ISRO ದಲ್ಲಿ ವಿವಿಧ ಹುದ್ದೆಗಳ ನೇಮಕಾತಿ : ಲಕ್ಷಕ್ಕೂ ಅಧಿಕ ಸಂಬಳ ! SSLC, ITI ಪಾಸಾದವರು ಅರ್ಜಿ ಹಾಕಿ !
ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ತಾಂತ್ರಿಕ ಸಹಾಯಕ, ತಂತ್ರಜ್ಞ ಬಿ, ಕುಕ್ ಮತ್ತು ಫೈರ್‌ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ.
By Archana V Bhat | ಅರ್ಚನಾ ವಿ ಭಟ್
1 min read
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ISRO ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅಧಿಸೂಚನೆಯ ಪ್ರಕಾರ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ತಾಂತ್ರಿಕ ಸಹಾಯಕ, ತಂತ್ರಜ್ಞ ಬಿ, ಕುಕ್ ಮತ್ತು ಫೈರ್‌ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಅರ್ಜಿ ಸಲ್ಲಿಸಲು ಇಂದು ಅಕ್ಟೋಬರ್ 7 ಕೊನೆಯ ದಿನವಾಗಿದೆ. ಆದ್ದರಿಂದ ಎಸ್‌ಎಸ್‌ಎಲ್‌ಸಿ, ಐಟಿಐ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ.
ಶೈಕ್ಷಣಿಕ ಅರ್ಹತೆ
ಇಸ್ರೋ ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ/ಎಸ್‌ಎಸ್‌ಸಿ/10ನೇ ತರಗತಿ/ಐಟಿಐ ಪಾಸಾಗಿರಬೇಕು.
ವಯೋಮಿತಿ
ಇಸ್ರೋದ ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 25 ರಿಂದ ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ
ಈ ನೇಮಕಾತಿಯಲ್ಲಿ ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ₹750 ಶುಲ್ಕವನ್ನು ಪಾವತಿಸಬೇಕು ಹಾಗೂ ತಂತ್ರಜ್ಞ, ಕುಕ್, ಫೈರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ₹500 ಶುಲ್ಕವನ್ನು ಪಾವತಿಸಬೇಕು. ಲಿಖಿತ ಪರೀಕ್ಷೆಯ ನಂತರ, SC/ST/PWBD/ಮಾಜಿ ಸೈನಿಕರು ಮತ್ತು ಮಹಿಳಾ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಪೂರ್ಣ ಹಣವನ್ನು ಮರುಪಾವತಿ ಮಾಡಲಾಗುವುದು. ಇತರ ವರ್ಗಗಳ ಅಭ್ಯರ್ಥಿಗಳಿಗೆ ಹುದ್ದೆಯನ್ನು ಅವಲಂಬಿಸಿ ₹400-₹500 ಮರುಪಾವತಿಸಲಾಗುತ್ತದೆ.
ವೇತನ
ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 44,900-1,42,400, ತಂತ್ರಜ್ಞ 'ಬಿ' ಹುದ್ದೆಗಳಿಗೆ ತಿಂಗಳಿಗೆ 21,700 ರಿಂದ 69,100 ರೂ. , ಕುಕ್ ಎ ಹುದ್ದೆಗಳಿಗೆ ತಿಂಗಳಿಗೆ 19,900-63,200 ರೂ. ಮತ್ತು ಅಗ್ನಿಶಾಮಕ ಎ ಹುದ್ದೆಗಳಿಗೆ ತಿಂಗಳಿಗೆ 19,900-63,200 ರೂ. ವೇತನವನ್ನು ನೀಡಲಾಗುತ್ತದೆ. ಈ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವಿವರವಾದ ಅಧಿಕೃತ ಅಧಿಸೂಚನೆಯನ್ನು ಓದಿ.
ಅರ್ಜಿ ಸಲ್ಲಿಕೆ ಹೇಗೆ?
ಇಸ್ರೋ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ career.iprc.gov.in ಪೋರ್ಟಲ್‌ಗೆ ಹೋಗಿ. ಮುಖಪುಟದಲ್ಲಿರುವ ರಿಜಿಸ್ಟರ್ ಮೇಲೆ ಕ್ಲಿಕ್ಕಿಸಿ, ಅಗತ್ಯ ಮಾಹಿತಿಯನ್ನು ನಮೂದಿಸಿ. ನಂತರ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ. ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
Topics
ಸಂಬಂಧಿತ ಸುದ್ದಿಗಳು
job
B.Sc ಅಗ್ರಿ ಆದವರಿಗೆ ಗುಡ್ ನ್ಯೂಸ್ ! IFFCO ನಲ್ಲಿ AGT ಹುದ್ದೆಗೆ ಅರ್ಜಿ ಆಹ್ವಾನ !
job
ITBPF ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ 126 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ : SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
job
ಕೆನರಾ ಬ್ಯಾಂಕ್ ಅಪ್ರೆಂಟಿಸ್ಶಿಪ್ ನೇಮಕಾತಿ ಅರ್ಜಿ ಸಲ್ಲಿಕೆ ಪ್ರಾರಂಭ ! ಮಾಸಿಕ ಸ್ಟೈಫಂಡ್ 15000 ಕ್ಕೂ ಅಧಿಕ !
job

