ಹಸಿರಾಗಿರಬೇಕಾದ ತುಳಸಿ ಹಳದಿಯಾಗುತ್ತಿದ್ಯಾ.. ತುಳಸಿಯನ್ನು ರಕ್ಷಿಸಲು ಹೀಗೆ ಮಾಡಿ
ಹಿಂದೂ ಸಂಪ್ರದಾಯದಲ್ಲಿ ತುಳಸಿಯನ್ನು ಲಕ್ಷ್ಮಿ ದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ. ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲಿರುವ ತುಳಸಿ ಗಿಡವು ವಾಸ್ತು ಪ್ರಕಾರ ಧನಾತ್ಮಕ ಶಕ್ತಿಯನ್ನು ನೀಡುತ್ತದೆ.
By Meghana Pranuth | ಮೇಘನಾ ಪ್ರಣೂತ್
1 min read
ಹಿಂದೂ ಸಂಪ್ರದಾಯದಲ್ಲಿ ತುಳಸಿಯನ್ನು ಲಕ್ಷ್ಮಿ ದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ. ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲಿರುವ ತುಳಸಿ ಗಿಡವು ವಾಸ್ತು ಪ್ರಕಾರ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಆದರೆ ತುಳಸಿಯ ಪಕ್ಕ ಕೆಲ ನಿರ್ದಿಷ್ಟ ಗಿಡಗಳನ್ನು ನೆಡುವುದರಿಂದ ಹಾಗೂ ಕೀಟನಾಶಕವಾಗಿ ಉಪ್ಪು ಬಳಸುವುದರಿಂದ ಗಿಡ ಒಣಗಿ ಹೋಗುವ ಅಪಾಯವಿರುತ್ತದೆ.
ಕೀಟ ಅಥವಾ ಇರುವೆಗಳ ಹಾವಳಿ ತಪ್ಪಿಸಲು ತುಳಸಿ ಕುಂಡಕ್ಕೆ ಉಪ್ಪು ಹಾಕುವುದು ಅತ್ಯಂತ ಹಾನಿಕಾರಕ. ಉಪ್ಪು ಮಣ್ಣಿಗೆ ಸೇರಿದಾಗ 'ಆಸ್ಮೋಸಿಸ್' ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಗಿಡವು ನೀರನ್ನು ಹೀರಿಕೊಳ್ಳುವ ಬದಲು, ಗಿಡದ ದೇಹದಲ್ಲಿರುವ ತೇವಾಂಶವೇ ಹೊರಬರುತ್ತದೆ. ಪರಿಣಾಮವಾಗಿ ಗಿಡವು ನಿರ್ಜಲೀಕರಣಕ್ಕೆ ಒಳಗಾಗಿ, ಎಲೆಗಳು ಹಳದಿಯಾಗಿ ಬೇರು ಕೊಳೆತು ಒಣಗಿಹೋಗುತ್ತದೆ.
ರಾಸಾಯನಿಕ ಅಥವಾ ಉಪ್ಪಿನ ಬದಲಾಗಿ 1 ಲೀಟರ್ ನೀರಿಗೆ ಸ್ವಲ್ಪ ಅರಿಶಿನ ಅಥವಾ ಬೇವಿನ ಎಣ್ಣೆ ಬೆರೆಸಿ ಎಲೆಗಳ ಮೇಲೆ ಸಿಂಪಡಿಸಬೇಕು. ಕುಂಡದಲ್ಲಿ ನೀರು ನಿಲ್ಲದಂತೆ ಉತ್ತಮ ಮಣ್ಣಿನ ಮಿಶ್ರಣ ಬಳಸುವುದರಿಂದ ತುಳಸಿಯನ್ನು ಕೀಟಗಳಿಂದ ರಕ್ಷಿಸಬಹುದು.
ತುಳಸಿ ಪಕ್ಕ ಪರಿಮಳಯುಕ್ತ ಹೂವಿನ ಗಿಡಗಳು ತುಳಸಿಯೊಂದಿಗೆ ಉತ್ತಮವಾಗಿ ಬೆಳೆಯುತ್ತವೆ. ತುಳಸಿ ಹಾಗೂ ಶಮಿ ಗಿಡಗಳನ್ನು ಪಕ್ಕಪಕ್ಕದಲ್ಲಿಡುವುದರಿಂದ ಶನಿ ದೋಷ ಹಾಗೂ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.
