ಮೆಹೆಂದಿ ಪ್ರಿಯರೇ ಎಚ್ಚರ.. ಮೆಹೆಂದಿ ಕೈಯಲ್ಲಿ ಊಟ ಮಾಡಿದ್ರೆ ದೇಹ ಸೇರುತ್ತೆ ವಿಷಕಾರಿ ಕೆಮಿಕಲ್
ಮದುವೆ, ಹಬ್ಬ ಅಥವಾ ಯಾವುದೇ ಶುಭ ಸಮಾರಂಭಗಳೆಂದರೆ ಸಾಕು ಮಹಿಳೆಯರು ಹಾಗೂ ಯುವತಿಯರು ಕೈಗಳಿಗೆ ಸುಂದರವಾದ ಮೆಹೆಂದಿ (ಮದರಂಗಿ) ಬಿಡಿಸಿಕೊಳ್ಳುವುದು ಸಾಮಾನ್ಯ.
By Meghana Pranuth | ಮೇಘನಾ ಪ್ರಣೂತ್
1 min read
ಮದುವೆ, ಹಬ್ಬ ಅಥವಾ ಯಾವುದೇ ಶುಭ ಸಮಾರಂಭಗಳೆಂದರೆ ಸಾಕು ಮಹಿಳೆಯರು ಹಾಗೂ ಯುವತಿಯರು ಕೈಗಳಿಗೆ ಸುಂದರವಾದ ಮೆಹೆಂದಿ (ಮದರಂಗಿ) ಬಿಡಿಸಿಕೊಳ್ಳುವುದು ಸಾಮಾನ್ಯ. ಆದರೆ, ಮೆಹೆಂದಿ ಹಾಕಿಕೊಂಡ ತಕ್ಷಣ ಅದೇ ಕೈಯಲ್ಲಿ ಆಹಾರ ಸೇವಿಸುವುದು ಅಥವಾ ಊಟ ಮಾಡುವುದು ನಿಮ್ಮ ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡಬಹುದು.
ಹೌದು, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಮೆಹೆಂದಿ ಕೋನ್ಗಳಲ್ಲಿ ಬಳಸಲಾಗುವ ಕೆಮಿಕಲ್ಗಳು ನಮಗರಿವಿಲ್ಲದೇ ದೇಹವನ್ನು ಸೇರಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿವೆ.
ಮೆಹೆಂದಿ ಕೈಯಿಂದ ಊಟ ಮಾಡುವುದು ಏಕೆ ಅಪಾಯಕಾರಿ?
ವಿಷಕಾರಿ ರಾಸಾಯನಿಕಗಳ ಸಮ್ಮಿಶ್ರಣ:
ಇಂದಿನ ಕೃತಕ ಮೆಹೆಂದಿ ಕೋನ್ಗಳಲ್ಲಿ ಬೇಗನೆ ಹಾಗೂ ಗಾಢವಾಗಿ ಬಣ್ಣ ಬರಲು PPD (Para-phenylenediamine), ಕೃತಕ ಬಣ್ಣಗಳು, ಸಾಲ್ವೆಂಟ್ಗಳು ಮತ್ತು ಸೀಸದಂತಹ (Lead) ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಕೈಯಿಂದ ಊಟ ಮಾಡುವಾಗ ಈ ರಾಸಾಯನಿಕಗಳು ಆಹಾರದೊಂದಿಗೆ ಕರಗಿ ಹೊಟ್ಟೆಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಜೀರ್ಣಾಂಗ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ:
ಮೆಹೆಂದಿಯಲ್ಲಿರುವ ರಾಸಾಯನಿಕ ಅಂಶಗಳು ಜಠರ ಸೇರಿದರೆ ವಾಂತಿ, ಹೊಟ್ಟೆ ನೋವು, ಅತಿಸಾರ (Diarrhea), ಹೊಟ್ಟೆಯ ಉರಿ ಹಾಗೂ ಜೀರ್ಣಕ್ರಿಯೆಯಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ.
ಅಲರ್ಜಿ ಮತ್ತು ಶ್ವಾಸಕೋಶದ ತೊಂದರೆ:
ಕೇವಲ ಹೊಟ್ಟೆಯಷ್ಟೇ ಅಲ್ಲದೆ, ಕೆಮಿಕಲ್ ಮೆಹೆಂದಿ ಚರ್ಮದ ಕಿರಿಕಿರಿ, ಕೆರೆತ, ಆಸಿಡಿಟಿ ಮತ್ತು ಕೆಲವರಲ್ಲಿ ಆಸ್ತಮಾದಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗಬಹುದು.
ಸುರಕ್ಷಿತವಾಗಿರಲು ಈ ಜಾಗರೂಕತೆ ವಹಿಸಿ:
ಮೆಹೆಂದಿ ಹಾಕಿದ ತಕ್ಷಣದ ದಿನಗಳಲ್ಲಿ ಅಥವಾ ಬಣ್ಣ ಸಂಪೂರ್ಣವಾಗಿ ಒಣಗುವವರೆಗೆ ಕೈಯಿಂದ ನೇರವಾಗಿ ಊಟ ಮಾಡುವ ಬದಲು ಚಮಚ ಅಥವಾ ಫೋರ್ಕ್ ಬಳಸಿ. ಊಟ ಮಾಡುವ ಮೊದಲು ಮೆಹೆಂದಿ ಮೇಲಿರುವ ಒಣಗಿದ ಪೊರೆಯನ್ನು ಸಂಪೂರ್ಣ ತೆಗೆದು, ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಮಾರುಕಟ್ಟೆಯ ಕೆಮಿಕಲ್ ಕೋನ್ಗಳ ಬದಲು ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಗೋರಂಟಿ ಎಲೆಗಳ ಪೇಸ್ಟ್ ಬಳಸುವುದು ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ.
Topics
ಸಂಬಂಧಿತ ಸುದ್ದಿಗಳು
lifestyle
ಕೂದಲು ಉದುರುವಿಕೆಗೆ ನಿಜವಾದ ಶತ್ರು ಯಾವುದು? ಒತ್ತಡ ಅಥವಾ ನಿದ್ರಾಹೀನತೆ ..!
lifestyle
'ಫುಡ್ ಡಿವೋರ್ಸ್': ದಂಪತಿಗಳ ನಡುವೆ ಮನೆಮಾಡುತ್ತಿರುವ ಹೊಸ ಟ್ರೆಂಡ್! ಏನಿದರ ಅರ್ಥ?
lifestyle
ನಾಳೆ ಶ್ರಾವಣ ಮೊದಲ ಸೋಮವಾರದ ಜೊತೆಗೆ ನಾಗರ ಪಂಚಮಿ ! ಪೂಜಾ ಸಮಯ, ವಿಧಾನ ತಿಳಿಯಿರಿ
lifestyle

