ರಾಷ್ಟ್ರೀಯ ವಿಮಾ ಕಂಪನಿ (NICL) ದೇಶಾದ್ಯಂತ ತನ್ನ ಕಚೇರಿಗಳಲ್ಲಿ ಖಾಲಿ ಇರುವ AO ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ NICL ಒಟ್ಟು 321 AO ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು ಅಕ್ಟೋಬರ್ 28 ಕೊನೆಯ ದಿನವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯಲ್ಲಿ ಯಾರು ಅರ್ಜಿ ಸಲ್ಲಿಸಬಹುದು? ಅರ್ಹತಾ ಮಾನದಂಡಗಳೇನು ಎಂದು ನೋಡೋಣ.
ಹುದ್ದೆಗಳ ವಿವರ
AO ಸ್ಕೇಲ್ – 1 ಸಾಮಾನ್ಯ ಹುದ್ದೆಗಳು – 200
ಸ್ಪೆಷಲ್ ಆಫೀಸರ್ ಹುದ್ದೆಗಳು – 121
ಶೈಕ್ಷಣಿಕ ಅರ್ಹತೆ
ಜನರಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರಬೇಕು. ಆದರೆ ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳು 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಸ್ಪೆಷಲಿಸ್ಟ್ ಹುದ್ದೆಗಳಿಗೆ ಸಿಎ/ ಪದವಿ/ ಕಾನೂನು ಪಿಜಿ/ ಬಿಇ/ ಬಿಟೆಕ್/ ಎಂಇ/ ಎಂಟೆಕ್/ ಕೃಷಿಯಲ್ಲಿ ಪಿಜಿ ಹೊಂದಿರಬೇಕು.
ವಯೋಮಿತಿ
ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 21 ರಿಂದ 30 ವರ್ಷಗಳ ಒಳಗಿನವರಾಗಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ವೇತನ
ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 82,485 ರೂ. ದಿಂದ 1,56,745 ರೂಗಳ ವರೆಗೆವೇತನ ನೀಡಲಾಗುವುದು.
ಅರ್ಜಿ ಶುಲ್ಕ
NICL ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 1000 ರೂ. ಹಾಗೂ ದಿವ್ಯಾಂಗ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಹೇಗೆ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಮೂರು ರೀತಿಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರಿಲಿಮ್ಸ್, ಮೇನ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಕೆಯು ಈಗಾಗಲೇ ಪ್ರಾರಂಭವಾಗಿದ್ದು ಅಕ್ಟೋಬರ್ 28 ಕೊನೆಯದಿನವಾಗಿದೆ. ಅಭ್ಯರ್ಥಿಗಳು NICLನ ಅಧಿಕೃತ ವೆಬ್‌ಸೈಟ್ nationalinsurance.nic.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.