ತುಳಸಿ ಪಕ್ಕ ಇಡಬಾರದ ಗಿಡಗಳು
ಮುಳ್ಳಿನ ಗಿಡಗಳು (ಕಳ್ಳಿ, ಅಲೋವೇರಾ): ಕಳ್ಳಿ ಹಾಗೂ ಇತರ ಮುಳ್ಳಿನ ಗಿಡಗಳು ಒಣ ಹವಾಮಾನದಲ್ಲಿ ಬೆಳೆಯುವಂತಹವು. ತುಳಸಿಗೆ ಹದವಾದ ತೇವಾಂಶ ಬೇಕು. ಇವುಗಳನ್ನು ಪಕ್ಕದಲ್ಲಿಟ್ಟರೆ ಮನೆಯಲ್ಲಿ ಆರ್ಥಿಕ ನಷ್ಟ ಹಾಗೂ ಜಗಳಗಳು ಹೆಚ್ಚಾಗುತ್ತವೆ.
ಹಾಲುಕಳೆ/ಯಕ್ಕದ ಗಿಡ: ಹಾಲುಕಳೆ ಗಿಡಗಳ ಬೇರುಗಳು ಮಣ್ಣಿನಲ್ಲಿ ತೀವ್ರವಾಗಿ ಹರಡಿ ತುಳಸಿಗೆ ಸಿಗಬೇಕಾದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಇವುಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳು ತುಳಸಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ.
ರಬ್ಬರ್ ಗಿಡ ಮತ್ತು ಕ್ರೋಟಾನ್‌ಗಳು: ತುಳಸಿಗೆ ದಿನಕ್ಕೆ 5 ರಿಂದ 6 ಗಂಟೆ ನೇರ ಸೂರ್ಯನ ಬೆಳಕು ಬೇಕು. ದೊಡ್ಡ ಎಲೆಗಳ ರಬ್ಬರ್ ಗಿಡ ಹಾಗೂ ಕ್ರೋಟಾನ್‌ಗಳು ತುಳಸಿಯ ಮೇಲೆ ನೆರಳು ಉಂಟುಮಾಡಿ, ದ್ಯುತಿಸಂಶ್ಲೇಷಣೆ ಪ್ರಕ್ರಿಯೆಗೆ ಅಡ್ಡಿಯಾಗುತ್ತವೆ.
ಬೋನ್ಸಾಯ್ ಗಿಡಗಳು: ಕೃತಕವಾಗಿ ಬೆಳವಣಿಗೆಯನ್ನು ತಡೆದು ಬೆಳೆಸುವ ಬೋನ್ಸಾಯ್ ಗಿಡಗಳನ್ನು ತುಳಸಿ ಪಕ್ಕ ಇಟ್ಟರೆ ಮನೆಯ ಪ್ರಗತಿ ನಿಧಾನಗೊಳ್ಳುತ್ತದೆ .
Topics
ಸಂಬಂಧಿತ ಸುದ್ದಿಗಳು
lifestyle
ಸಂಧಿವಾತಕ್ಕೆ ಬೆಸ್ಟ್ ಮನೆ ಮದ್ದುಗಳು ! ಇವುಗಳನ್ನು ಪ್ರತಿದಿನ ತಪ್ಪದೇ ತಿನ್ನಿ !
lifestyle
ಆರೋಗ್ಯಕ್ಕೆ ಸಲಾಡ್ ಬೆಸ್ಟ್ ಅಂತ ಅದನ್ನೇ ಹೆಚ್ಚಾಗಿ ತಿಂತೀರಾ ? ಎಚ್ಚರ, ಈ ಸಮಸ್ಯೆ ನಿಮ್ಮನ್ನು ಕಾಡಬಹುದು !
lifestyle
ಹಠಮಾರಿ ಶರ್ಟ್ ಕಾಲರ್ ಕೊಳೆಯನ್ನು ನಿಮಿಷಗಳಲ್ಲಿ ಹೋಗಲಾಡಿಸಲು ಮ್ಯಾಜಿಕ್ ಮನೆಮದ್ದುಇಲ್ಲಿದೆ
lifestyle

