ಭಾರತದ 14 ಸಿಎಂ, 326 ಸಂಸದರ ವಿರುದ್ದ ಕ್ರಿಮಿನಲ್ ಕೇಸ್ : ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಕೆ
ಅತೀ ಹೆಚ್ಚು ಕ್ರಿಮಿನಲ್ ಪ್ರಕರಣ ಹೊಂದಿರುವ ಮುಖ್ಯಮಂತ್ರಿಗಳ ಪೈಕಿ ತೆಲಂಗಾಣದ ಮುಖ್ಯಮಂತ್ರಿ ಅನುಮುಲ ರೇವಂತ್ ರೆಡ್ಡಿ ಮೊದಲ ಸ್ಥಾನದಲ್ಲಿದ್ದಾರೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ನವದೆಹಲಿ : ಭಾರತದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ವರದಿಯಂದು ಭಾರತೀಯರನ್ನು ಬೆಚ್ಚಿ ಬೀಳಿಸಿದೆ. ದೇಶದಲಿರುವ 326 ಸಂಸದರು ಹಾಗೂ 14 ಮುಖ್ಯಮಂತ್ರಿಗಳು ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ.
ಅದ್ರಲ್ಲೂ ಅತೀ ಹೆಚ್ಚು ಕ್ರಿಮಿನಲ್ ಪ್ರಕರಣ ಹೊಂದಿರುವ ಮುಖ್ಯಮಂತ್ರಿಗಳ ಪೈಕಿ ತೆಲಂಗಾಣದ ಮುಖ್ಯಮಂತ್ರಿ ಅನುಮುಲ ರೇವಂತ್ ರೆಡ್ಡಿ ಮೊದಲ ಸ್ಥಾನದಲ್ಲಿದ್ದಾರೆ. ರೇವಂತ್ ರೆಡ್ಡಿ ವಿರುದ್ದ ಒಟ್ಟು 89 ಕ್ರಿಮಿನಲ್ ಪ್ರಕರಣಗಳಿವೆ.
ಜನಪ್ರತಿನಿಧಿಗಳ ವಿರುದ್ದದ ಕ್ರಿಮಿನಲ್ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ನೇಮಿಸಿದ್ದ ಆಮಿಷಸ್ ಕ್ಯೂರಿ ಹಾಗೂ ಹಿರಿಯ ವಕೀಲರಾಗಿರುವ ವಿಜಯ್ ಹನ್ಸಾರಿಯಾ ಅವರು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಲೋಕಸಭೆಯ ಸುಮಾರು ಅರ್ಧದಷ್ಟು ಮತ್ತು ರಾಜ್ಯಸಭೆಯ ಮೂರನೇ ಒಂದು ಭಾಗದಷ್ಟು ಸದಸ್ಯರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನೀಡಿರುವ ಅಂಕಿಅಂಶಗಳ ಪ್ರಕಾರ, ಲೋಕಸಭೆಯಲ್ಲಿ ಒಟ್ಟು ಸದಸ್ಯರ ಪೈಕಿ 251, ರಾಜ್ಯಸಭೆಯ 233 ಜನಪ್ರತಿನಿಧಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಅದರಲ್ಲಿಯೂ ಲೋಕಸಭೆಯ 170 ಮಂದಿ ಸಂಸದರು ಹಾಗೂ ರಾಜ್ಯ ಸಭೆಯ 40 ಸದಸ್ಯರ ವಿರುದ್ದ ಗಂಭೀರ ಅಪರಾಧ ಪ್ರಕರಣಗಳಿವೆ. ದೇಶದಲ್ಲಿ ಒಟ್ಟು ಸಂಸದರು, ಶಾಸಕರು, ಮಾಜಿ ಜನಪ್ರತಿನಿಧಿಗಳ ವಿರುದ್ದ ಒಟ್ಟು 4,192 ಪ್ರಕರಣ ವಿಚಾರಣೆಗೆ ಬಾಕಿ ಉಳಿದಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ದ ಅತೀ ಹೆಚ್ಚು ಕ್ರಿಮಿನಲ್ ಪ್ರಕರಣ ದಾಖಲಾಗಿದ್ರೆ, ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ದ ಒಟ್ಟು 19 ಕ್ರಿಮಿನಲ್ ಪ್ರಕರಣಗಳಿವೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಜನಪ್ರತಿನಿಧಿಗಳ ವಿರುದ್ದದ ಪ್ರಕರವನ್ನು ತ್ವರಿತ ವಿಚಾರಣೆ ನಡೆಸುತ್ತಿದ್ದರೂ ಕೂಡ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.
Topics

