ಆಗಸ್ಟ್‌ 2ರಂದು ಕರಾವಳಿ ಭಾಗದಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ನಾಳೆ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
COASTAL RAIN alrt
COASTAL RAIN alrt

ಕಳೆದೊಂದು ವಾರದಿಂದಲೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಾರೀ ಮಳೆ ಸುರಿಯುತ್ತಿದೆ. ಅಗಸ್ಟ್‌ 2ರವರೆಗೆ ಕರಾವಳಿ ಭಾಗದಲ್ಲಿ ಕಳೆದೊಂದು ವಾರದಿಂದಲೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಾರೀ ಮಳೆ ಸುರಿಯುತ್ತಿದೆ. ಆಗಸ್ಟ್‌ 2ರವರೆಗೆ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಆಗಸ್ಟ್‌ 1 ಮತ್ತು 2ರಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿಯಾದ ಭಾರೀ ಮಳೆಯಾಗಲಿದ್ದು ಭಾರತೀಯ ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಅಂಗನವಾಡಿಯಿಂದ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕರಾವಳಿ ಮಾತ್ರವಲ್ಲದೇ ಮಲೆನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿಯೂ ಭಾರತಕ್ಕೆ ಮಳೆಯ ಕೊರತೆ ಎದುರಾಗಲಿದೆಯಂತೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಮ್‌ಡಿ ತಿಳಿಸಿದೆ.

ಮುಂಗಾರು ಆರಂಭದಿಂದಲೂ ಮಳೆ ಕೊರತೆ ಎದುರಾಗಿದ್ದರೂ ಕೂಡ, ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಅಗಸ್ಟ್‌ ಮೊದಲ ವಾರ ಹೊರತು ಪಡಿಸಿದ್ರೆ ಮುಂದಿನ ಎರಡು ತಿಂಗಳು ಮಳೆಯ ಅಭಾವ ಎದುರಾಗುವುದು ಖಚಿತ. ಜೂನ್‌ ತಿಂಗಳಿನಿಂದ ಹಿಡಿದು ಸೆಪ್ಟೆಂಬರ್‌ ತಿಂಗಳವರೆಗಿನ ಮಾನ್ಸೂನ್‌ ದ್ವಿತಿಯಾರ್ಧದಲ್ಲಿ ಭಾರತದಲ್ಲಿ ಮಳೆ ಶೇಕಡಾ 94ಕ್ಕಿಂತಲೂ ಕೊರತೆ ಉಂಟಾಗುವ ಸಾಧ್ಯತೆಯಿದೆ.

1971ರಿಂದ 2020ರ ಹವಾಮಾನ ದಾಖಲೆಯನ್ನು ಆಧರಿಸಿದ ಆಗಸ್ಟ್-ಸೆಪ್ಟೆಂಬರ್ ವಾರ್ಷಿಕವಾಗಿ 422.8 ಮಿ.ಮೀ. ಆಗಿದೆ.ಈ ಬಾರಿ ಜೂನ್‌ ತಿಂಗಳಿನಲ್ಲಿ ಮಳೆಯ ಪ್ರಮಾಣ ಶೇಕಡಾ 35.4% ಕಡಿಮೆಯಾಗಿದ್ದು, ಜುಲೈನಲ್ಲಿ ಸಾಮಾನ್ಯಕ್ಕಿಂತ 1% ರಷ್ಟು ಹೆಚ್ಚಾಗಿತ್ತು. ಜುಲೈನಲ್ಲಿ ದೇಶವು ಸಾಮಾನ್ಯಕ್ಕಿಂತ 283.3 ಮಿ.ಮೀ. ಹೆಚ್ಚು ಮಳೆಯನ್ನು ಕಂಡಿದೆ. ಆದರೆ ಐಎಂಡಿ ಈ ತಿಂಗಳ ಮಳೆಗಿಂತ ಕಡಿಮೆ ಮಳೆಯಾಗಿದೆ ಎಂದು ಮುನ್ಸೂಚನೆ ನೀಡಿದ್ದರೂ ಸಹ, ಸಾಮಾನ್ಯಕ್ಕಿಂತ 280.5 ಮಿ.ಮೀ. ಹೆಚ್ಚು ಮಳೆಯಾಗಿದೆ. ಮುಂದಿನ ಎರಡು ತಿಂಗಳ ಕಾಲ ಮಳೆ ಕೊರತೆ ಎದುರಾದ್ರೆ ಅನ್ನದಾತರು ಸಂಕಷ್ಟಕ್ಕೆ ಸಿಲುಕುವುದು ಖಚಿತ.

Topics

Related News