ಆಪರೇಷನ್ ಟೂಫಾನ್ : ಹೆರಾಯಿನ್ ಕಳ್ಳಸಾಗಣೆ ಗ್ಯಾಂಗ್‌ ಕಿಂಗ್‌ಪಿನ್‌ ದಾದಾ ಕೇರಳದಲ್ಲಿ ಅರೆಸ್ಟ್‌

heroine kerala arrest : ಕಾರ್ಯಾಚರಣೆಯಲ್ಲಿ 609 ಗ್ರಾಂ ತೂಕದ ಲಕ್ಷಾಂತರ ಮೌಲ್ಯದ ಹೆರಾಯಿನ್‌ ವಶಕ್ಕೆ ಪಡೆಯಲಾಗಿದ್ದು, ಕೇರಳದ ಅಂಗಮಾಲಿಯಿಂದ ಮೂವರು ವಲಸೆ ಕಾರ್ಮಿಕರನ್ನೂ ಕೂಡ ಬಂಧಿಸಲಾಗಿತ್ತು. ಬಂಧಿತರನ್ನು ತನಿಖೆಗೆ ಒಳಪಡಿಸಿದ ನಂತರದಲ್ಲಿ ಶಫಿಕುಲ್‌ ಸಿಕ್ಕಿಬಿದ್ದಿದ್ದಾನೆ.

heroine kerala arrest : ಕೊಚ್ಚಿ : ದೇವರನಾಡು ಕೇರಳದಲ್ಲಿ ಆಪರೇಷನ್ ಟೂಫಾನ್ ಹೆಸರಿನಲ್ಲಿ ಮಾದಕವಸ್ತು ವಿರೋಧಿ ಅಭಿಯಾನ ಚುರುಕಾಗಿದೆ. ಇದೀಗ ಹೆರಾಯಿನ್‌ ಕಳ್ಳ ಸಾಗಣಿ ಮಾಡುತ್ತಿದ್ದ ಗ್ಯಾಂಗ್‌ ಸದಸ್ಯನಾಗಿರುವ ಅಸ್ಸಾಂ ಮೂಲದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.

ಕೇರಳದ ಪೆರುಂಬವೂರ್ ಪ್ರದೇಶದಲ್ಲಿ ಹೆರಾಯಿನ್ ಕಳ್ಳಸಾಗಣೆ ಗ್ಯಾಂಗ್‌ನ ಪ್ರಮುಖ ಸದಸ್ಯನನ್ನು ವಶಕ್ಕೆ ಪಡೆಯಲಾಗಿದೆ. ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ಇಲಾಖೆಯ ಮುಖ್ಯಸ್ಥರಾಗಿರುವ ಕೆ.ಎಸ್.ಸುದರ್ಶನ್‌ ನೇತೃತ್ವದ ವಿಶೇಷ ತನಿಖಾ ತಂಡವು ಅಸ್ಸಾಂ ಮೂಲದ ನಾಗಾಂವ್‌ ಮೂಲಕದ ಶಫಿಕುಲ್‌ ಇಸ್ಲಾಂ (38 ವರ್ಷ) ಎಂಬಾತನನ್ನು ಬಂಧಿಸಿದ್ದಾರೆ.

ಈ ಹಿಂದೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 609 ಗ್ರಾಂ ತೂಕದ ಲಕ್ಷಾಂತರ ಮೌಲ್ಯದ ಹೆರಾಯಿನ್‌ ವಶಕ್ಕೆ ಪಡೆಯಲಾಗಿದ್ದು, ಕೇರಳದ ಅಂಗಮಾಲಿಯಿಂದ ಮೂವರು ವಲಸೆ ಕಾರ್ಮಿಕರನ್ನೂ ಕೂಡ ಬಂಧಿಸಲಾಗಿತ್ತು. ಬಂಧಿತರನ್ನು ತನಿಖೆಗೆ ಒಳಪಡಿಸಿದ ನಂತರದಲ್ಲಿ ಶಫಿಕುಲ್‌ ಸಿಕ್ಕಿಬಿದ್ದಿದ್ದಾನೆ.

ಮೂವರು ವಲಸ ಕಾರ್ಮಿಕರು ಅಸ್ಸಾಂನಿಂದ ಮಾಧಕ ವಸ್ತುಗಳನ್ನು ಕಾರಿನ ಮೂಲಕ ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಅಲ್ಲದೇ ಸೋಪ್‌ ಬಾಕ್ಸ್‌ ಹಾಗೂ ಪೌಚ್‌ಗಳಲ್ಲಿ ಹೇರಾಯಿನ್‌ ಸಂಗ್ರಹ ಮಾಡುತ್ತಿದ್ದರು. ಈ ಮೂಲಕ ಪೊಲೀಸರ ಕಣ್ಣು ತಪ್ಪಿಸುತ್ತಿದ್ದರು ಅನ್ನೋದು ಬಯಲಾಗಿದೆ.

ಇಷ್ಟೊಂದು ಪ್ರಮಾಣದಲ್ಲಿ ಹೆರಾಯಿನ್‌ ವಶಕ್ಕೆ ಪಡೆದಿರೋದು ಇದೇ ಮೊದಲು. ಹೆರಾಯಿನ್‌ ಗ್ಯಾಂಗ್‌ನ ಕಿಂಗ್‌ ದಾದಾ ಎಂಬಾತ ಪಿನ್‌ ಸ್ಕ್ರ್ಯಾಪ್‌ ಸಂಗ್ರಹದ ನೆಪದಲ್ಲಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಬಾರಿ ಆತ ಕೇರಳಕ್ಕೆ ಬಂದು ಹೋಗಿದ್ದಾನೆ. ಈತ ಹಲವು ವರ್ಷಗಳ ಕಾಲ ಪ್ಲೇವುಡ್‌ ಕಾರ್ಖಾನೆಗಳಲ್ಲಿಯೂ ಕೆಲಸ ಮಾಡಿದ್ದಾನೆ ಅನ್ನೋದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಕೇರಳದ ಪೆರುಂಬವೂರ್‌ ಅನ್ನೂ ತಮ್ಮ ಕಾರ್ಯಾಚರಣೆಯ ಮುಖ್ಯ ಪ್ರದೇಶವನ್ನಾಗಿಸಿಕೊಂಡಿದ್ದರು. ಆರೋಪಿಗಳು ಅಸ್ಸಾಂನಿಂದ 30 ಸಾವಿರ ರೂಪಾಯಿಗೆ ಹೆರಾಯಿನ್‌ ಬಾಕ್ಸ್‌ ಖರೀದಿಸಿ, ಕೇರಳದಲ್ಲಿ 80 ಸಾವಿರದಿಂದ ಒಂದು ಲಕ್ಷ ರೂಪಾಯಿ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಯ ಬ್ಯಾಂಕ್‌ ವಹಿವಾಟುಗಳನ್ನು ಪರಿಶೀಲಿಸಿದ ವೇಳೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿರುವುದು ಪತ್ತೆಯಾಗಿದೆ.

ಪೆರುಂಬವೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಮಾದಕವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು. ಅಲ್ಲದೇ ಮಾದಕ ವಸ್ತು ಸಾಗಾಟ ಮಾಡುವುದಕ್ಕೆ ಬಳಕೆ ಮಾಡುತ್ತಿದ್ದ ಸಣ್ಣ ಬಾಟಲಿಗಳು ಕೂಡ ಪತ್ತೆಯಾಗಿದೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿದೆ.

Kochi Key Opertaive of Heroin Racket kingpin Dada Arrested

Exit mobile version