indiaಪ್ರಮುಖ ಸುದ್ದಿಗಳು

ಫ್ಲೈದುಬೈ ವಿಮಾನ ದಾಳಿ : ಭಾರತೀಯ ಫೈಲೆಟ್‌ ಸ್ಮಿತ್‌ ಮಚ್ಚರ್‌ ಗುಣಗಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್‌ ಮಚ್ಚರ್‌ ಅವರ ಕುಟುಂಬಸ್ಥರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಮಾತನಾಡಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Flydubai mid-air attack PM Modi speaks to injured pilot Smit Machchhar
Flydubai mid-air attack PM Modi speaks to injured pilot Smit Machchhar

ನವದೆಹಲಿ : ಫ್ಲೈದುಬೈ ವಿಮಾನದ (Flydubai Flight) ಕಾಕ್‌ಪಿಟ್‌ನಲ್ಲಿ ನಡೆದ ಹಲ್ಲೆಯ ನಡುವಲ್ಲೇ ಜೀವದ ಹಂಗು ತೊರೆದು ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಫೈಲೆಟ್‌ ಸ್ಮಿತ್‌ ಮಚ್ಚರ್‌ (Smit Machchhar)ಅವರ ಧೈರ್ಯ, ಸಾಹಸವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾದಿದ್ದಾರೆ.

ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್‌ ಮಚ್ಚರ್‌ ಅವರ ಕುಟುಂಬಸ್ಥರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಮಾತನಾಡಿದ್ದಾರೆ. ಸ್ಮಿತ್‌ ಮಚ್ಚರ್‌ ಅವರ ಆರೋಗ್ಯವನ್ನು ವಿಚಾರಿಸಿ, ಅವರ ಸಾಹಸವನ್ನು ಕೊಂಡಾಡಿದ್ದಾರೆ.

ದುಬೈನಿಂದ ಇಸ್ರೇಲ್‌ನ ಟೆಲ್‌ ಅವೀವ್‌ ಕಡೆಗೆ ಫ್ಲೈದುಬೈ FZ1073 ಬೋಯಿಂಗ್ 737 ವಿಮಾನ ಪ್ರಯಾಣಿಸುತ್ತಿತ್ತು. ಈ ವೇಳೆಯಲ್ಲಿ ಭಾರತೀಯ ಫೈಲೆಟ್‌ ಸ್ಮಿತ್‌ ಮಚ್ಚರ್‌ ಮೇಲೆ ಸಹ ಫೈಲೆಟ್‌ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ.

ಗಂಭೀರವಾಗಿ ಗಾಯಗೊಂಡಿದ್ದರೂ ಕೂಡ ಸ್ಮಿತ್‌ ಮಚ್ಚರ್‌, ಪ್ರಯಾಣಿಕರ ಸಹಕಾರದೊಂದಿಗೆ ವಿಮಾನವನ್ನು ಸೇಪ್‌ ಲ್ಯಾಂಡ್‌ ಮಾಡುವ ಮೂಲಕ 174ಕ್ಕೂ ಅಧಿಕ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ. ಸದ್ಯ ಸ್ಮಿತ್‌ ಮಚ್ಚರ್‌ ಅವರ ಸಾಹಸದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗುಣಗಾನವೇ ನಡೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಓರ್ವ ನಿಜವಾದ ಹೀರೋ, ಅತ್ಯಂತ ಅಪಾಯಕಾರಿಯಾಗಿರುವ ಸ್ಥಿತಿಯಲ್ಲಿಯೂ ಅವರು ತೋರಿದ ಧೈರ್ಯ, ದೃಢ ಸಂಕಲ್ಪ ಇಂದು ನೂರಾರು ಜನರ ಜೀವವನ್ನು ಉಳಿಸಿದೆ. ದೊಡ್ಡ ದುರಂತವೊಂದನ್ನು ಸ್ಮಿತ್‌ ಮಚ್ಚರ್‌ ತಪ್ಪಿಸಿದ್ದಾರೆ ಎಂದಿದ್ದಾರೆ.

ಸೌದಿ ಅರೇಬಿಯಾದ ತಬುಕ್‌ ನಗರದಲ್ಲಿರುವ ಆಸ್ಪತ್ರೆಯಲ್ಲಿ ಸದ್ಯ ಸ್ಮಿತ್‌ ಮಚ್ಚರ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸ್ಮಿತ್‌ ಮಚ್ಚರ್‌ ಅವರ ತಂಡ ಭೂಪೇಂದ್ರ ಭಾಯ್‌, ತಾಯಿ ಗೀತಾ ಬೆಹನ್‌ ಹಾಗೂ ಪತ್ನಿ ಸೋನಲ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಾತನಾಡಿದ್ದರು. ಸರಕಾರದ ವತಿಯಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸೇರಿದಂತೆ ವಿಶ್ವದ ಹಲವು ನಾಯಕರು ಸ್ಮಿತ್‌ ಮಚ್ಚರ್‌ ಅವರ ಸಾಹಸವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಭಾರತೀಯರ ಶೌರ್ಯ ಇಂದು ಜಗತ್ತಿಗೆ ಹೆಮ್ಮೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

Topics

ಸಂಬಂಧಿತ ಸುದ್ದಿಗಳು