ಕೇರಳಂ ಆಗಿ ಬದಲಾಯ್ತು ದೇವರ ನಾಡು : ನನಸಾಯ್ತು ಕೇರಳಿಗರ 7 ದಶಕಗಳ ಕನಸು

ರಾಜ್ಯಗಳ ಹೆಸರಿನ ಬದಲಾವಣ ನಿಯಂತ್ರಿಸುವ ಸಂವಿಧಾನದ 3ನೇ ವಿಧಿ ಪ್ರಕಾರ, ಸಂವಿಧಾನದ ಮೊದಲ ವೇಳಾಪಟ್ಟಿಯಲ್ಲಿೇ ಕೇರಳ ಹೆಸರನ್ನು ಕೇರಳಂ ಎಂದು ಬದಲಾಯಿಸಿ ತಿದ್ದುಪಡಿ ಮಾಡಲಾಗುತ್ತದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
kerala name change devara nadu keralam
kerala name change devara nadu keralam

ನವದೆಹಲಿ : ದೇವರನಾಡು ಎಂದೇ ಖ್ಯಾತಿ ಪಡೆದಿರುವ ಕೇರಳ ಇದೀಗ ಕೇರಳಂ ರಾಜ್ಯವಾಗಿ ಬದಲಾಗಿದೆ. ಕಳೆದ 7 ದಶಕಗಳಿಂದಲೂ ಕೇರಳ ರಾಜ್ಯಕ್ಕೆ ಕೇರಳಂ ಎಂದು ನಾಮಕರಣ ಮಾಡುವ ಕೇರಳಿಗರ ಕನಸು ಕೊನೆಗೂ ನನಸಾಗಿದೆ. ಕೇರಳಂ ಎಂದು ಅಧಿಕೃತವಾಗಿ ನಾಮಕರಣ ಮಾಡುವ ಮಸೂದೆ ಲೋಕಸಭೆ, ರಾಜ್ಯಸಭೆ ಎರಡರಲ್ಲೂ ಅಂಗೀಕಾರವಾಗಿದೆ. ಇದರಿಂದಾಗಿ ಕೇರಳದ ಹೆಸರು ಇನ್ಮುಂದೆ ಅಧಿಕೃತವಾಗಿ ಕೇರಳಂ ಎಂದು ಕರೆಯಲಾಗುತ್ತದೆ.

ಮಲಯಾಲಂನಲ್ಲಿ ಕೇರಳ ರಾಜ್ಯವನ್ನು ಕೇರಳಂ ಎಂದು ಕರೆಯಲಾಗುತ್ತದೆ. ಹೀಗಾಗಿ ತಮ್ಮ ರಾಜ್ಯದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡುವಂತೆ ಮಾಜಿ ಸಿಎಂ ಪಿಣರಾಯಿ ವಿಜಯನ್‌ ಅವರ ನೇತೃತ್ವದ ಸರಕಾರ ಕೇರಳ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದರು.

ಕೇರಳ ಸರಕಾರ ಸಲ್ಲಿಸಿದ್ದ ವಿದೇಯಕ ಇದೀಗ ಕಾನೂನು ಆಗಿ ಮಾರ್ಪಟ್ಟಿದೆ. ಈ ಮೂಲಕ ಬ್ರಿಟಿಷ್‌ ವಸಹಾತುಶಾಹಿ ಸ್ಪರ್ಶದಿಂದ ಕೂಡಿದ್ದ ಕೇರಳ ಹೆಸರು ಮಲಯಾಳಿ ಮೂಲದ ಕೇರಳಂ ಹೆಸರಿಗೆ ಮರುನಾಮಕರಣಗೊಂಡಿದೆ.

ಭಾರತದಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಹಲವು ರಾಜ್ಯಗಳು ತಮ್ಮ ಹೆಸರುಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದವು. ಆದರೆ ಕೇರಳ ಮಾತ್ರವೇ ಹಾಗೇ ಉಳಿದುಕೊಂಡಿತ್ತು. ಕಳೆದ 7 ದಶಕಗಳಿಗೂ ಅಧಿಕ ಕಾಲದಿಂದಲೂ ಕೇರಳಂ ರಾಜ್ಯವಾಗಿ ದೇವರನಾಡಿನ ಹೆಸರು ಬದಲಾವಣೆಗೆ ಕಸರತ್ತುಗಳು ನಡೆಯುತ್ತಲೇ ಇತ್ತು.

ಇದೀಗ ಕೇಂದ್ರ ಸರಕಾರ ಕೇರಳಿಗರ ಬೇಡಿಕೆಗೆ ಮಣಿದಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಕೇರಳಂ ಹೆಸರು ಬದಲಾಯಿಸುವ ವಿದೇಯಕಕ್ಕೆ ಒಪ್ಪಿಗೆ ಸಿಕ್ಕಿದೆ. ಮಾತ್ರವಲ್ಲದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಕೇರಳಂ ವಿದೇಯಕಕ್ಕೆ ಅಂಕಿತ ಹಾಕಿದ್ದಾರೆ.

ರಾಜ್ಯಗಳ ಹೆಸರಿನ ಬದಲಾವಣ ನಿಯಂತ್ರಿಸುವ ಸಂವಿಧಾನದ 3ನೇ ವಿಧಿ ಪ್ರಕಾರ, ಸಂವಿಧಾನದ ಮೊದಲ ವೇಳಾಪಟ್ಟಿಯಲ್ಲಿೇ ಕೇರಳ ಹೆಸರನ್ನು ಕೇರಳಂ ಎಂದು ಬದಲಾಯಿಸಿ ತಿದ್ದುಪಡಿ ಮಾಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪ - ಎನ್‌ಡಿಎ ಸರಕಾರ ಕೇರಳ ರಾಜ್ಯವನ್ನು ಕೇರಳಂ ಎಂದು ನಾಮಕರಣ ಮಾಡುವ ಮೂಲಕ ಮಲಯಾಳಿಗಳ ಗುರುತು ಹಾಗೂ ಸಂಸ್ಕೃತಿಯನ್ನು ಗೌರವಿಸಿದೆ. ಇದು ವಿಶ್ವದಾದ್ಯಂತ ನೆಲೆಸಿರುವ ಮಲಯಾಳಿಗೆ ಸಂತಸ ತಂದಿದೆ ಎಂದು ಕೇಂದ್ರ ಸಚಿವ ಸುರೇಶ್‌ ಗೋಪಿ ಅವರು ತಿಳಿಸಿದ್ದಾರೆ.

Topics

ಸಂಬಂಧಿತ ಸುದ್ದಿಗಳು