ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್ : ಈ ಭಾನುವಾರ ಸೆಪ್ಟೆಂಬರ್ 27ರಂದು ದೇಶಾದ್ಯಂತ ಬ್ಯಾಂಕ್‌ಗಳು ಓಪನ್

ಮುಂಬರುವ ಸೆಪ್ಟೆಂಬರ್ 28ರಿಂದ ಸೆಪ್ಟೆಂಬರ್ 30ರವರೆಗೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ದೇಶಾದ್ಯಂತ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ.

By ರಶ್ಮಿ ಎಸ್. | Rashmi S

1 min read

WhatsAppPost
banks-to-remain-open-on-sunday-september-27-rbi-approval
banks-to-remain-open-on-sunday-september-27-rbi-approval

ಮುಂಬರುವ ಸೆಪ್ಟೆಂಬರ್ 28ರಿಂದ ಸೆಪ್ಟೆಂಬರ್ 30ರವರೆಗೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ದೇಶಾದ್ಯಂತ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಇದಕ್ಕೆ ಮುನ್ನ ಸೆಪ್ಟೆಂಬರ್ 26 ನಾಲ್ಕನೇ ಶನಿವಾರದ ರಜೆಯಾಗಿದ್ದು, ಸೆಪ್ಟೆಂಬರ್ 27 ಭಾನುವಾರದ ಸಾಮಾನ್ಯ ರಜೆಯ ದಿನವಾಗಿದೆ. ಹೀಗಾಗಿ, ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಹತ್ವದ ನಿರ್ಧಾರ ಕೈಗೊಂಡಿವೆ.

ಗ್ರಾಹಕರ ಹಿತದೃಷ್ಟಿಯಿಂದ ಸೆಪ್ಟೆಂಬರ್ 27ರ ಭಾನುವಾರದಂದು ದೇಶದ ಎಲ್ಲಾ ಬ್ಯಾಂಕ್‌ಗಳ ಶಾಖೆಗಳು, ಕಚೇರಿಗಳು ಹಾಗೂ ಕರೆನ್ಸಿ ಚೆಸ್ಟ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆರ್​ಬಿಐ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಅಂದು ಸಾರ್ವಜನಿಕರಿಗೆ ಸೇವೆ ಒದಗಿಸಲಿವೆ. ಸತತ ರಜೆಗಳಿಂದಾಗಿ ಚೆಕ್ ಕ್ಲಿಯರೆನ್ಸ್, ನಗದು ಜಮೆ ಮತ್ತು ದಾಖಲೆ ಸಲ್ಲಿಕೆಯಂತಹ ತುರ್ತು ಕೆಲಸಗಳು ಬಾಕಿ ಉಳಿಯಬಾರದು ಎಂಬ ಕಾರಣಕ್ಕೆ ಈ ವಿಶೇಷ ಕ್ರಮ ಕೈಗೊಳ್ಳಲಾಗಿದೆ.

ಮತ್ತೊಂದೆಡೆ, ಬ್ಯಾಂಕ್ ನೌಕರರ ಒಕ್ಕೂಟವಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್, ನೌಕರರಿಗೆ ವಾರದಲ್ಲಿ ಎರಡು ದಿನ ರಜೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಮುಷ್ಕರಕ್ಕೆ ಮುಂದಾಗಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗಳು ಮುಷ್ಕರ ಹಿಂಪಡೆಯುವಂತೆ ಒಕ್ಕೂಟಕ್ಕೆ ಮನವಿ ಮಾಡಿದ್ದು, ಸರ್ಕಾರದಿಂದ ಸೂಕ್ತ ಭರವಸೆ ಸಿಕ್ಕರೆ ಪ್ರತಿಭಟನೆ ಕೈಬಿಡುವುದಾಗಿ ನೌಕರರ ಸಂಘಟನೆ ತಿಳಿಸಿದೆ. ಆದಾಗ್ಯೂ, ಭಾನುವಾರ ಬ್ಯಾಂಕ್ ವ್ಯವಹಾರ ನಡೆಸಲು ಇಚ್ಛಿಸುವ ಗ್ರಾಹಕರು ತಮ್ಮ ಸ್ಥಳೀಯ ಶಾಖೆಯ ಕೆಲಸದ ಸಮಯವನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು ಉತ್ತಮ.

Topics

ಸಂಬಂಧಿತ ಸುದ್ದಿಗಳು