ಕೂದಲು ಉದುರುವಿಕೆಗೆ ನಿಜವಾದ ಶತ್ರು ಯಾವುದು? ಒತ್ತಡ ಅಥವಾ ನಿದ್ರಾಹೀನತೆ ..!
ಇತ್ತೀಚಿನ ಗಂಭೀರ ಸಮಸ್ಯೆಗಳಲ್ಲಿ ಕೂದಲು ಉದುರುವಿಕೆಯೂ ಒಂದು. ಈ ಸಮಸ್ಯೆಗೆ ಬಹು ದೊಡ್ಡ ಕಾರಣ ಒತ್ತಡ ಮತ್ತು ನಿದ್ರಾಹೀನತೆ. ಹೇಗೆ? ಇಲ್ಲಿದೆ ಓದಿ.
ಕೂದಲಿನ ಆರೈಕೆಯ ವಿಷಯ ಬಂದಾಗಲೆಲ್ಲ ಜನರು ಮಾಡುವ ಮೊದಲ ಕೆಲಸ ಅಂದ್ರೆ ವಿವಿಧ ಎಣ್ಣೆಗಳನ್ನು ಹಚ್ಚುವುದು, ಶಾಂಪೂ ಬದಲಿಸುವುದು, ಸಿರಮ್‌ಗಳ ಬಳಸುವುದು ಮುಂತಾದವುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಅಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ಬರುವ ಜಾಹಿರಾತುಗಳಿಗೆ ಮಾರು ಹೋಗಿ ಏನೇನೋ ಕೂದಲಿಗೆ ಹಚ್ಚಿಕೊಳ್ಳಲು ಮುಂದಾಗುತ್ತಾರೆ. ಆದರೆ ನಿಜವಾದ ಕಾರಣದ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಕೂದಲಿನ ಹಲವಾರು ಸಮಸ್ಯೆಗಳಿಗೆ ಜೀವನಶೈಲಿಯೇ ಕಾರಣ ಎಂದು ಇತ್ತೀಚೆಗೆ ಅಧ್ಯಯನವೊಂದು ಬಹಿರಂಗಪಡಿಸಿದೆ. ಟ್ರಿಯಾ ಆಶ್ರಯದ ಅಡಿಯಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಒತ್ತಡ ಮತ್ತು ನಿದ್ರಾಹೀನತೆ ಕೂದಲಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದಾಗಿದೆ. ಹಾಗಾದರೆ ಒತ್ತಡ ಮತ್ತು ನಿದ್ರಾಹೀನತೆ ಹೇಗೆ ಕೂದಲಿನ ಶತ್ರುಗಳಾಗಿವೆ ಎಂದು ನೋಡೋಣ.
ಒತ್ತಡದ ಪ್ರಭಾವ
ಇತ್ತೀಚಿನ ದಿನಗಳಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕೂದಲು ಉದುರುವಿಕೆಗೆ ಒತ್ತಡ ಒಂದು ಪ್ರಮುಖ ಕಾರಣವಾಗಿದೆ. ದೀರ್ಘಕಾಲದ ಒತ್ತಡ ದೇಹವನ್ನು ನಿರಂತರ ಆತಂಕಕ್ಕೆ ದೂಡುತ್ತದೆ. ಇದರಿಂದ ಹಾರ್ಮೋನ್‌ಗಳ ಮಟ್ಟದಲ್ಲಿ ಏರುಪೇರಾಗುತ್ತದೆ. ಇದೇ ಕೂದಲ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೂದಲು ನಿರ್ಜೀವವಾಗಿ ಉದುರಲು ಪ್ರಾರಂಭಿಸುತ್ತದೆ. ಉದುರಿದ ಜಾಗದಲ್ಲಿ ಹೊಸ ಕೂದಲಿನ ಬೆಳವಣಿಗೆ ನಿಧಾನವಾಗುತ್ತದೆ.
ನಿದ್ದೆಯ ಪಾತ್ರ
ನಿದ್ದೆಯ ಸಮಯದಲ್ಲಿ ದೇಹವು ತನ್ನ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ. ಜೀವಕೋಶಗಳ ನವೀಕರಣ, ಹಾರ್ಮೋನ್‌ಗಳ ನಿಯಂತ್ರಣ ಮತ್ತು ದಿನವಿಡೀ ದಣಿದ ಸ್ನಾಯುಗಳಿಗೆ ವಿಶ್ರಾಂತಿ ಇವೆಲ್ಲವುಗಳ ನಡೆಯುವುದು ನಿದ್ದೆಯ ಸಮಯದಲ್ಲಿ. ಆದರೆ ಪದೇ ಪದೇ ನಿದ್ದೆಗೆ ಅಡ್ಡಿಪಡಿಸಿದಾಗ ಈ ಚೇತರಿಕೆ ಕುಂಠಿತವಾಗುತ್ತದೆ. ಇದರ ಪರಿಣಾಮ ಕೂದಲಿನ ಮೇಲೂ ಕಂಡುಬರುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ 29.4% ರಷ್ಟು ಜನರು ಒಂದಲ್ಲಾ ಒಂದು ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಮಹಾನಗರಗಳ ಪಾಲೇ ಹೆಚ್ಚು. ಒತ್ತಡ ಮತ್ತು ನಿದ್ರಾಹೀನತೆ ಪರಸ್ಪರ ಸಂಬಂಧ ಹೊಂದಿದೆ.
ಪರಿಹಾರವೇನು?
ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ. ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ನಿದ್ದೆ ಮಾಡಿ. ಸಾಕಷ್ಟು ನೀರು ಕುಡಿಯಿರಿ. ನಿಯಮಿತ ವ್ಯಾಯಾಮ ಮಾಡುವುದರಿಂದ ದೇಹವು ಚೈತನ್ಯದಿಂದ ಕೂಡಿರುತ್ತದೆ. ಇದು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ನಿದ್ರಾಹೀನತೆಗೆ ಗ್ಯಾಜೆಟ್‌ಗಳು ಒಂದು ಕಾರಣ. ಹಾಗಾಗಿ ಮಲಗುವ ಸಮಯದಲ್ಲಿ ಗ್ಯಾಜೆಟ್ ಬಳಕೆ ಕಡಿಮೆ ಮಾಡಿ. ಕೂದಲಿನ ಪೋಷಣೆಗೆ ಅಗತ್ಯವಿರುವ ಆಹಾರ ಸೇವಿಸಿ. ಅತಿಯಾಗಿ ಕೂದಲು ಉದುರುತ್ತಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.
Topics
ಸಂಬಂಧಿತ ಸುದ್ದಿಗಳು
lifestyle
'ಫುಡ್ ಡಿವೋರ್ಸ್': ದಂಪತಿಗಳ ನಡುವೆ ಮನೆಮಾಡುತ್ತಿರುವ ಹೊಸ ಟ್ರೆಂಡ್! ಏನಿದರ ಅರ್ಥ?
lifestyle
ನಾಳೆ ಶ್ರಾವಣ ಮೊದಲ ಸೋಮವಾರದ ಜೊತೆಗೆ ನಾಗರ ಪಂಚಮಿ ! ಪೂಜಾ ಸಮಯ, ವಿಧಾನ ತಿಳಿಯಿರಿ
lifestyle
ತ್ವಚೆಯ ಆರೈಕೆಗೆ ದಿವ್ಯೌಷಧಿ : ತೆಂಗಿನ ಎಣ್ಣೆಯಲ್ಲಿದೆ ಹಲವು ಪ್ರಯೋಜನಗಳು
lifestyle

