುವ ಮೊದಲು ಕಾಫಿ ಅಥವಾ ಟೀ ಕುಡಿಯುವ ಬದಲು ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿದರೆ ದೇಹದಲ್ಲಿ ನಡೆಯುವ ಚಮತ್ಕಾರ ನಿಮಗೆ ಅಚ್ಚರಿ ತರಿಸಲಿದೆ.
1. ತೂಕ ಇಳಿಕೆಗೆ (Weight Loss) ಬಿಸಿ ನೀರು ರಾಮಬಾಣ
ಬೊಜ್ಜು ಕರಗಿಸುವ ಯೋಚನೆ ಇದ್ರೆ ನಿಮಗೆ ಬಿಸಿ ನೀರು ಅತ್ಯುತ್ತಮ ಮನೆಮದ್ದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ದೇಹದ ಮೆಟಬಾಲಿಸಂ (Metabolism) ಅಂದರೆ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ.
ಬಿಸಿ ನೀರು ದೇಹದ ಉಷ್ಣತೆಯನ್ನು ಹೆಚ್ಚಿಸಿ, ಕ್ಯಾಲೋರಿಗಳನ್ನು ವೇಗವಾಗಿ ದಹಿಸಲು ಸಹಾಯ ಮಾಡುತ್ತದೆ.
ಚರ್ಮದ ಅಡಿಯಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬಿನಂಶವನ್ನು (Fat) ಕರಗಿಸಲು ಇದು ನೆರವಾಗುತ್ತದೆ.
ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಮತ್ತು ಅರ್ಧ ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ತೂಕ ಇಳಿಕೆಯ ಪ್ರಕ್ರಿಯೆ ಇನ್ನಷ್ಟು ಚುರುಕಾಗುತ್ತದೆ.
2. ಜೀರ್ಣಕ್ರಿಯೆ ಸುಧಾರಣೆ ಮತ್ತು ಮಲಬದ್ಧತೆ ನಿವಾರಣೆ
ಫಾಸ್ಟ್ ಫುಡ್ ಯುಗದಲ್ಲಿ ಮಲಬದ್ಧತೆ (Constipation) ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದಕ್ಕೆ ಬಿಸಿ ನೀರು ಅತ್ಯುತ್ತಮ ಪರಿಹಾರ.
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕರುಳಿನ ಚಲನೆ (Bowel movement) ಸುಗಮವಾಗುತ್ತದೆ.
ರಾತ್ರಿಯ ವೇಳೆಯಲ್ಲಿ ಸೇವಿಸಿದ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಲು ಮತ್ತು ಕರುಳಿನಲ್ಲಿ ಅಂಟಿಕೊಂಡಿರುವ ತ್ಯಾಜ್ಯವನ್ನು ಮೃದುಗೊಳಿಸಿ ಸುಲಭವಾಗಿ ಹೊರಹಾಕಲು ನೆರವಾಗುತ್ತದೆ.
ಗ್ಯಾಸ್ಟ್ರಿಕ್, ಅಸಿಡಿಟಿ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುವವರಿಗೆ ಇದು ಶಾಶ್ವತ ಪರಿಹಾರ ನೀಡಬಲ್ಲದು.
3. ಮುಖದ ಕಾಂತಿ (Skin Glow) ಹೆಚ್ಚಳ
ಹೊಳೆಯುವ ತ್ವಚೆ ಬೇಕು ಎನ್ನುವವರು ದುಬಾರಿ ಕ್ರೀಮ್ ಹಚ್ಚುವ ಬದಲು ಬಿಸಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರ ಹಿಂದಿನ ವಿಜ್ಞಾನ ಬಹಳ ಸರಳವಾಗಿದೆ.
ಬಿಸಿ ನೀರು ಕುಡಿದಾಗ ದೇಹದ ಉಷ್ಣಾಂಶ ಕೊಂಚ ಹೆಚ್ಚಾಗಿ, ಬೆವರು ಬರುತ್ತದೆ. ಈ ಬೆವರಿನ ಮೂಲಕ ದೇಹದಲ್ಲಿರುವ ವಿಷಕಾರಿ ಅಂಶಗಳು (Toxins) ಹೊರಹೋಗುತ್ತವೆ.
ದೇಹ ನಿರ್ವಿಷಗೊಂಡಾಗ (Detoxification) ರಕ್ತ ಶುದ್ಧಿಯಾಗುತ್ತದೆ.
ರಕ್ತ ಪರಿಚಲನೆ ಸುಧಾರಿಸಿದಾಗ ಸಾಮಾನ್ಯವಾಗಿ ಮುಖದ ಮೇಲಿನ ಮೊಡವೆ, ಗುಳ್ಳೆಗಳು ಹಾಗೂ ಕಲೆಗಳು ಕಡಿಮೆಯಾಗಿ ತ್ವಚೆಯು ನೈಸರ್ಗಿಕವಾಗಿ ಹೊಳೆಯಲಾರಂಭಿಸುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು (Anti-aging) ನಿಧಾನಗೊಳಿಸುತ್ತದೆ.
4. ರೋಗ ನಿರೋಧಕ ಶಕ್ತಿ ಹೆಚ್ಚಳ
ನಿಯಮಿತವಾಗಿ ಬಿಸಿ ನೀರು ಕುಡಿಯುವುದರಿಂದ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಶೀತ, ಕೆಮ್ಮು, ಗಂಟಲು ನೋವಿನಂತಹ ಸಣ್ಣಪುಟ್ಟ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
5. ಋತುಚಕ್ರದ ನೋವಿಗೆ ಮುಕ್ತಿ
ಮಹಿಳೆಯರಲ್ಲಿ ಕಾಡುವ ಋತುಚಕ್ರದ ಹೊಟ್ಟೆನೋವಿಗೆ (Menstrual Cramps) ಬಿಸಿ ನೀರು ಉತ್ತಮ ಪರಿಹಾರ ನೀಡುತ್ತದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸಿ ಸೆಳೆತ ಮತ್ತು ನೋವನ್ನು ಶಮನ ಮಾಡುತ್ತದೆ.
ನೀರು ಅತಿಯಾಗಿ ಬಿಸಿಯಾದ್ರೆ ಅದನ್ನು ಕುಡಿಯೋದಕ್ಕೆ ಸಾಧ್ಯವಿಲ್ಲ. ಅಲ್ಲದೇ ಆರೋಗ್ಯಕ್ಕೂ ಉತ್ತಮವಲ್ಲ. ಆದರೆ ಉಗುರು ಬೆಚ್ಚಗಿದ್ದರೆ (Warm water) ಸಾಕು. ಕುದಿಯುವ ಬಿಸಿ ನೀರು ಕುಡಿಯುವುದರಿಂದ ಬಾಯಿಯ ಮತ್ತು ಅನ್ನನಾಳದ ಸೂಕ್ಷ್ಮ ಜೀವಕೋಶಗಳಿಗೆ ಹಾನಿ ಉಂಟು ಮಾಡಲಿದೆ. ಹೀಗಾಗಿ ಬಾಡಿ ಕರಗಿಸುವ ಯೋಚನೆ ಇದ್ರೆ ಇಂದೇ ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯಿ
Topics
ಸಂಬಂಧಿತ ಸುದ್ದಿಗಳು
health
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾಲಿಸಬೇಕಾದ ಸರಳ ಅಭ್ಯಾಸಗಳು
karnataka
ಕುರ್ ಕುರೆ ಒಳಗಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಮಗು ಸಾವು!
health
ತಲೆಹೊಟ್ಟಿನಿಂದ ಕೂದಲು ಉದುರುತ್ತಿದೆಯೇ.. ಹಾಗಿದ್ರೆ ಈ ಸರಳ ಟಿಪ್ಸ್ ಫಾಲೋ ಮಾಡಿ
health

